Advertisement

ಹಿರಿಯರ ಪಾಲನೆ ಜವಾಬ್ದಾರಿ ನಿರ್ವಹಿಸಿ

02:22 PM Oct 03, 2020 | Suhan S |

ಚಿಕ್ಕಬಳ್ಳಾಪುರ: ಹಿರಿಯ ನಾಗರಿಕರು ತಮ್ಮ ವಾರಸುದಾರರಿಂದ ಅಸುರಕ್ಷತೆಯನ್ನು ಹೊಂದಿದಾಗ ನೇರವಾಗಿ ಜಿಲ್ಲಾಡಳಿತಕ್ಕೆ ಅರ್ಜಿ ನೀಡಿ 90 ದಿನಗಳೊಳಗೆ ನ್ಯಾಯ ಪಡೆಯಬಹುದೆಂದು ಅಪರ ಜಿಲ್ಲಾಧಿಕಾರಿಗಳಾದ ಅಮರೇಶ್‌ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಾಗಿದ್ದ ವಿಶ್ವ ಹಿರಿಯನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಸ್ಯೆಗೆ ಪರಿಹಾರ: ಜಿಲ್ಲೆಯ ನಾಗರಿಕರು ತುಂಬಾ ಪ್ರಾಮಾಣಿಕತೆ ಮತ್ತು ಆತ್ಮೀಯತೆಯಿಂದ ವರ್ತಿಸುತ್ತಾರೆ. ಇದು ಅಭಿನಂದನಾರ್ಹ ವಿಷಯ. ಹಿರಿಯ ನಾಗರಿಕರು ತಮ್ಮ ವೃದ್ಯಾಪ್ಯದ ಜೀವನೋ ಪಾಯಕ್ಕಾಗಿ ಕನಿಷ್ಠ ಮಟ್ಟದ ಉಳಿತಾಯ ಹೊಂದಿರಬೇಕು ಎಂಬ ಜಾಗೃತಿ ಭಾವನೆ ಇರಬೇಕು ಹಾಗೂ ಯಾವುದೇ ರೀತಿಯ ಮಕ್ಕಳ/ವಾರಸುದಾರರಿಂದ ಅನ್ಯಾಯ ಕ್ಕೊಳಗಾದಾಗ ನೇರವಾಗಿ ಕಾನೂನು ಸೇವೆವತಿಯಿಂದ ನೆರವು ಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅವಕಾಶ ನಮ್ಮ ಕಾನೂನಿನಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಸದಸ್ಯ ಕಾರ್ಯದರ್ಶಿ ಎಚ್‌.ದೇವರಾಜ್‌ ಮಾತನಾಡಿ, ಹಿರಿಯ ನಾಗರಿಕರು ಸ್ವಾಭಿಮಾನದ ಜೀವಿಗಳಾಗಿದ್ದು, ಅವರನ್ನುನೋಡಿಕೊಳ್ಳುವಧಾರ್ಮಿಕ ಜವಾಬ್ದಾರಿ ಇರಬೇಕಾಗುತ್ತದೆ ಎಂದರು.

ಹಿರಿಯ ನಾಗರಿಕರು ಕಾನೂನು ರೀತ್ಯ ಮಾಡುವಂತಹ ಆಸ್ತಿಗಳಿಗೆ ಸಂಬಂಧಿಸಿದ ಯಾವುದೇ ವಿಲ್‌ಗ‌ಳು ಅಂಗೀಕಾರ ವಾಗುವುದು ಅವರ ಮರಣದ ನಂತರ. ಆದರೆ, ವಿಲ್‌ ಮಾಡಿದ್ದರೂ ಕೂಡ ಆಸ್ತಿಯನ್ನು ಮಾರಾಟ ಮಾಡುವಂತಹ ಅಧಿಕಾರವುಹಿರಿಯನಾಗರೀಕರಿಗಿರುತ್ತದೆ. ಕಾನೂನಿನ ಮೂಲಕ ಯಾವುದೇ ಹೋರಾಟ ಮಾಡಬೇಕಾದಲ್ಲಿ ರೂ. 1.25 ಲಕ್ಷಕ್ಕಿಂತ ಕಡಿಮೆ ಆದಾಯವಿದ್ದಲ್ಲಿ ಅವರ ಪರ ಸರ್ಕಾರದ ರೀತ್ಯ ಯಾವುದೇ ಶುಲ್ಕ ವಿಲ್ಲದೆ ಲಾಯರ್‌ನ್ನು ನೇಮಿಸಿ ಕೊಡಲಾಗುತ್ತದೆ.

Advertisement

ಜೀವನಾಂಶ ನೀಡಬೇಕು: ಹಿರಿಯ ನಾಗರಿಕರನ್ನು ನೋಡಿಕೊಳ್ಳದವರಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ.5ಸಾವಿರ ದಂಡ ವಿಧಿಸಲಾಗುತ್ತದೆ. ಸ್ವತಃ ನೋಡಿಕೊಳ್ಳಲು ಆಗದಂತಹ ಮಕ್ಕಳು/ವಾರಸುದಾರರು ಅವರ ತಂದೆ ತಾಯಿಗೆ ಜೀವನಾಂಶ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ವೇಗದ ಈ ಜೀವನದಲ್ಲಿ ವೇಗವಲ್ಲದ ಜೀವನದಲ್ಲಿ ಬೆಳೆದಂತಹ ಹಿರಿಯರು ಅರ್ಥಮಾಡಿಕೊಂಡು ಕಾಲಕ್ಕನುಗುಣವಾಗಿ ಹೊಂದಿಕೊಂಡು ಹೋಗುವಂತಹ ಮನೋಭಾವನೆಯನ್ನು ಬೆಳೆಸಿಕೊಂಡಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹು ದೆಂದು ಹೇಳಿದರು.

ಹಿರಿಯ ನಾಗರಿಕರು ಸರ್ಕಾರದ ಎಲ್ಲಾ ಸೇವೆಗಳನ್ನು ಉಪ ಯೋಗಿಸಿಕೊಳ್ಳಿ ಎಂದು ಹೇಳಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಹಿರಿಯ ನಾಗರಿಕ ರಾದ ಸುಬ್ಬರಾಯಪ್ಪ, ತಿರುಮಳಪ್ಪ, ನರಸಮ್ಮ, ನರಸಿಂಹಪ್ಪ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಜಿಲ್ಲಾ ಪ್ಯಾನಲ್‌ ವಕೀಲರಾದ ಕೆ.ಸಿ.ಪ್ರಕಾಶ್‌, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯ ಉಪನಿರ್ದೇಶಕ ಎನ್‌.ನಾರಾಯಣಸ್ವಾಮಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ.ವಿ.ಜ್ಯೋತಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿವಿನೋದ್‌ ಕುಮಾರ್‌, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಜಿ.ವಿ.ವಿಶ್ವನಾಥ್‌, ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next