Advertisement

ಟಿ-20ಯಲ್ಲಿ ದಿಲ್ಲಿ ಹುಡುಗನ ವಿಶ್ವದಾಖಲೆ: 72 ಎಸೆತದಲ್ಲಿ ತ್ರಿಶತಕ !

10:57 AM Feb 08, 2017 | Team Udayavani |

ಹೊಸದಿಲ್ಲಿ : ದಿಲ್ಲಿಯ ಈ 21 ವರ್ಷ ಪ್ರಾಯದ ಮೋಹಿತ್‌ ಅಹಲಾವತ್‌ ಎಂಬ ಹುಡುಗ ಸ್ಥಳೀಯ ಟ್ವೆಂಟಿ ಟ್ವೆಂಟಿ ಪಂದ್ಯದಲ್ಲಿ 300 ರನ್‌ ಬಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾನೆ.

Advertisement

ಕೇವಲ 72 ಎಸೆತಗಳನ್ನು ಎದುರಿಸಿದ ಮೋಹಿತ್‌, 39 ಸಿಕ್ಸರ್‌ ಮತ್ತು 14 ಬೌಂಡರಿಗಳನ್ನು ಬಾರಿಸಿ ತ್ರಿಶಕ ಗಳಿಕೆಯ ಸಾಧನೆ ಮಾಡಿದ್ದಾನೆ. 

ಇದು ಸ್ಥಳೀಯ ಪಂದ್ಯವಾಗಿರುವುದರಿಂದ ಮೋಹಿತ್‌ ನ ತ್ರಿಶತಕದ ಗಳಿಕೆಯು ಅಧಿಕೃತವಾಗಿ ದಾಖಲಾಗಿಲ್ಲ . ಆದರೂ ಪಂದ್ಯದ ಸ್ಕೋರ್‌ ಶೀಟ್‌ ಮೂಲಕ ಆತನ ಸಾಧನೆ ಜಗಜ್ಜಾಹೀರಾಗಿದೆ. 

ಅಧಿಕೃತ ಟಿ-20 ಪಂದ್ಯಗಳಲ್ಲಿ ಕ್ರಿಸ್‌ ಗೇಲ್‌ ಐಪಿಎಲ್‌ ಕೂಟದಲ್ಲಿ ಬೆಂಗಳೂರಿನ ರಾಯಲ್‌ ಚ್ಯಾಲೆಂಜರ್ ಪರವಾಗಿ ಆಡಿದ ಪಂದ್ಯದಲ್ಲಿ  66 ಎಸೆತಗಳಲ್ಲಿ 175 ರನ್‌ ಬಾರಿಸಿರುವುದು ಈ ತನಕದ ಗರಿಷ್ಠ ಟಿ-20 ದಾಖಲೆ ಗಳಿಕೆಯಾಗಿದೆ. ಎಂದರೆ ಅಧಿಕೃತ ಟಿ-20ಯಲ್ಲಿ ಈ ತನಕ ಯಾವುದೇ ಆಟಗಾರ ದ್ವಿಶತಕವನ್ನು ಬಾರಿಸಿಲ್ಲ. 

ನಿನ್ನೆಯ ಸ್ಥಳೀಯ ಟಿ-20 ಪಂದ್ಯದಲ್ಲಿ ಮೋಹಿತ್‌ ಅಹಲಾವತ್‌ ತ್ರಿಶತಕ ಬಾರಿಸಿರುವುದು ಟಿ-20 ನಮೂನೆಯ ಆಟದಲ್ಲಿ  ಅನೌಪಚಾರಿಕ ವಿಶ್ವ ದಾಖಲೆ ಎಂದೇ ಪರಿಗಣಿತವಾಗಿದೆ. ಈ ಮೂಲಕ ಮೋಹಿತ್‌ ತಾನು ಐಪಿಎಲ್‌ ಕೂಟದಲ್ಲಿ ಸ್ಥಾನ ಪಡೆಯಲು ಅರ್ಹನಿರುವ ಹೊಡಿಬಡಿಯ ದಾಂಡಿಗನೆಂಬುದನ್ನು ಸಾರಿದಂತಾಗಿದೆ.

Advertisement

ಮೋಹಿತ್‌ ಆಟದಲ್ಲಿ 18ನೇ ಓವರ್‌ ಮುಗಿದಾಗ ಆತನ ಗಳಿಕೆ 250 ಆಗಿತ್ತು. ಮುಂದಿನ ಕೊನೆಯ ಎರಡು ಓವರ್‌ಗಳಲ್ಲಿ ಆತ 50 ರನ್‌ ಬಾರಿಸಿ (ಕೊನೆಯ ಓವರ್‌ನಲ್ಲಿ 34 ರನ್‌) ತ್ರಿಶತಕದ ಸಾಧನೆ ದಾಖಲಿಸಿದ. ಕೊನೆಯ ಓವರ್‌ಗಳಲ್ಲಿ ನಿರಂತರ ಐದು ಸಿಕ್ಸರ್‌ ಬಾರಿಸುವ ಮೂಲಕ ಥ ತನ್ನ ಈ ವಿಶ್ವದಾಖಲೆಯನ್ನು ಮಾಡಿದ. 

ಈ ಹಿಂದೆ ಶ್ರೀಲಂಕೆಯ ಧಧುನಕಾ ಪತಿರಾಣಾ ಎಂಬ ಆಟಗಾರ 72 ಎಸೆತಗಳಲ್ಲಿ 277 ರನ್‌ ಬಾರಿಸಿ ಟಿ-20ಯ ಆವರೆಗಿನ ಅನೌಪಾರಿಕ ಗರಿಷ್ಠ ರನ್‌ ಬಾರಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next