Advertisement

ಬರಿಯ ಪ್ರವಾಸವಲ್ಲ  ಕಾಳಜಿಯೂ ಇರಲಿ : ಇಂದು ವಿಶ್ವ ಸಮುದ್ರ ದಿನ

11:50 PM Jun 07, 2021 | Team Udayavani |

ವಿಶ್ವದ ಪರಿಕಲ್ಪನೆ ಸಾಗರವಿಲ್ಲದೆ ಪರಿಪೂರ್ಣ ವಾಗಲಾರದು. ಸಮುದ್ರ ಮತ್ಸ  é ಸಂಪತ್ತಿನ ಆಗರವೂ ಹೌದು, ಕಡಲ ಮಕ್ಕಳ ಜೀವನದ ಆಧಾರವೂ ಹೌದು. ಭೂ ಉಗಮದ ಬಗೆಗಿನ ಸಿದ್ಧಾಂತದ ಪ್ರಕಾರ ಈ ಭೂಮಿ ಮೊದಲು ಬಿಸಿ ಕೆಂಡದುಂಡೆಯಾಗಿ, ಅನಂತರ ಮಳೆ ಸುರಿದು ಸುರಿದು ವಿಶಾಲ ಸಾಗರಗಳ ನಿರ್ಮಾಣ ವಾಯಿತು¬. ಈ ಸಾಗರಗಳೇ ಭೂಮಿಯ ಮೇಲ್ಮೆ„ಯನ್ನು ತಂಪಾಗಿಸಿದವು. ನೆಲಕ್ಕಿಂತ ಸಾಗರ ಪ್ರದೇಶವೇ ಹೆಚ್ಚಾಗಿದ್ದ ಕಾರಣ, ಜೀವ ವಿಕಾಸದ ಆದಿಮ ಏಕ ಕೋಶೀಯ ಜೀವಿಗಳು ಹುಟ್ಟಿದ್ದು, ವಿಧವಿಧದಲ್ಲಿ ವಿಕಾಸ ಹೊಂದಿದ್ದು ಈ ಸಾಗರ ಗರ್ಭದಲ್ಲೇ. ಅಂದಿನಿಂದ ಇಂದಿನವರೆಗೂ ಸಾಗರದಲ್ಲೇ ನಮ್ಮೆಲ್ಲ ಹುಟ್ಟಿನ ಹೊಕ್ಕುಳ ಬಳ್ಳಿ ಇರುವುದು. ಆಧುನಿಕ ಮಾನವ ಇತಿಹಾಸದಲ್ಲಿ ಈ ಸಾಗರದ ಪಾತ್ರ ಮಹತ್ವದ್ದು. ಆಮ್ಲಜನಕ, ಮಳೆ, ಸಾರಿಗೆ, ವಿದ್ಯುತ್‌, ಮತ್ಸ  é, ಮುತ್ತು ಎಲ್ಲಕ್ಕಿಂತ ಹೆಚ್ಚಾಗಿ ವಿಕಾಸದ ಚಿನ್ನವಾದ ಉಪ್ಪು, ಇವೆಲ್ಲ ಸಾಗರದ ಗರ್ಭದ ವಸ್ತುಗಳೇ. ಇಂತಹ ಸಾಗರಕ್ಕೂ ಮಾನವನ ಅತೀ ಚಟುವಟಿಕೆಯಿಂದ ಕುತ್ತುಬಂದಿದೆ. ಈ ಕಳಕಳಿಯ ಕಾರಣಕ್ಕಾಗಿಯೇ “ವಿಶ್ವ¬ ಸಾಗರ ದಿನ’ದ ಆಚರಣೆ.

Advertisement

ಈ ವರ್ಷದ ಆಶಯವೇನು?
1992ರಲ್ಲಿ ಕೆನಡಾದ ಸಮುದ್ರ ಅಭಿವೃದ್ಧಿ ಅಂತಾರಾಷ್ಟ್ರೀಯ ಕೇಂದ್ರ (ಐಸಿಒಡಿ) ಮತ್ತು ಕೆನಡಾ ಸಾಗರ ಸಂಸ್ಥೆ (ಒಐಸಿ) ವಿಶ್ಚ ಸಂಸ್ಥೆಗೆ ಅರ್ಜಿ ಸಲ್ಲಿಸಿತ್ತು. ಬ್ರೆಜಿಲ್‌ ಶೃಂಗ ಸಭೆಯಲ್ಲಿ ಆ ಮೂಲಕ ಪ್ರಸ್ತಾವನೆ ಸಲ್ಲಿಕೆಯಾಯಿತು. ಹಾಗಿದ್ದರೂ ವಿಶ್ವಸಂಸ್ಥೆ ಅಧಿಕೃತವಾಗಿ ಅಂಗೀಕಾರಕ್ಕೆ ತಂದದ್ದು 2008ರಲ್ಲಿ. ವಿಶ್ವ ಸಮುದ್ರ ದಿನ ಆಚರಿಸುವುದರೊಂದಿಗೆ ಸಮುದ್ರದ ರಕ್ಷಣೆಗೂ ಕಾನೂನಿನ ಚೌಕಟ್ಟು ಒದಗಿಸಿದಂತಾಗಿದೆ. ಈ ವರ್ಷ ಸಮುದ್ರ ಮಾಲಿನ್ಯ ತಡೆಯುವ ನೆಲೆಯಲ್ಲಿ “ಜೀವನ ಮತ್ತು ಜೀವನೋಪಾಯ’ ಎಂಬ ಧ್ಯೇಯೋದ್ದೇಶದೊಂದಿಗೆ ಆಚರಣೆ ಮಾಡಲಾಗುತ್ತಿದೆ.

ಪ್ರವಾಸೋದ್ಯಮ ಮೈಲುಗಲ್ಲು
ಬಹುತೇಕರು ಪ್ರವಾಸಿತಾಣವಾಗಿ ಸಮುದ್ರ ತೀರದ ಪ್ರದೇಶಕ್ಕೆ ಪ್ರಾಧಾನ್ಯ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಮುದ್ರ ತೀರದ ಪ್ರದೇಶವೂ ಒಂದು ಪ್ರಮುಖ ಆದಾಯದ ಮೂಲವಾಗಿದೆ. ಕರಾವಳಿ ಭಾಗದಲ್ಲಿ ಮರವಂತೆ, ತ್ರಾಸಿ, ಮರವಂತೆ, ಕೋಡಿ, ಮಲ್ಪೆ, ಪಡುಬಿದ್ರಿ, ಸಸಿಹಿತ್ಲು, ಪಣಂಬೂರು, ತಣ್ಣಿರುಬಾವಿ, ಸೋಮೇಶ್ವರ ಮತ್ತು ಇನ್ನೂ ಹಲವಾರು ಕಡಲ ತೀರದ ಪ್ರದೇಶಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿವೆ. ಇಲ್ಲಿಗೆ ದೇಶ-ವಿದೇಶಗಳಿಂದ ಸಾವಿರಾರು
ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.
ಆದರೆ ಪ್ರಸ್ತುತ ಕೊರೊನಾ ಲಾಕ್‌ಡೌನ್‌ ಇರುವ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅದರಂತೆ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದೆ.

ನಮ್ಮೆಲ್ಲರ ಹೊಣೆ
– ಸಾಧ್ಯವಾದಷ್ಟು ಮರುಬಳಕೆಯಾಗುವ ವಸ್ತುಗಳನ್ನೇ ಬಳಸೋಣ.
– ಕ್ರೋ ಪ್ಲಾಸ್ಟಿಕ್‌ ಕಡಲಿಗೆ ಸೇರದಂತೆ ಕಾಳಜಿ ವಹಿಸೋಣ.
– ವಿಷಕಾರಿ ರಾಸಾಯನಿಕವು ಸಮುದ್ರದ ಜಲಚರಗಳಿಗೆ ಕಂಟಕವಾಗದಂತೆ ನೋಡಿಕೊಳ್ಳೋಣ.

ಕಾಳಜಿಯೂ ಬೇಕಿದೆ: ಕಡಲ ತೀರದಲ್ಲಿ ಕಸದ ಬುಟ್ಟಿ ವ್ಯವಸ್ಥೆ ಇದೆ ಯಾದರೂ ಕಸವನ್ನು ಸಮುದ್ರಕ್ಕೆ ಎಸೆ ಯುವವರೇ ಅಧಿಕ. ಈ ಮಹಾಮಾರಿ ಕೋವಿಡ್‌ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಜತೆಗೆ ಜಾಗತಿಕ ಸಮಸ್ಯೆಯಾಗಿರುವ ಪ್ಲಾಸ್ಟಿಕ್‌ ನಿರ್ವ ಹಣೆಯ ಕಡೆಯೂ ನಾವು ಗಮನ ಹರಿಸ ಬೇಕಾದ ಅನವಾರ್ಯತೆ. ಸ್ವತ್ಛ ಕಡಲು, ಸ್ವತ್ಛ ಪರಿಸರವೇ ನಮ್ಮೆಲ್ಲರ ಆಶಯವಾಗಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next