Advertisement

ವಿಶ್ವ ಟೆನಿಸ್‌ ಶ್ರೇಯಾಂಕ: ನಂ.1 ಸ್ಥಾನ ಕಾಯ್ದುಕೊಂಡ ಮರ್ರೆ

03:45 AM Jun 27, 2017 | Team Udayavani |

ನವದೆಹಲಿ: ಫ್ರೆಂಚ್‌ ಓಪನ್‌, ಕ್ವೀನ್ಸ್‌ ಕ್ಲಬ್‌ ಟೆನಿಸ್‌ನಲ್ಲಿ ವೈಫ‌ಲ್ಯದ ಹೊರತಾಗಿಯೂ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವ ನಂ.1 ಶ್ರೇಯಾಂಕ ಕಾಯ್ದುಕೊಳ್ಳುವಲ್ಲಿ ಇಂಗ್ಲೆಂಡ್‌ನ‌ ಆ್ಯಂಡಿ ಮರ್ರೆ ಯಶಸ್ವಿಯಾಗಿದ್ದಾರೆ.

Advertisement

ಮರ್ರೆ ಒಟ್ಟು 9,390 ಅಂಕವನ್ನು ಹೊಂದಿದ್ದಾರೆ. ಇತ್ತೀಚೆಗೆ ಅಮೆರಿಕದ ಕ್ವೀನ್ಸ್‌ ಕ್ಲಬ್‌ ಚಾಂಪಿಯನ್‌ಶಿಪ್‌ ಟೆನಿಸ್‌ನಲ್ಲಿ ಮರ್ರೆ 3ನೇ ಸುತ್ತಿನಲ್ಲಿಯೇ ಅಮೆರಿಕದ ಜೋರ್ಡಾನ್‌ ಥಾಮ್ಸನ್‌ ವಿರುದ್ಧ ನೇರ ಸೆಟ್‌ನಲ್ಲಿಯೇ ಸೋಲುಂಡಿದ್ದಾರೆ. ಫ್ರೆಂಚ್‌ ಓಪನ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ವಾವ್ರಿಂಕಾ ವಿರುದ್ಧ ಹೋರಾಟದ ಸೋಲು ಕಂಡಿದ್ದರು. ಉಳಿದಂತೆ ಸ್ಪೇನ್‌ನ ರಾಫೆಲ್‌ ನಡಾಲ್‌ 7,285 ಅಂಕವನ್ನು ಹೊಂದಿದ್ದು, ನಂ.2 ನೇ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ. ಅದೇ ರೀತಿ ಸ್ಪೀಜರ್ಲೆಂಡ್‌ನ‌ ಸ್ಟಾನ್‌ ವಾವ್ರಿಂಕಾ, ಸ್ಟಾರ್‌ ಟೆನಿಸ್‌ ಆಟಗಾರ ಸ್ವೀಜರ್ಲೆಂಡ್‌ನ‌ ರೋಜರ್‌ ಫೆಡರರ್‌ 4 ಮತ್ತು 5ನೇ ಶ್ರೇಯಾಂಕವನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next