ಕೆ.ಆರ್.ಪೇಟೆ: ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ತಂಬಾಕು ಸೇವನೆ ಮಾರಕವಾಗಿದ್ದು ಯುವಜನರು ಹಾಗೂ ವಿದ್ಯಾರ್ಥಿಗಳು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿರಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಎಚ್.ಓಂಕಾರಮೂರ್ತಿ ತಿಳಿಸಿದರು.
ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತುಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ದಾಸರನ್ನಾಗಿಸುತ್ತದೆ: ಯುವಜನತೆ ಇಂದು ಕ್ಷಣಿಕ ಸುಖದ ಆಸೆಗೆ ಒಳಗಾಗಿ ತಂಬಾಕು ಹಾಗೂ ಮಾದಕ ವಸ್ತುಗಳ ದಾಸರಾಗಿ ತಮ್ಮ ಅಮೂಲ್ಯವಾದಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕುಉತ್ಪನ್ನಗಳಲ್ಲಿ ರುವ ನಿಕೋಟಿನ್ ಎಂಬ ವಿಷಕಾರಿ ಅಂಶಯುವ ಜನರನ್ನು ತಂಬಾಕು ಉತ್ಪನ್ನಗಳ ದಾಸರನ್ನಾಗಿ ಮಾಡುತ್ತಿದೆ ಎಂದರು.
ಪ್ರೇರೇಪಣೆ: ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್. ರವಿ ಮಾತನಾಡಿ, ತಂಬಾಕು ಬಳಕೆ ಯುವಜನರನ್ನುಮೃಗಗಳಂತೆ ಮಾಡುವುದಲ್ಲದೇ ಕಳ್ಳತನ ಸೇರಿ ಸಮಾಜ ಘಾತುಕ ಕೆಲಸಗಳಿಗೆ ಪ್ರೇರೇಪಿಸಿ ಸಮಾಜವನ್ನೇ ನಾಶ ಪಡಿಸುವ ಕೆಲಸಕ್ಕೆ ಪ್ರೇರೇಪಣೆ ನೀಡುತ್ತದೆ ಎಂದರು.
ಸರ್ವನಾಶ: ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಹಾಗೂ ಅಪರ ಸಿವಿಲ್ ನ್ಯಾಯಾಧೀಶರಾದ ಆರ್.ಶಕುಂತಲಾ ಮಾತನಾಡಿ, ಬೀಡಿ, ಸಿಗರೇಟು, ಹೊಗೆಸೊಪ್ಪು, ಗುಟ್ಕಾ ಸೇರಿ ಇತರೆ ತಂಬಾಕು ವಸ್ತು, ಚರಸ್, ಅಫೀಮು ಸೇರಿದಂತಹ ಮಾದಕ ವಸ್ತುಗಳು ಮಾನವ ಕುಲವನ್ನೇ ಸರ್ವನಾಶ ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ರಾದ ವಿಜಯಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಉಪಾಧ್ಯಕ್ಷ ಬಿ.ಸಿ. ದಿನೇಶ್, ಜಂಟಿಕಾರ್ಯದರ್ಶಿ ಸಿ.ನಿರಂಜನ್, ಖಜಾಂಚಿ ಜಗದೀಶ್ ಮತ್ತಿತರರಿದ್ದರು.