Advertisement
ಹಿಮಾ ದಾಸ್ ಸಹಿತ ಭಾರತ ತಂಡದ ಓಟಗಾರರೆಲ್ಲ ಈಗಾಗಲೇ ಸ್ಪರ್ಧೆಗೆ ಅಣಿಯಾಗಿದ್ದಾರೆ. ಶನಿವಾರ ವನಿತೆಯರ 4×400 ಮೀ. ಹೀಟ್ಸ್, ರವಿವಾರ ಫೈನಲ್ ನಡೆಯಲಿದೆ. ಆದರೆ ಹಿಮಾಗೆ ಇನ್ನೂ ಹೆಚ್ಚಿನ ವಿಶ್ರಾಂತಿ ಅಗತ್ಯವಿರುವ ಕಾರಣ ಓಡುವುದು ಅನುಮಾನ ಎಂದು ತರಬೇತುದಾರ ರಾಧಾಕೃಷ್ಣನ್ ನಾಯರ್ ಹೇಳಿದ್ದಾರೆ. ಒಂದು ವೇಳೆ ಹಿಮಾ ಈ ಕೂಟದಲ್ಲೂ ಓಡದಿದ್ದರೆ, ಸತತ 2ನೇ ಕೂಟವನ್ನು ತಪ್ಪಿಸಿಕೊಂಡಂತಾಗುತ್ತದೆ. ಕಳೆದ ತಿಂಗಳು ದೋಹಾದಲ್ಲಿ ನಡೆದ ಏಶ್ಯ ಚಾಂಪಿಯನ್‌ಶಿಪ್‌ನಲ್ಲೂ ಅವರು ಇದೇ ಸಮಸ್ಯೆಯಿಂದ ಗೈರಾರಾಗಿದ್ದರು.
ಭಾರತ ವನಿತಾ ರಿಲೇ ತಂಡದ ಇತರ ಸದಸ್ಯರೆಂದರೆ ಎಂ.ಆರ್. ಪೂವಮ್ಮ, ವಿ.ಕೆ. ವಿಸ್ಮಯಾ, ಸರಿತಾಬೆನ್ ಗಾಯಕ್ವಾಡ್, ಪ್ರಾಚಿ ಮತ್ತು ಸೋನಿಯಾ ಬೈಶ್ಯ. ಭಾರತದ ಪುರುಷರ ತಂಡವೂ 4×400 ಮೀ. ರಿಲೇಯಲ್ಲಿ ಪಾಲ್ಗೊಳ್ಳಲಿದೆ. ಈ ತಂಡದ ಸದಸ್ಯರೆಂದರೆ ಮೊಹಮ್ಮದ್ ಅನಾಸ್, ರಾಜೀವ್ ಅರೋಕಿಯಾ, ಜೀವನ್ ಕೆ.ಎಸ್., ಕೆ. ಮೊಹಮ್ಮದ್, ಜೀತು ಬಾಬಿ, ಅಲೆಕ್ಸ್ ಆ್ಯಂಟನಿ. ಭಾರತವಿಲ್ಲಿ ಮಿಕ್ಸೆಡ್ 4×400 ಮೀ. ರಿಲೇಯಲ್ಲೂ ಸ್ಪರ್ಧಿಸಲಿದೆ.