Advertisement

14ರ ಬಾಲೆ ರುಬಿಕ್ಸ್‌ ಕ್ಯೂಬ್ಸ್ ನಲ್ಲಿ ವಿಶ್ವ ದಾಖಲೆ

04:45 PM Sep 07, 2021 | Team Udayavani |

ಬಂಗಾರಪೇಟೆ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾಧೆಗೆ ತಕ್ಕಂತೆ ಪಟ್ಟಣದ 14 ವರ್ಷದ ಬಾಲಕಿ ವಿಶ್ವದ ಕಿರಿಯ ರುಬಿಕ್ಸ್‌ ಕ್ಯೂಬ್ಸ್ ಶಿಕ್ಷಕಿ ಎಂದು ಇಂಟರ್‌ನ್ಯಾಷನಲ್‌ ಬುಕ್‌ ಆಫ್ ರೆಕಾರ್ಡ್ಸ್‌ ಸೇರಿ 8 ವಿಶ್ವ ದಾಖಲೆ ಪಡೆದಿದ್ದಾಳೆ.

Advertisement

ಇದಕ್ಕೆ ಅಮೆರಿಕಾದ ನಳಂದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಪ್ರಸ್ತುತ 9ನೇ ತರಗತಿ ಓದುತ್ತಿರುವ ಪಟ್ಟಣದ ಬಾಲಕಿ ಕೊಲ್ಲ ಕಮಲ್‌ ವಿಜಯ ಯುಕ್ತಾ 37 ಬಗೆಯ ರುಬಿಕ್ಸ್‌ ಕ್ಯೂಬ್‌ಗಳ ಬಗ್ಗೆ ಪರಿಣಿತಿ ಪಡೆದಿದ್ದು, ಆನ್‌ಲೈನ್‌, ಆಫ್ಲೈನ್‌ ಮೂಲಕ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾಳೆ. ಜುಲೈನಲ್ಲಿ ಕ್ರ್ಯಾಕ್‌ ಎ ಕ್ಯೂಬ್‌ ಎನ್ನುವ ಹೆಸರಲ್ಲಿ ಯು ಟೂಬ್‌ ಚಾನಲ್‌ ತೆರೆದು, ತಾನು ಅಭ್ಯಾಸ ಮಾಡುವ ವಿವಿಧ ರೀತಿಯ ವಿಡಿಯೋ ಅಪಲೋಡ್‌ ಮಾಡಿದ್ದಾಳೆ. ಇದುವರೆಗೂ 189 ಚಂದಾದಾರರಾಗಿದ್ದು, 2500 ಮಂದಿ ವೀಕ್ಷಿಸಿದ್ದಾರೆ.ಶೇಪ್‌, ಬ್ಯಾರಲ್‌ ಹೀಗೆ ವಿವಿಧ ರೀತಿಯ ಕ್ಯೂಬ್‌ಗಳ ಬಗ್ಗೆ ಆಸಕ್ತಿ ಹೊಂದಿರುವ ಬಾಲಕಿಗೆ 100ಕ್ಕಿಂತ ಹೆಚ್ಚು ಕ್ಯೂಬ್ಸ್ ಅಭ್ಯಾಸ ಮಾಡಿ, ವಿಶ್ವಾದ್ಯಂತ 600 ಮಕ್ಕಳಿಗೆ ಆನ್‌ ಲೈನ್‌ ತರಬೇತಿ ನೀಡುತ್ತಿದ್ದಾಳೆ.

ಇದನ್ನೂ ಓದಿ:ಮುಫ್ತಿ ಗೃಹಬಂಧನ : ಜ & ಕಾ ದ ವಸ್ತು ಸ್ಥಿತಿ ಏನೆಂಬುವುದು ಬಯಲಾಗಿದೆ : ಮಾಜಿ ಸಿಎಂ ಗರಂ

ಕ್ಯೂಬ್ಸ್ ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಉಲ್ಲಾಸ ಸಿಗಲಿದೆ. ಬುದ್ಧಿ ಚುರುಕಾಗಲಿದೆ. ಜ್ಞಾಪಕಶಕ್ತಿ ವೃದ್ಧಿಯಾಗಲಿದೆ.
ತಾಳ್ಮೆ, ಮನಸ್ಸು, ಕಣ್ಣು ಮತ್ತು ಕೈ ಬೆರಳುಗಳ ಸಮ ನ್ವಯ ಸಾಧಿಸಲು ಸಾಧ್ಯವಾಗಲಿದೆ. ಪಟ್ಟಣದ ಸ್ಮಾರ್ಟ್‌ ಕಿಡ್ಸ್‌ನಲ್ಲಿ 2 ವರ್ಷದ ಹಿಂದೆ 3×3 ರ ಬೇಸಿಕ್‌ ಕ್ಯೂಬ್ಸ್  ತರಬೇತಿ ಪಡೆದಿದ್ದು, ತಂದೆ ಕೆ.ಪಿ.ಕಮಲ್‌ ವಿಜಯ್‌, ತಾಯಿ ಕೆ.ಕೆ.ವಿದ್ಯಾಲಕ್ಷ್ಮೀ ಅವರ ಒತ್ತಾಯಕ್ಕೆ ಕ್ಯೂಬ್ಸ್ ತರಬೇತಿ ಪಡೆದ ಬಾಲಕಿಗೆ ಆರಂಭದಲ್ಲಿ ಅದರ ಬಗ್ಗೆ ಆಸಕ್ತಿ ತೋರಿಸಿಲ್ಲ.

2 ವರ್ಷದ ಬಳಿಕ ಬೆಂಗಳೂರಿನ ಅಂಗಡಿಯೊಂದರಲ್ಲಿ5×5 ಕ್ಯೂಬ್ಸ್ ಆಕೆಯ ಕಣ್ಣಿಗೆ ಬಿದ್ದಿದೆ. ಅದರಿಂದ ಆಕರ್ಷಿತಗೊಂಡು ಅತಿ ಕಡಿಮೆ ಅವಧಿ ಯಲ್ಲಿ 6×6, 7×7 ಹೀಗೆ 17×17 ಕ್ಯೂಬ್ಸ್ ವರೆಗೂ ಅಭ್ಯಾಸ ಮಾಡಿ, 3.5 ಕ್ಷಣದಲ್ಲಿ ಕ್ಯೂಬ್ಸ್ ಪೂರ್ಣಗೊಳಿಸಿ ದಾಖಲೆ ಬರೆದಿರುವುದು ವಿಶೇಷ ವಾಗಿದೆ.ಈಗಅಮೆರಿಕಾದಲ್ಲಿರುವ ನಳಂದ ವಿಶ್ವವಿದ್ಯಾಲಯ ಈಕೆಯ ಸಾಧನೆ ನೋಡಿ ಡಾಕ್ಟರೇಟ್‌ ನೀಡಿದೆ.

Advertisement

ರುಬಿಕ್ಸ್‌ ಕ್ಯೂಬ್ಸ್ ನಲ್ಲಿ ವಿಶ್ವ ದಾಖಲೆ ಬರೆದಿರುವ ಬಾಲಕಿ ಕೊಲ್ಲ ಕಮಲ್‌ ವಿಜಯ ಯುಕ್ತಾ ಅವರ ಜ್ಞಾನದ ಶಕ್ತಿಯನ್ನು ಮೆಚ್ಚಿ ಕೋಲಾರ ಸಂಸದ
ಎಸ್‌.ಮುನಿಸ್ವಾಮಿ, ಬೆಂಗಳೂರು ಸೆಂಟ್ರಲ್‌ ಸಂಸದ ತೇಜಸ್ವಿ ಸೂರ್ಯ, ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸೇರಿದಂತೆ ಅನೇಕ ಗಣ್ಯರು
ಶುಭಕೋರಿದ್ದಾರೆ.

ಮಗಳು ಕ್ರ್ಯಾಕ್‌ ಎ ಕ್ಯೂಬ್‌ ಎಂಬ ಯುಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದಾಳೆ.ಕ್ರ್ಯಾಕ್‌ ಎ ಕ್ಯೂಬ್‌ ಎಂಬ ಪುಸ್ತಕವನ್ನು ಅಮೆಜಾನ್‌ ಇ ಕಿಂಡಲ್‌ನಲ್ಲಿ
ಬಿಡುಗಡೆ ಮಾಡಿದ್ದಾಳೆ. ಇನ್ನೂ ಹೆಚ್ಚು ರೆಕಾರ್ಡ್‌ಗಳಿಗಾಗಿ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದಾಳೆ. ಇಂತಹ ಮಗಳನ್ನು ಪಡೆದಿರುವ ನಾವೇ ಧನ್ಯರು.
-ಕೆ.ಕೆ.ವಿದ್ಯಾಲಕ್ಷ್ಮೀ, ವಿಶ್ವ ದಾಖಲೆ
ವಿಜೇತೆ ಯುಕ್ತಾ ತಾಯಿ

-ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.