Advertisement

ಗಮನ ಸೆಳೆದ ವಿಶ್ವ ದೃಷ್ಟಿ ದಿನಾಚರಣೆ

11:59 PM Oct 11, 2019 | Sriram |

ಕಾಸರಗೋಡು: ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಜರಗಿದ ಕಾರ್ಯ ಕ್ರಮಗಳು ಗಮನ ಸೆಳೆಯಿತು.

Advertisement

ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕೆ.ಕೆ. ಪುರಂ ಮದ್ರಸಾದಲ್ಲಿ ನಡೆದ ಸಮಾರಂಭಗಳು ಆಕರ್ಷಣೆ ಪಡೆದಿವೆ. ಜನಜಾಗೃತಿ, ದೃಷ್ಟಿ, ಸಿಹಿಮೂತ್ರರೋಗ ಇತ್ಯಾದಿಗಳ ತಪಾಸಣೆ ನಡೆದುವು. ಚೆಂಗಳ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಮಕ್ಕಳಿಗಾಗಿ ಕಣ್ಣುದಾನ ಸಂಬಂಧ ಘೋಷಣೆ ರಚನೆ ಸ್ಪರ್ಧೆ ಜರಗಿತು.

ಡಾ| ಮೊದೀನ್‌ ಜಾಸರ್‌ ಆಲಿ ದಿನಾ ಚರಣೆಯನ್ನು ಉದ್ಘಾಟಿಸಿದರು.

ಹೆಲ್ತ್‌ ಇನ್ಸ್‌ ಪೆಕ್ಟರ್‌ ಬಿ.ಅಶ್ರಫ್‌ ಅಧ್ಯಕ್ಷತೆ ವಹಿಸಿದ್ದರು. ಆಪ್ಟೋಮೆಟ್ರಿಸ್ಟ್‌ ಕೆ.ಎಸ್‌. ಶಶಿಕಲಾ ತರಗತಿ ನಡೆಸಿದರು. ಜ್ಯೂನಿಯರ್‌ ಹೆಲ್ತ್‌ ಇನ್ಸ್‌ ಪೆಕ್ಟರ್‌ ಅಫೀಝ್ ಷಾಫಿ, ಜೆ.ಪಿ.ಎಚ್‌.ಎನ್‌. ಗಳಾದ ಪಿ.ಟಿ. ಜಲಜಾ, ಕೆ.ವಿ. ನಿಷಾ, ಎಸ್‌. ಆಶಾಮೋಹನ್‌, ಆಶಾ ಕಾರ್ಯಕರ್ತರಾದ ಸಿ.ವಿ. ಶ್ರೀಜಾ ಕುಮಾರಿ, ಕೆ.ಜಯ ಕುಮಾರಿ, ಪಿ. ರೋಹಿಣಿ, ಎಸ್‌. ಭವಾನಿ, ಕಬೀರ್‌ ಚೆರ್ಕಳಂ, ಸಿ.ಎಂ. ಅಬ್ದುಲ್ಲ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next