Advertisement
ಯುನೆಸ್ಕೋ ಸಹಯೋಗದಲ್ಲಿ 1948 ರಲ್ಲಿ ಆರಂಭವಾದ ಇಂಟರ್ ನ್ಯಾಶನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ (ಐಟಿಐ) 1961ರ ಮಾರ್ಚ್ 27ರಂದು ವಿಶ್ವರಂಗಭೂಮಿ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಮೊದಲ ಆಚರಣೆ ನಡೆದದ್ದು 1962ರಲ್ಲಿ. ಪ್ರತಿ ವರ್ಷವೂ ಓರ್ವ ವಿಶ್ವದ ರಂಗ ದಿಗ್ಗಜರಿಂದ ಆ ವರ್ಷದ ಸಂದೇಶವನ್ನು ನೀಡಲಾಗುತ್ತದೆ. ಈ ವರ್ಷ ಸಂಸ್ಥೆಯ 70ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಫ್ರಿಕಾ, ಅಮೆರಿಕಾ, ಅರಬ್ ದೇಶಗಳು, ಏಶ್ಯಾ ಪೆಸಿಫಿಕ್ ಹಾಗೂ ಯುರೋಪ್‌ನ ಐವರು ರಂಗದಿಗ್ಗಜರಿಗೆ ಸಂದೇಶ ನೀಡುವ ಅವಕಾಶ ದೊರೆತಿದೆ. ಆ ಪೈಕಿ ಏಶ್ಯಾ ಪೆಸಿಫಿಕ್ ನ ಪರವಾಗಿ ನಮ್ಮ ದೇಶದ ರಾಮ್ ಗೋಪಾಲ್ ಬಜಾಜ್ ಅವರು ಸಂದೇಶ ನೀಡಿದ್ದಾರೆ. ಇವರು ಹಿರಿಯ ರಂಗಕರ್ಮಿ, ನಟ, ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕರು.
ರಂಗ ಪ್ರಯೋಗಗಳು ನಡೆಯುವ ಬಗ್ಗೆ ಸೂಕ್ತ ಮಾಹಿತಿ ಸಿಗಬೇಕು. ಪ್ರೇಕ್ಷಕರು ಒಂದೊಂದು ತಂಡಕ್ಕೆ ಮಾತ್ರ ಸೀಮಿತ ಎನ್ನುವಂತಾಗಿರುವುದು ರಂಗಭೂಮಿಯ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆಯೇನೋ ಎಂದೆನಿಸುತ್ತಿದೆ. ಆದರೆ ಎಲ್ಲ ಪ್ರಯೋಗಳನ್ನು ಆಸ್ವಾದಿಸುವ ವಾತಾವರಣ ಸೃಷ್ಟಿಯಾಗಬೇಕು.
– ಡಾ| ರಶ್ಮಿ ಕೋಟೇಶ್ವರ, ರಂಗಾಸಕ್ತರು ಮಕ್ಕಳಲ್ಲಿ ರಂಗ ಆಸಕ್ತಿ ಬೆಳೆಸಬೇಕು
ನಾಟಕಗಳನ್ನು ಹೆಚ್ಚಾಗಿ ನೋಡುವಂತೆ ಮಕ್ಕಳಲ್ಲಿ ರಂಗ ಆಸಕ್ತಿ ಬೆಳೆಸಬೇಕು. ಶಿಬಿರ, ತರಬೇತಿ, ಕಾರ್ಯಾಗಾರಗಳನ್ನು ನಡೆಸಿ ಮಕ್ಕಳನ್ನು ಪ್ರೇರೇಪಿಸಬೇಕು. ಹೊರ ರಾಜ್ಯದ ನಾಟಕ ತಂಡಗಳನ್ನು ಕರೆಸಿ ಇಲ್ಲಿ ಹೆಚ್ಚು – ಹೆಚ್ಚು ನಾಟಕಗಳನ್ನು ಪ್ರದರ್ಶಿಸುವ ಕಾರ್ಯ ಆಗಬೇಕಿದೆ.
– ಸದಾನಂದ ನಾವುಡ,
ರಂಗಾಸಕ್ತರು
Related Articles
ಆಧುನಿಕ ನಾಟಕಗಳಿಗೆ ಕುಂದಾಪುರದಲ್ಲಿ ಪ್ರೇಕ್ಷಕರಿದ್ದಾರೆ. ಆದರೆ ಹೆಚ್ಚು ಪ್ರಯೋಗಗಳು ನಡೆಯುತ್ತಿಲ್ಲ. ನಮ್ಮ ರಾಜ್ಯವಲ್ಲದೇ ಹೊರರಾಜ್ಯದ ನಾಟಕಗಳನ್ನೂ ಹೆಚ್ಚಾಗಿ ಪ್ರದರ್ಶಿಸಬೇಕು. ಈ ಕೆಲಸ ನಿರಂತರವಾಗಿ ನಡೆಯಬೇಕು. ರಂಗ ಪ್ರಯೋಗಗಳನ್ನು ಆಸ್ವಾದಿಸುವಂತೆ ಯುವಜನತೆಯನ್ನು ಪ್ರೇರೇಪಿಸಬೇಕಿದೆ. ಹೊಸ ಹೊಸ ನಿರ್ದೇಶಕರು ಹುಟ್ಟಿಕೊಳ್ಳಬೇಕು. ರಂಗ ಕಾರ್ಯಾಗಾರವನ್ನು ನಡೆಸಿದರೆ ಈ ಸಮಸ್ಯೆ ನೀಗಬಹುದು.
– ವಸಂತ ಬನ್ನಾಡಿ,
ಸಂಚಾಲಕರು, ರಂಗ ಅಧ್ಯಯನ ಕೇಂದ್ರ ಕುಂದಾಪುರ
Advertisement
ಅಲ್ಲಲ್ಲಿ ರಂಗ ತಂಡಗಳ ರಚನೆಯಾಗಲಿರಂಗ ಚಟುವಟಿಕೆಗಳಿಗೆ ಪೂರಕ ಚಟುವಟಿಕೆಗಳ ವಾತಾವರಣವನ್ನು ನಿರ್ಮಿಸಬೇಕು. ಈ ಭಾಗದಲ್ಲಿ ಈಗಲೂ ರಂಗ ಪ್ರಯೋಗಗಳನ್ನು ಆಸ್ವಾದಿಸುವ ದೊಡ್ಡ ವರ್ಗವೇ ಇದೆ. ನೋಡುವುದು ಮಾತ್ರವಲ್ಲ, ಅನೇಕ ಮಂದಿಗೆ ಇಂತಹ ನಾಟಕಗಳಲ್ಲಿ ನಟಿಸಬೇಕೆಂಬ ಇಚ್ಛೆಯೂ ಇದೆ. ಅದಕ್ಕಾಗಿ ತರಬೇತಿ, ಕಾರ್ಯಾಗಾರ, ಸಂಘಟನೆ ಕುರಿತ ಮಾಹಿತಿ ನೀಡಬೇಕು. ಈಗ ಗುಣಮಟ್ಟದ ಪ್ರಯೋಗಗಳು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಪ್ರೇಕ್ಷಕರು ದೂರ ಹೋಗಿರಬಹುದು. ಆದರೆ ಅಲ್ಲಲ್ಲಿ ತಂಡಗಳನ್ನು ಕಟ್ಟಿಕೊಂಡು ಪ್ರಯೋಗಗಳನ್ನು ನಡೆಸಿದರೆ ಆಸಕ್ತರು ಹೆಚ್ಚಬಹುದು. ಕೇರಳದ ಸಣ್ಣ ಸಣ್ಣ ಹಳ್ಳಿಗಳಲ್ಲೂ ದೊಡ್ಡ-ದೊಡ್ಡ ತಂಡಗಳನ್ನು ಕಟ್ಟಿಕೊಂಡು ಪ್ರಯೋಗ ಮಾಡುತ್ತಿದ್ದಾರೆ. ಸಹಜವಾಗಿಯೇ ಪ್ರೇಕ್ಷಕ ವರ್ಗವೂ ದೊಡ್ಡದಿದೆ. ನಮ್ಮಲ್ಲೂ ಇಂಥ ಕೆಲಸವಾಗಬೇಕು.
– ರಾಮಕೃಷ್ಣ ಹೇಳೆì, ರಂಗಾಸಕ್ತರು ಕುಂದಾಪುರ ವಾರ್ಷಿಕೋತ್ಸವದಲ್ಲಿ ನಾಟಕ ಬೇಕು
ಹಿಂದೆ ಎಲ್ಲೆಡೆ ಸಂಘ-ಸಂಸ್ಥೆಗಳು, ಯುವಕ ಮಂಡಲಗಳು ತಮ್ಮ ವಾರ್ಷಿಕೋತ್ಸವಗಳಲ್ಲಿ ಸಂಘದ ಸದಸ್ಯರೇ ಸ್ವತಃ ತರಬೇತಿ ಪಡೆದು ನಾಟಕ ಪ್ರದರ್ಶಿಸುತ್ತಿದ್ದರು. ಆದರೆ ಈ ಪದ್ಧತಿ ಇತ್ತೀಚೆಗೆ ಕಡಿಮೆಯಾಗಿದೆ. ಸಿನೆಮಾ ನೃತ್ಯ, ಬೇರೆ ನಾಟಕ ತಂಡಗಳನ್ನು ಕರೆಸುವುದೇ ಸಾಮಾನ್ಯವಾಗಿದೆ. ಅದರಲ್ಲೂ ಅಸಂಬದ್ಧಗಳೇ ಹೆಚ್ಚು. ಆದರೆ ಹಿಂದಿನ ಹವ್ಯಾಸವೇ ಮರುಕಳಿಸಿದರೆ ನಾಟಕಗಳ ಗುಣಮಟ್ಟವೂ ಹೆಚ್ಚಬಹುದು. ವೀಕ್ಷಕರ ಸಂಖ್ಯೆಯೂ ಹೆಚ್ಚಲಿದೆ.
– ಗಣೇಶ ಕಾರಂತ,
ಲಾವಣ್ಯ ನಾಟಕ ತಂಡ ಬೈಂದೂರು ಎಲ್ಲೆಡೆ ಹರಡಲಿ
ರಂಗ ಚಟುವಟಿಕೆ ಗ್ರಾಮೀಣ ಮತ್ತು ನಗರ ಎಲ್ಲೆಡೆ ಹರಡ ಬೇಕು. ರಂಗಭೂಮಿ ಮಾನವೀ ಯತೆ ಕಾಪಾಡಲು ಅವಶ್ಯ.
-ರಾಮ್ ಗೋಪಾಲ್ ಬಜಾಜ್
(ಈ ಬಾರಿಯ ಸಂದೇಶದ
ಒಟ್ಟೂ ಸಾರ) – ಪ್ರಶಾಂತ್ ಪಾದೆ