Advertisement

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸ್ಫೂರ್ತಿದಾಯಕ: ಎಸ್‌.ಸೋಮನಾಥ್‌

08:51 PM Sep 25, 2022 | Team Udayavani |

ಚೆನ್ನೈ: ಬಾಹ್ಯಾಕಾಶ ಕ್ಷೇತ್ರದ ವಿಚಾರದಲ್ಲಿ ಪೂರ್ತಿ ವಿಶ್ವವೇ ಭಾರತವನ್ನು ಸ್ಫೂರ್ತಿಯಾಗಿ ನೋಡುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮುಖ್ಯಸ್ಥರಾಗಿರುವ ಎಸ್‌.ಸೋಮನಾಥ್‌ ಹೇಳಿದ್ದಾರೆ.

Advertisement

ತಮಿಳುನಾಡಿನ ಕತ್ತಂಕೂಲಥೂರಿನ ಎಸ್‌ಆರ್‌ಎಮ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಮಾತುಗಳನ್ನಾಡಿದ್ದಾರೆ.

“ಭಾರತದಲ್ಲಾಗುತ್ತಿರುವ ಅಭಿವೃದ್ಧಿಗಳನ್ನು ನೋಡುವುದಕ್ಕೇ ಸಂತಸವಾಗುತ್ತದೆ. ಅದರಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಬೆಳವಣಿಗೆಗಳು ಆಗುತ್ತಿವೆ. ಅನೇಕ ಸ್ಟಾರ್ಟ್‌ಅಪ್‌ ಗಳು ನಮ್ಮೊಂದಿಗೆ ಸೇರಿಕೊಂಡು ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ’ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next