Advertisement

ಬದುಕಿ ಸಾಧಿಸೋಣ ಆತ್ಮಹತ್ಯೆ ಸಮಸ್ಯೆಗೆ ಪರಿಹಾರ ಅಲ್ಲವೇ ಅಲ್ಲ !

09:36 AM Sep 11, 2019 | Sriram |

ಮಣಿಪಾಲ: ಇಂದು ಜಾಗತಿಕ ಆತ್ಮಹತ್ಯೆ ತಡೆ ದಿನ. ಜಗತ್ತನ್ನು ಕಾಡುವ ಮಹಾ ಮಾರಿಗಳಲ್ಲಿ ಆತ್ಮಹತ್ಯೆ ಪಿಡುಗೂ ಒಂದು. ಜನರಲ್ಲಿ ಜಾಗೃತಿ ಮೂಡಿ ಸುವುದರಿಂದ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ. ವ್ಯಕ್ತಿಯ ಮನಸ್ಸು ಬದಲಾದರೆ ಮಾತ್ರ ಇಂತಹ ಪೂರ್ವಯೋಜಿತ ಕೃತ್ಯದ ಮನಃಸ್ಥಿತಿಯನ್ನು ತೊಡೆದು ಹಾಕಬಹುದು. ಸಮಸ್ಯೆಗೆ ಪರಿಹಾರವಾಗಿ ಆತ್ಮಹತ್ಯೆ ಅಂತೂ ಅಲ್ಲವೇ ಅಲ್ಲ.

Advertisement

ಹಲವು ಕಾರಣ?
ಜೀವನದಲ್ಲಿನ ಒತ್ತಡ, ಮನೆ ಮತ್ತು ಉದ್ಯೋಗ ಮಾಡುವ ಸ್ಥಳ ಸೇರಿದಂತೆ
ಇತರ ಕಡೆ ಇರುವ ಮಾನಸಿಕ ಹಿಂಸೆ ಖನ್ನತೆಯಾಗಿ ಬದಲಾಗುತ್ತದೆ. ಕ್ರಮೇಣ
ಇಂತಹ ಖನ್ನತೆಗಳು ಆತ್ಮಹತ್ಯೆಗೆ ಪ್ರೇರೇಪಿಸುತ್ತವೆೆ. ತಾನು ಎಲ್ಲರಿಗಿಂತ
ಕೀಳು, ನಾನು ಅಸಮರ್ಥ ಎಂಬ ನಕಾರಾತ್ಮಕ ಭಾವನೆ ಬಂದರೆ ಅದು ಆತ್ಮಹತ್ಯೆಯಲ್ಲಿ ಕೊನೆಯಾಗುತ್ತದೆ. ದೀರ್ಘ‌ ಸಮಯದಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲು ತ್ತಿದ್ದವರೂ ಆತ್ಮಹತ್ಯೆಗೆ ಮುಂದಾಗುತ್ತಾರೆ.

ಸಾಮಾನ್ಯ ಪ್ರಕರಣಗಳು
-  ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿ, ವಿಫ‌ಲವಾದವರು.
- ಆತ್ಮೀಯ ಸ್ನೇಹಿತರು/ಬಂಧುಬಳಗದವರು ಆತ್ಮಹತ್ಯೆ ಗೈದಿದ್ದರೆ ಮನನೊಂದು.
- ಮನೋ ವಿಕಲತೆಯಿಂದ ಬಳಲುತ್ತಿರುವವರು.
- ಡ್ರಗ್ಸ್‌, ವ್ಯಸನ ಮೊದಲಾದ ಮಾದಕ ಪದಾರ್ಥಗಳನ್ನು ಸೇವಿಸುತ್ತಿರುವವರು.
- ದೀರ್ಘ‌ಕಾಲದ ಗಂಭೀರ ರೋಗಗಳಿಂದ ಬಳಲಿದವರು.
- ನಾನಾ ತರಹದ ಒತ್ತಡ ಮತ್ತು ಹಿಂಸೆಯನ್ನು ಅನುಭವಿಸುತ್ತಿರುವವರು.
- ಹದಿಹರೆಯದ ಪ್ರೇಮ ವೈಫ‌ಲ್ಯ.
- ವ್ಯಾಪಾರ ವಹಿವಾಟು ವಿಫ‌ಲವಾಗಿ, ಸಾಲದ ಶೂಲಕ್ಕೆ ಸಿಲುಕಿದವರು.
- ಕಡಿಮೆ ಅಂಕ ಲಭಿಸಿ ಜುಗುಪ್ಸೆಗೊಂಡವರು.

ಒಂದು ವೇಳೆ ಆತ್ಮಹತ್ಯೆಯೇ ಪರಿಹಾರವಾಗಿರುತ್ತಿದ್ದಲ್ಲಿ ಜಗತ್ತಿನ ಬಹುತೇಕ ಅರ್ಧ ಪಾಲು ಜನ ಇರುತ್ತಲೇ ಇರಲಿಲ್ಲ. ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೆ ಇದೆ. ತಮ್ಮ ಸಮಸ್ಯೆಗಳನ್ನು ಆತ್ಮೀಯರಲ್ಲಿ ಹೇಳಲು ಪ್ರಯತ್ನಿಸಿ. ಮನುಷ್ಯ ಮಾತ್ರ ಸಂಘ ಜೀವಿಯಾಗಿರುವ ಕಾರಣ ಆತನೊಂದಿಗೆ ಬೆರೆಯಲು ಯಾವುದೇ ಮುಜುಗರಬೇಡ. ನೀವು ಒಂಟಿ ಅಂತು ಅಲ್ಲ ಏಕಾಂಗಿಯಾಗಿ ಕೊರಗಬೇಡಿ.

40 ಸೆಕೆಂಡಿಗೆ ಒಂದು ಪ್ರಕರಣ
ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಜಗತ್ತಿನಲ್ಲಿ ವಾರ್ಷಿಕ 10 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆ ನಡೆಯುತ್ತದೆ. 45 ವರ್ಷಗಳಲ್ಲಿ ಪ್ರತಿ ವರ್ಷ ಶೇ. 60ರಷ್ಟು ಆತ್ಮಹತ್ಯೆ ಪ್ರಮಾದಗಳು ಹೆಚ್ಚಾಗುತ್ತಿವೆ.

Advertisement

ಟಾಪ್‌ 3 ರಾಜ್ಯಗಳು
ಕರ್ನಾಟಕ, ತ್ರಿಪುರ ಮತ್ತು ತಮಿಳುನಾಡು

21 ಆತ್ಮಹತ್ಯೆ ಪ್ರಕರಣಗಳು ಹೆಚ್ಚಿರುವ ರಾಷ್ಟ್ರಗಳ ಪೈಕಿ ಭಾರತದ ರ್‍ಯಾಂಕ್‌.

2.20 ಲಕ್ಷ ಭಾರತದಲ್ಲಿ ಪ್ರತಿ ವರ್ಷ ಹಲವು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡವರು.

6.3 ಆತ್ಮಹತ್ಯೆ ಸರಾಸರಿ (1 ಲಕ್ಷ ಜನರಲ್ಲಿ)

1/5 ಆತ್ಮಹತ್ಯೆ ಚಿಂತೆ ಮಾಡಿ ಅನುಭವವುಳ್ಳವರು.

22 ಸಾವಿರ 5 ವರ್ಷಗಳ‌ಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು.

ಶೇ. 23 ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಶೇ. 18 ಆತ್ಮಹತ್ಯೆ ಮಾಡಿಕೊಳ್ಳು ತ್ತಿರುವ ಪುರುಷರು.

ಶೇ. 33 ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವವರು

ಶೇ. 26 ಮನನೊಂದು ನೇಣಿಗೆ ಶರಣಾಗುವವರು.

Advertisement

Udayavani is now on Telegram. Click here to join our channel and stay updated with the latest news.

Next