Advertisement
ಶೇಕಡಾವಾರು ಲೆಕ್ಕಾಚಾರಹಾಲಿ ಅಂಕ ಪದ್ಧತಿಯಂತೆ ಪ್ರತೀ ಸರಣಿಗೆ 120 ಅಂಕಗಳಿದ್ದು, ಸರಣಿಯಲ್ಲಿ 2ರಿಂದ 5ರ ವರೆಗೆ ಪಂದ್ಯಗಳಿದ್ದಾಗ ಪ್ರತೀ ಗೆಲುವಿಗೆ ಸಿಗುವ ಅಂಕವೂ ಬದಲಾಗುತ್ತಿತ್ತು. ಆದರೆ ಇನ್ನು ಮುಂದೆ ಪ್ರತಿಯೊಂದು ಗೆಲುವಿಗೆ ಒಂದೇ ಅಂಕ ಸಿಗಲಿದೆ. ಅಂತಿಮವಾಗಿ ಒಟ್ಟು ಅಂಕಕ್ಕೆ ಬದಲಾಗಿ ಶೇಕಡಾವಾರು ಲೆಕ್ಕಾಚಾರಕ್ಕೆ ಮಾನ್ಯತೆ ನೀಡಲಾಗುವುದು ಎಂದು ಅಲಡೈìಸ್ ತಿಳಿಸಿದ್ದಾರೆ.
2019-21ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರತೀ ತಂಡಕ್ಕೂ 6 ಸರಣಿಗಳಿದ್ದು, ಪ್ರತೀ ಸರಣಿಗೂ ಗರಿಷ್ಠ 120 ಅಂಕದಂತೆ ಒಟ್ಟು 720 ಅಂಕ ಗಳಿಸುವ ಅವಕಾಶವಿತ್ತು. ಆದರೆ ಕೊರೊನಾದಿಂದಾಗಿ ಕೆಲವು ಸರಣಿ ರದ್ದುಗೊಂಡ ಬಳಿಕ ಶೇಕಾಡವಾರು ಅಂಕ ಗಳಿಕೆಯ ಆಧಾರದಲ್ಲಿ ಸ್ಥಾನ ನಿರ್ಣಯ ಮಾಡಲಾಗಿತ್ತು. ಇದು ನ್ಯೂಜಿಲ್ಯಾಂಡ್‌ಗೆ ಲಾಭವಾಗಿ ಪರಿಣಮಿಸಿತ್ತು. ಅದು ಒಂದು ಸರಣಿಯಲ್ಲಿ ಆಡದಿದ್ದರೂ, ಒಟ್ಟು ಅಂಕಗಳಿಕೆಯಲ್ಲಿ ಹಿಂದಿದ್ದರೂ ಶೇಕಾಡಾವಾರು ಅಂಕ ಗಳಿಕೆಯಲ್ಲಿ ಮೇಲುಗೈ ಸಾಧಿಸಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು! ಆಗಸ್ಟ್‌ನಲ್ಲಿ ಚಾಲನೆ
ಆಗಸ್ಟ್‌ನಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯೊಂದಿಗೆ 2021-23ರ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಚಾಲನೆ ಸಿಗಲಿದೆ.