Advertisement

ಸರ್ಕಾರದಯೋಜನೆ ಹಿರಿಯರಿಗೆ ತಲುಪಿಸಿ

02:21 PM Oct 02, 2020 | Suhan S |

ಕೋಲಾರ: ಸರ್ಕಾರವು ಜಾರಿಗೆ ತಂದಿರುವ ವಿವಿಧ ಯೋಜನೆಗಳು ಹಿರಿಯ ನಾಗರಿಕರಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಮನೆಯಲ್ಲೂ ಇರುವ ಹಿರಿಯ ನಾಗರಿಕರು ದೇವರ ಸಮಾನವಾಗಿರುತ್ತಾರೆ. ತಂದೆ ತಾಯಿ ನಮಗೆ ಸಂಸ್ಕಾರ ಕಲಿಸಿ, ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಯಾಗಿ ಮಾಡುತ್ತಾರೆ. ಅಂತಹ ತಂದೆ ತಾಯಿಯರನ್ನು ಹಿರಿಯ ವಯಸ್ಸಿನಲ್ಲಿ ನೋಡಿಕೊಳ್ಳುವುದು ನಮ್ಮೆಲ್ಲರಕರ್ತವ್ಯವಾಗಿದೆ ಎಂದರು.

ಮಗುವಿನಂತೆ ಪೋಷಿಸಿ: ಅವಿಭಕ್ತಕುಟುಂಬಗಳಲ್ಲಿ ಹಿರಿಯ ನಾಗರಿಕರನ್ನು ಹೆಚ್ಚಾಗಿ ಕಾಣಬಹುದಾಗಿದೆ. ಹಿರಿಯ ನಾಗರಿಕರದ್ದು ಮಗುವಿನಂತ ಹೃದಯವಾಗಿದ್ದು, ಅವರನ್ನು ಮಗುವಿನಂತೆಯೇ ಪೋಷಿಸಬೇಕು. ಕೋವಿಡ್‌-19 ಹಿನ್ನೆಲೆಯಲ್ಲಿ ಇಳಿ ವಯಸ್ಸಿನಲ್ಲಿ ಶ್ವಾಸಕೋಶದ ತೊಂದರೆಗಳಿಗೆ  ಹೆಚ್ಚಿನ ರೀತಿಯಲ್ಲಿ ತುತ್ತಾಗುತ್ತಿದ್ದಾರೆ. ಆದ್ದರಿಂದ ಹಿರಿಯ ನಾಗರಿಕರ ಆರೋಗ್ಯವನ್ನು ಕಾಪಾಡುವಂತೆ ಸಲಹೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್‌. ರವಿಕುಮಾರ್‌ ಮಾತನಾಡಿ, ಹಿರಿಯರು ನಮಗೆ ಕಲಿಸಿ ಕೊಟ್ಟಿರುವ ನೀತಿ ನಿಯತ್ತು, ರೂಢಿ ಸಂಪ್ರದಾಯ, ಆಚಾರ ವಿಚಾರ, ಸಂಸ್ಕೃತಿ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

ಜಿಲ್ಲೆಗೊಂದು ವೃದ್ಧಾಶ್ರಮ: ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಸಿ.ಎಚ್‌ ಗಂಗಾಧರ್‌ ಮಾತನಾಡಿ, ಹಿರಿಯರನ್ನು ನೋಡಿಕೊಳ್ಳಲು ಸರ್ಕಾರದಿಂದಲೇ ಜಿಲ್ಲೆಗೊಂದು ವೃದ್ಧಾಶ್ರಮಗಳನ್ನು ತೆರೆಯಲಾಗಿದೆ. 60 ವರ್ಷ ವಯಸ್ಸು ದಾಟಿದ ನಾಗರಿಕರಿಗೆ ಸರ್ಕಾರದಿಂದಪಿಂಚಣಿಸೌಲಭ್ಯಕಲ್ಪಿಸಲಾಗಿದೆ ಮತ್ತು 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ಬಸ್‌ ಪ್ರಯಾಣದಲ್ಲಿ ವಿಶೇಷ ಸೌಲಭ್ಯವನ್ನು ಹಿರಿಯ ನಾಗರಿಕರಿಗೆಕಲ್ಪಿಸಲಾಗಿದೆ ಹಾಗೂ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. 2015 ರಲ್ಲಿಬಡತನ ನಿರ್ಮೂಲನೆಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ  ಎಂ.ಜಿ.ಪಾಲಿ,ವಿಕಲಚೇತನರಮತ್ತುಹಿರಿಯ ನಾಗರಿಕರ ಸಬಲಿಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರಾಜಪ್ಪ, ವಕೀಲರ ಸಂಘದ ಕಾರ್ಯದರ್ಶಿ ರಘುಪತಿ, ವಕೀಲ ಕೆ.ಆರ್‌ .ಧನರಾಜ್‌ ಸೇರಿದಂತೆ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಅವಿಭಕ್ತಕುಟುಂಬಗಳಿಂದ ವಿಘಟನೆಯಾದ ವಿಭಕ್ತಕುಟುಂಬಗಳನ್ನು ನೋಡಬಹುದಾಗಿದೆ. ವೃದ್ಧಾಶ್ರಮಗಳು ಹಿಂದೆ ನಗರ ಪ್ರದೇಶಗಳಲ್ಲಿ ಮಾತ್ರ ನೋಡುತ್ತಿದ್ದೆವು. ಆದರೆ ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಸಹ ವೃದ್ಧಾಶ್ರಮಗಳನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿ.ಎಚ್‌ ಗಂಗಾಧರ್‌, ಹಿರಿಯ ಸಿವಿಲ್‌ ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next