ಮಲ್ಪೆ: ಸಂವೇದನಾ ಫೌಂಡೇಶನ್ ಆಯೋಜಿಸಿದ ರಾಷ್ಟ್ರಮಟ್ಟದ “ವಂದೇ ಮಾತರಂ’ ಹಾಡಿಗೆ ಆಲ್ಬಮ್ ಸಾಂಗ್ ಸ್ಪರ್ಧೆಯಲ್ಲಿ 16 ರಾಜ್ಯಗಳ 183 ಹಾಡುಗಾರರು ವಿವಿಧ ರಾಗ ಸಂಯೋಜಿಸಿದ ಸಾಧನೆಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ಸಿಕ್ಕಿದೆ.
ವಿವೇಕಾನಂದರ 156ನೇ ಜನ್ಮದಿನದ ಪ್ರಯುಕ್ತ ಮಲ್ಪೆ ಕಡಲತೀರದಲ್ಲಿ ಶನಿವಾರ ಆಯೋಜಿಸಿದ ಸಭೆಯಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ಏಶ್ಯಾ ಪ್ರತಿನಿಧಿ ಮನೀಶ್ ವಿಶ್ನೋಯಿ ಅವರು ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಲಾಲಾಜಿ ಮೆಂಡನ್, ಅತಿಥಿಗಳಾದ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಶ್ಲಾ ಸಿದರು. ಉದ್ಯಮಿಗಳಾದ ಶಿರಿಯಾರ ಗಣೇಶ ನಾಯಕ್, ಸದಾನಂದ ಸಾಲ್ಯಾನ್, ಕಿಶೋರ್‌ಕುಮಾರ್ ಪುತ್ತೂರು, ಸದಾಶಿವ ಸ್ವದೇಶಿ ಉಪಸ್ಥಿತರಿದ್ದರು.
ಪ್ರಕಾಶ್ ಮಲ್ಪೆ ಪ್ರಧಾನ ಭಾಷಣ ಮಾಡಿ 183 ಹಾಡುಗಳಲ್ಲಿ 22 ವೀಡಿಯೋಗಳನ್ನು 2.2 ಲಕ್ಷ ಜನರು ಇದುವರೆಗೆ ನೋಡಿದ್ದಾರೆಂದರು. ಶೋಧನ ಶ್ರೀಯಾನ್ ಸ್ವಾಗತಿಸಿ ನಿಖೀಲ್ ಸಾಲ್ಯಾನ್ ವಂದಿಸಿದರು. ದಾಮೋದರ ಶರ್ಮಾ ನಿರ್ವಹಿಸಿದರು.
ಜಗದೀಶ್ ಪ್ರಥಮ
183 ಹಾಡುಗಳಲ್ಲಿ 12 ಹಾಡುಗಳನ್ನು ಅಂತಿಮ ಸ್ಪರ್ಧೆಗೆ ಆರಿಸಲಾಗಿತ್ತು. ಇದರಲ್ಲಿ ಜಗದೀಶ ಪುತ್ತೂರು ಅವರ ರಾಗ ಸಂಯೋಜನೆಗೆ ಪ್ರಥಮ ಬಹುಮಾನ, ವಿನಯ ಕಿರಣ್ ಶಿವಾನಿ ಕೊಪ್ಪ ಅವರಿಗೆ ದ್ವಿತೀಯ ಬಹುಮಾನ ಬಂದಿದೆ.