Advertisement

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

01:25 PM Sep 21, 2024 | Team Udayavani |

ನದಿಗಳಿಗೂ, ಮಾನವ ವಿಕಾಸಕ್ಕೂ ಅವಿನಾಭಾವ ಸಂಬಂಧವಿದೆ. ನದಿಗಳಿಂದಲೇ ಮಾನವ ಕುಲದ ಉಗಮ. ನಾಗರಿಕತೆಗಳು ಜನ್ಮ ತಾಳಿದ್ದೇ ನದಿಗಳ ಮಡಿಲಲ್ಲಿ. ಮನುಷ್ಯನ ನಿತ್ಯ ಬದುಕಿನ ಬಹುಮುಖ್ಯ ಅಂಗ ನೀರು, ನದಿಗಳು. ಒಂದು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ನದಿಗಳು ಪ್ರಮುಖ ಪಾತ್ರವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ತ್ವರಿತವಾದ ನಗರೀಕರಣ, ಕೈಗಾರೀಕರಣ ಮತ್ತು ಹೆಚ್ಚುತ್ತಿರುವ ಮಾನವ ಜನಸಂಖ್ಯೆಯು ನದಿಗಳಿಗೆ ಅಪಾರ ಹನಿಯುಂಟು ಮಾಡುತ್ತಿವೆ.

Advertisement

ನೀರಿನ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಜಲಮೂಲಗಳನ್ನು ಸಂರಕ್ಷಿಸಲು 2005ರಲ್ಲಿ “ವಾಟರ್‌ ಫಾರ್‌ ಲೈಫ್’ ಎನ್ನುವ ಸಂದೇಶದೊಂದಿಗೆ ಸೆಪ್ಟಂಬರ್‌ ತಿಂಗಳ ಕೊನೆಯ ರವಿವಾರವನ್ನು ವಿಶ್ವ ನದಿಗಳ ದಿನವೆಂದು ಘೋಷಿಸಿತು. ನದಿಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳ ಸಂರಕ್ಷಣೆಯನ್ನು ಉತ್ತೇಜಿಸಲು ಪ್ರತೀ ವರ್ಷ ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಪಂಚದ ಹಾಗೂ ಭಾರತದ ಪ್ರಸಿದ್ಧ ನದಿಗಳ ಬಗ್ಗೆ ಇಲ್ಲಿ ನೀಡಲಾಗಿದೆ.

ಜಗತ್ತಿನ ಪ್ರಮುಖ ಹತ್ತು ನದಿಗಳು:
ನೈಲ್‌ ನದಿ – 6650 ಕಿ.ಮೀ.
ಈಶಾನ್ಯ ಆಫ್ರಿಕಾದ ಮೂಲಕ ಹರಿಯುವ ನೈಲ್‌ ನದಿಯನ್ನು ವಿಶ್ವದ ಅತೀ ಉದ್ದದ ನದಿ ಎಂದು ಪರಿಗಣಿಸಲಾಗುತ್ತದೆ. ಇದು ಬಿಳಿ ನೈಲ್‌ ಮತ್ತು ನೀಲಿ ನೈಲ್‌ ಎಂಬ ಎರಡು ಉಪನದಿಗಳನ್ನು ಹೊಂದಿದೆ. ಇದು ಈಜಿಪ್ಟ್ ಮೂಲಕ ಉತ್ತರದಲ್ಲಿ ಹರಿಯುವ ಮೊದಲು ಸುಡಾನ್‌ನಲ್ಲಿ ಒಳಮುಖವಾಗುತ್ತದೆ. ಅನಂತರ ಮೆಡಿಟರೇನಿಯನ್‌ ಸಮುದ್ರವನ್ನು ಸೇರುತ್ತದೆ.

ನೈಲ್‌ ನದಿಯು ಈ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಗೆ ಸಾಕ್ಷಿಯಾಗಿದೆ. ಈಜಿಪ್ಟ್ ನಂತಹ ಪ್ರಾಚೀನ ನಾಗರಿಕತೆಯ ಕಾಲದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಈ ನದಿಯನ್ನು ಬಳಸಲಾಗುತ್ತಿತ್ತು. ಇದು ವಿಶಾಲವಾದ ಒಳಚರಂಡಿ ಪ್ರದೇಶವನ್ನು ಹೊಂದಿದ್ದು, ಈಜಿಪ್ಟ್ ಮತ್ತು ಸುಡಾನ್‌ ಸೇರಿದಂತೆ ಅದು ಹರಿಯುವ ದೇಶಗಳ ಆರ್ಥಿಕ ಅಭಿವೃದ್ಧಿಗೆ ಇದು ಸಹಕಾರಿಯಾಗಿದೆ.

Advertisement

ಅಮೆಜಾನ್‌ ನದಿ – 6575ಕಿ.ಮೀ.
ಅಮೆಜಾನ್‌ ದಕ್ಷಿಣ ಅಮೆರಿಕದ ಮೂಲಕ ಹರಿಯುವ ಅತೀದೊಡ್ಡ ನದಿಯಾಗಿದೆ. ಇದು ಪೆರುವಿಯನ್‌ ಆಂಡಿಸ್‌ನಲ್ಲಿ ಉಗಮವಾಗಿ ಬ್ರೆಜಿಲ್‌ನಾ ಅಟ್ಲಾಂಟಿಕ್‌ ಸಾಗರವನ್ನು ಸೇರುತ್ತದೆ. ಇದು ವಿಶ್ವದ ಅತೀದೊಡ್ಡ ಒಳಚರಂಡಿ ಪ್ರದೇಶವನ್ನು ಹೊಂದಿದೆ. ಜೀವವೈವಿಧ್ಯಗೆ ನೆಲೆಯಾಗಿರುವ ಈ ನದಿ ಅಮೆಜಾನ್‌ ಮಳೆಕಾಡಿನ ಹೆಚ್ಚಿನ ಭಾಗವನ್ನು ಒಳಗೊಂಡಿದೆ. ಸಾರಿಗೆ ಸಾಧನವಾಗಿ, ನೀರಿನ ಮೂಲವಾಗಿ ಮತ್ತು ವಿವಿಧ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಕ ಅಮೆಜಾನ್‌ ನದಿಯು ಲಕ್ಷಾಂತರ ಜನರಿಗೆ ನಿತ್ಯ ಬದುಕಿನ ಸಾಥಿಯಾಗಿದೆ.

ಯಾಂಗ್ಟ್ಜಿ ನದಿ ( ಚಾಂಗ್‌ ಜಿಯಾಂಗ್‌) – 6300 ಕಿ.ಮೀ.
ಯಾಂಗ್ಟ್ಜಿ ನದಿಯು ಚೀನದ ಅತೀ ಉದ್ದದ ಮತ್ತು ಪ್ರಮುಖ ನದಿಯಾಗಿದ್ದು, ದೇಶದ ಹೃದಯ ಭಾಗದ ಮೂಲಕ ಹರಿಯುತ್ತದೆ. ಚೀನದ ಇತಿಹಾಸ, ಸಂಸ್ಕೃತಿ ಮತ್ತು ಆರ್ಥಿಕತೆಯಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಟಿಬೆಟಿಯನ್‌ ಪ್ರಸ್ಥಭೂಮಿಯಲ್ಲಿ ಯಾಂಗಿr$j ಮೂಲ ಮತ್ತು ಪೂರ್ವ ಚೀನ ಸಮುದ್ರಕ್ಕೆ ಅದರ ಪ್ರಯಾಣವು ಗಮನಾರ್ಹವಾದ ಪರಿಸರ ಮತ್ತು ಆರ್ಥಿಕ ಪರಿಣಾಮವನ್ನು ಹೊಂದಿದೆ.

ಮಿಸ್ಸಿಸ್ಸಿಪ್ಪಿ – ಮಿಸೌರಿ ನದಿ – 6275 ಕಿ. ಮೀ.
ಮಿಸ್ಸಿಸ್ಸಿಪ್ಪಿ – ಮಿಸೌರಿ ನದಿ ವ್ಯವಸ್ಥೆಯು ಯುನೈಟೆಡ್‌ ಸ್ಟೇಟ್ಸ್‌ ಮುಲಕ ಹರಿಯುವ ಉತ್ತರ ಅಮೆರಿಕದ ಅತೀ ದೊಡ್ಡ ನದಿಯಾಗಿದೆ. ಈ ನದಿಗಳು ಮಧ್ಯ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಒಳಮುಖವಾಗಿ ಗಲ್ಫ್ ಮತ್ತು ಮೆಕ್ಸಿಕೊಗೆ ಮುಂದುವರೆಯುತ್ತದೆ. ಈ ವ್ಯವಸ್ಥೆಯು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಸಾರಿಗೆ, ವ್ಯಾಪಾರ ಮತ್ತು ಕೃಷಿಗೆ ಪ್ರಮುಖವಾಗಿದೆ. ಇದರ ನದಿಮುಖಜ ಭೂಮಿಯು ವೈವಿಧ್ಯಮಯ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.

ಯೆನೆಸೀ ನದಿ- 5539 ಕಿ.ಮೀ.
ಯೆನೆಸೀ ನದಿಯು ರಷ್ಯಾದ ಸೈಬೀರಿಯಾದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಇದು ಮಂಗೋಲಿಯನ್‌ ಅಲ್ಟಾಯ್‌ ಪವರ್ತಗಳಲ್ಲಿ ಹುಟ್ಟಿ, ಉತ್ತರಕ್ಕೆ ಆರ್ಕಿಟಿಕ್‌ ಮಹಾಸಾಗರಕ್ಕೆ ಹರಿಯುತ್ತದೆ. ಇದು ಸೈಬೀರಿಯನ್‌ ಸಮುದಾಯಗಳಿಗೆ ಸಾರಿಗೆ ಮಾರ್ಗವಾಗಿ ಮತ್ತು ಸಿಹಿ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಯೆನಿಸೀ ನದಿಯ ಜಲಾನಯನ ಪ್ರದೇಶವು ಖನಿಜ ಮತ್ತು ಕಾಡುಗಳನ್ನು ಒಳಗೊಂಡಂತೆ ಗಮನಾರ್ಹವಾದ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿದೆ.

ಹಳದಿ ನದಿ ( ಹುವಾಂಗ್‌ ಹೆ) – 5464 ಕಿ.ಮೀ.
ಕೆಸರಿನಿಂದ ಕೂಡಿರುವ ಈ ನದಿಯ ವಿಶಿಷ್ಟ ಬಣ್ಣಕ್ಕಾಗಿ ಈ ನದಿಯನ್ನು ಹಳದಿ ನದಿಯೆಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ “ಚೀನದ ಮಾತೃ ನದಿ’ ಎಂದು ಪರಿಗಣಿಸಲಾಗುತ್ತದೆ. ಇದು ಚೀನೀ ಇತಿಹಾಸದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಕೃಷಿಗೆ ನೀರನ್ನು ಒದಗಿಸುತ್ತದೆ. ಆದರೆ ಇದು ವಿನಾಶಾಕಾರಿ ಪ್ರವಾಹಕ್ಕೂ ಹೆಸರುವಾಸಿಯಾಗಿದೆ. ಹಳದಿ ನದಿಯ ನಿರ್ವಹಣೆಯು ಚೀನದ ಕೃಷಿ ಮತ್ತು ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದೆ.

ಓಬ್‌ ನದಿ – 5410 ಕಿ.ಮೀ.
ಓಬ್‌ ನದಿಯು ಸೈಬೀರಿಯಾದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಇದು ಅಲ್ಟಾಯ್‌ ಪರ್ವತಗಳಲ್ಲಿ ಹುಟ್ಟಿ , ಉತ್ತರಕ್ಕೆ ಆರ್ಕಿಟಿಕ್‌ ಮಹಾಸಾಗರಕ್ಕೆ ಹರಿಯುತ್ತದೆ. ಜತೆಗೆ ಸಾರಿಗೆ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ನದಿ ಜಲಾನಯನ ಪ್ರದೇಶವು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವನ್ನು ಹೊಂದಿದ್ದು, ವೈವಿಧ್ಯಮಯ ವನ್ಯಜೀವಿಗಳಿಗೆ ಹೆಸರುವಾಸಿಯಾಗಿದೆ.

ಪರಾನಾ ನದಿ – 4880 ಕಿ.ಮೀ.
ಪರಾನಾ ನದಿಯು ಮುಖ್ಯವಾಗಿ ದಕ್ಷಿಣ ಅಮೆರಿಕದ ಮೂಲಕ ಹರಿಯುತ್ತದೆ. ಪ್ರಾಥಮಿಕವಾಗಿ ಬ್ರೆಜಿಲ್‌, ಅರ್ಜೆಂಟೀನಾ ಮತ್ತು ಪರಾಗ್ವೆ ಮೂಲಕ ಹರಿಯುತ್ತದೆ. ಇದು ತನ್ನ ಹಲವಾರು ಅಣೆಕಟ್ಟುಗಳ ಮೂಲಕ ಪ್ರಾದೇಶಿಕ ಸಾರಿಗೆ , ವ್ಯಾಪಾರ ಮತ್ತು ಶಕ್ತಿ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪರಾನಾ ನದಿಯ ಜಲಾನಯನ ಪ್ರದೇಶವು ಜೀವವೈವಿಧ್ಯತೆಯಿಂದ ಸಮೃದ್ಧವಾಗಿದ್ದು, ವೈವಿಧ್ಯಮಯ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.

ಕಾಂಗೋ ನದಿ – 4700 ಕಿ.ಮೀ.
ಕಾಂಗೋ ನದಿಯು ಮಧ್ಯ ಆಫ್ರಿಕಾದ ಮೂಲಕ ಹರಿಯುವ ವಿಶ್ವದ ಎರಡನೇ ಅತೀದೊಡ್ಡ ನದಿಯಾಗಿದೆ. ಇದು ಈ ಪ್ರದೇಶದ ಸಾರಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಸ್ಥಳೀಯರಿಗೆ ಸಿಹಿ ನೀರನ್ನು ಒದಗಿಸುತ್ತದೆ. ನದಿಯ ಜಲಾನಯನ ಪ್ರದೇಶವು ದಟ್ಟವಾದ ಮಳೆಕಾಡು ಮತ್ತು ವಿಶಿಷ್ಟ ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ.

ಅಮುರ್‌ ನದಿ- 4480 ಕಿ.ಮೀ.
ಅಮುರ್‌ ನದಿಯು ಈಶಾನ್ಯ ಏಷ್ಯಾದ ಮೂಲಕ ಹರಿಯುತ್ತದೆ. ಇದು ರಷ್ಯಾ ಮತ್ತು ಚೀನ ನಡುವಿನ ಗಡಿಯನ್ನು ರೂಪಿಸುತ್ತದೆ. ಇದು ಪ್ರಾದೇಶಿಕ ವ್ಯಾಪಾರ ಸಾರಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಮುರ್‌ ನದಿಯ ಜಲಾನಯನ ಪ್ರದೇಶವು ಅಳಿವಿನಂಚಿನಲ್ಲಿರುವ ಅಮುರ್‌ ಚಿರತೆ ಸೇರಿದಂತೆ ವೈವಿಧ್ಯಮಯ ವನ್ಯಜೀವಿಗಳಿಗೆ ನೆಲೆಯಾಗಿದೆ.

ಭಾರತದ ಪ್ರಮುಖ ನದಿಗಳು:
ಸಿಂಧೂ ನದಿ – 2897 ಕಿ.ಮೀ.
ಸಿಂಧೂ ನದಿಯೂ ಮಾನಸ ಸರೋವರದ ಬಳಿ ಟಿಬೆಟ್‌ನ ಕೈಲಾಸ ಶ್ರೇಣಿಯ ಉತ್ತರದ ಇಳಿಜಾರಿನಲ್ಲಿ ಹುಟ್ಟುತ್ತದೆ. ಇದು ಜಮ್ಮು  - ಕಾಶ್ಮೀರದಲ್ಲಿ ಭಾರತವನ್ನು ಪ್ರವೇಶಿಸುತ್ತದೆ. ಈ ನದಿಯು ಭಾರತ ಮತ್ತು ಪಾಕಿಸ್ಥಾನ ಎರಡೂ ದೇಶಗಳಲ್ಲೂ ಹೆಚ್ಚಿನ ಸಂಖ್ಯೆಯ ಉಪನದಿಗಳನ್ನು ಹೊಂದಿದೆ.

ಬ್ರಹ್ಮಪುತ್ರ ನದಿ – 3281 ಕಿ.ಮೀ.
ಈ ನದಿಯು ಮಾನಸ ಸರೋವರದಲ್ಲಿ ಹುಟ್ಟುತ್ತದೆ. ಇದು ಸಿಂಧೂ ನದಿಗಿಂತ ಸ್ವಲ್ಪ ಉದ್ಧವಾಗಿದೆ ಆದರೆ ಇದರ ಹೆಚ್ಚಿನ ಭಾಗಗಳು ಭಾರತದಿಂದ ಹೊರಗೆ ಇವೆ. ಇದು ಹಿಮಾಲಯಕ್ಕೆ ಸಮಾನಾಂತರವಾಗಿ ಪೂರ್ವಕ್ಕೆ ಹರಿಯುತ್ತದೆ. ಭಾರತದಲ್ಲಿ ಇದು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿಯುತ್ತದೆ.

ಗಂಗಾ ನದಿ – 2525 ಕಿ.ಮೀ.
ಇದು ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿಯುವ ಏಷ್ಯಾದ ಗಡಿಯಾಚೆಯ ನದಿಯಾಗಿದೆ. 2525ಕಿ.ಮೀ. ಉದ್ದದ ನದಿಯು ಭಾರತದ ಉತ್ತರಾಖಂಡ ರಾಜ್ಯದಲ್ಲಿ ಪಶ್ಚಿಮ ಹಿಮಾಲಯದಲ್ಲಿ ಹುಟ್ಟುತ್ತದೆ. ಇದು ಭಾರತದ ಗಂಗಾ ಬಯಲಿನ ಮೂಲಕ ದಕ್ಷಿಣ ಮತ್ತು ಪೂರ್ವಕ್ಕೆ ಹರಿಯುತ್ತದೆ. ಇದನ್ನು ಭಾರತದ ಪುರಾಣ ಮತ್ತು ಮಹಾಕಾವ್ಯಗಳಲ್ಲಿ ದೇವ ನದಿಯೆಂದು ವರ್ಣಿಸಲಾಗಿದೆ.

ಯಮುನಾ – 1370 ಕಿ.ಮೀ.
ಯಮುನಾ ನದಿಯು ಗಂಗಾ ನದಿಯ ಒಂದು ಪ್ರಮುಖ ಉಪನದಿ. ಯುಮುನೆಯ ಉಗಮಸ್ಥಾನ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ. ಇದು ಯಮುನೋತ್ರಿಯಿಂದ ಸುಮಾರು 1370 ಕಿ.ಮೀ. ಪ್ರವಹಿಸಿದ ಅನಂತರ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಯಮುನಾ ನದಿಯು ಗಂಗಾ ನದಿಯನ್ನು ಕೂಡಿಕೊಳ್ಳುತ್ತದೆ.

ನರ್ಮದಾ ನದಿ- 1312 ಕಿ.ಮೀ.
ನರ್ಮದಾ ನದಿ ಮಧ್ಯ ಭಾರತದಲ್ಲಿ ಹರಿಯುವ ಒಂದು ನದಿ. ಇದು ಮಧಪ್ರದೇಶ ಮತ್ತು ಗುಜರಾತ್‌ ರಾಜ್ಯಗಳ ಮೂಲಕ ಹರಿದು ಅರಬಿ ಸಮುದ್ರ ಸೇರುತ್ತದೆ. ಇದು ಭಾರತದ ಉಪಖಂಡದ ಐದನೇಯ ಅತೀ ದೊಡ್ಡ ನದಿ ಆಗಿದೆ. ನರ್ಮದಾ ನದಿಯು ಹಿಮ್ಮಖವಾಗಿ ಹರಿಯುವ ನದಿಯಾಗಿದೆ.

(ಸಂಗ್ರಹ ಮಾಹಿತಿ)

Advertisement

Udayavani is now on Telegram. Click here to join our channel and stay updated with the latest news.

Next