ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಒಂದನೇ ಘಟಕವು ವಿಶ್ವದ ಅಣುವಿದ್ಯುತ್ ಘಟಕಗಳ ಪೈಕಿ ಸತತವಾಗಿ 962 ದಿನಗಳವರೆಗೆ ಅಣು ವಿದ್ಯುತ್ ಉತ್ಪಾದಿಸಿದ ವಿಶ್ವ ದಾಖಲೆ ಬರೆದ ಹಿನ್ನೆಲೆಯಲ್ಲಿ ಭಾರತೀಯ ಪೋಸ್ಟಲ್ ಇಲಾಖೆ ಕೈಗಾ ಅಣುಸ್ಥಾವರದ ಅಂಚೆ ಚೀಟಿ ಹಾಗೂ ಕವರ್‌ಗಳನ್ನು ಬಿಡುಗಡೆ ಮಾಡಿದೆ.
5 ರೂ. ಬೆಲೆಯ ಅಂಚೆ ಚೀಟಿ ಹಾಗೂ ಅಂಚೆ ಕವರ್‌ಗಳನ್ನು ಅಂದವಾಗಿ ಮುದ್ರಿಸಿದೆ. ಈಅಂಚೆ ಚೀಟಿಗಳಲ್ಲಿ ಕೈಗಾ 1 ಇರುವ ಅಂಚೆ ಚೀಟಿ ಹಾಗೂ ಇಡೀ ಕೈಗಾದ ನೋಟವಿರುವ ಚಿತ್ರಗಳಿವೆ. ಕೈಗಾದಲ್ಲಿ ಇರುವ ನಾಲ್ಕು ಅಣುಸ್ಥಾವರ ಘಟಕಗಳ ಚಿತ್ರವನ್ನು ಅಂಚೆ ಚೀಟಿ ಹಾಗೂ ಕವರ್‌ನಲ್ಲಿ ಬಳಸಲಾಗಿದೆ.
ಭಾರತೀಯ ಅಣುವಿದ್ಯುತ್ ನಿಗಮದ ಮುಂಬೈ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿಮಹಾರಾಷ್ಟ್ರದ ಪೋಸ್ಟ್‌ಮಾಸ್ಟರ್ ಜನರಲ್ ಟಿ.ಎನ್. ವ್ಯಾಸ, ಅಣುವಿದ್ಯುತ್ ನಿಗಮದಅಧ್ಯಕ್ಷರು ಹಾಗೂ ಭಾರತೀಯ ಅಣುವಿದ್ಯುತ್ ಉತ್ಪಾದನಾ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್‌ಸತೀಶ್ ಕುಮಾರ್ ಶರ್ಮಾ ಸಮ್ಮುಖದಲ್ಲಿ ಕೈಗಾ ಅಣುಸ್ಥಾವರದ ಚಿತ್ರ ಇರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.
ಕಳೆದ ವರ್ಷ ಕೈಗಾ ಅಣು ವಿದ್ಯುತ್ ಸ್ಥಾವರದಮೊದಲ ಘಟಕವು 962 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ವಿಶ್ವದಾಖಲೆ ಬರೆಯಿತು.ಈ ಮೂಲಕ ಇಂಗ್ಲೆಂಡ್‌ನ ಹೇಶಮ್ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ದಾಖಲೆಯನ್ನುಅಳಿಸಿಹಾಕಿತ್ತು. ಕೈಗಾ ಅಣುಸ್ಥಾವರ ಸುರಕ್ಷತೆ ಮತ್ತು ಪರಿಸರ ರಕ್ಷಣೆಯಲ್ಲಿ ದೇಶದ ಇತರೆ ಅಣುಸ್ಥಾವರಗಳಿಗಿಂತ ಹೆಚ್ಚು ಮಾನ್ಯತೆ ಕಾಪಾಡಿಕೊಂಡಿದೆ.
ವಿದ್ಯುತ್ ಉತ್ಪಾದನೆಯಲ್ಲಿ ದಾಖಲೆ ಮಾಡಿದೆ. 275 ಕ್ಕೂ ಹೆಚ್ಚುಪಕ್ಷಿಗಳ ನೆಲೆಯಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಕೈಗಾ ಸ್ಥಾವರ ಇದೀಗ 5-6 ನೇ ಘಟಕಗಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದು,
ನೂತನ ಘಟಕಗಳು 750 ಮೆಗಾ ವ್ಯಾಟ್ ಸಾಮರ್ಥ್ಯವನ್ನು ಹೊಂದಿವೆ. ಇದೇ ವೇಳೆ ಕೆಲ ದಿನಗಳ ಹಿಂದೆ ನಿರ್ಹಣೆಗಾಗಿ ಸ್ಥಗಿತಗೊಂಡಿದ್ದ ಕೈಗಾಘಟಕ-3 ಮತ್ತೆ ಆರಂಭಗೊಂಡಿದೆ. ರಾಜ್ಯದ ಕೈಗಾ ಅಣು ವಿದ್ಯುತ್? ಉತ್ಪಾದನಾ ಕೇಂದ್ರದಲ್ಲಿ (ಕೆಜಿಎಸ್) 220 ಮೆಗಾವ್ಯಾಟ್? ಸಾಮರ್ಥ್ಯದ 3ನೇ ಪರಮಾಣು ವಿದ್ಯುತ್ ಘಟಕವು ಬುಧವಾರ (ನ.27) ಸಂಜೆಯಿಂದ ತನ್ನ ವಿದ್ಯುತ್ ಉತ್ಪಾದನೆ ಪುನರಾರಂಭಿಸಿದೆ ಎಂದು ಪವರ್ ಸಿಸ್ಟಮ್‌ಆಪರೇಷನ್ ಕಾರ್ಪೋರೇಷನ್ ಲಿಮಿಟೆಡ್ ವಿಭಾಗ ಹೇಳಿದೆ. ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ಗೆ (ಎನ್‌ಪಿಸಿಐಎಲ್) ಸೇರಿದ ಘಟಕವು ಕಳೆದ ನವೆಂಬರ್ 5 ರಂದು ರಿಯಾಕ್ಟರ್ ನಿರ್ವಹಣೆಗಾಗಿ ಅಣು ವಿದ್ಯುತ್ ಉತ್ಪಾದನೆಯನ್ನು ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಳಿಸಿತ್ತು.