Advertisement

ಹೊಸ ವರ್ಷಕ್ಕೆ ಜಗತ್ತಿನ ಜನಸಂಖ್ಯೆ ಏರಿಕೆ

11:34 PM Dec 30, 2022 | Team Udayavani |

ವಾಷಿಂಗ್ಟನ್‌: ಹೊಸ ವರ್ಷದ ದಿನಕ್ಕೆ (2023 ಜ.1) ಜಗತ್ತಿನ ಒಟ್ಟು ಜನಸಂಖ್ಯೆ 7.9 ಬಿಲಿಯನ್‌ಗೆ ಏರಿಕೆಯಾಗಲಿದೆ. ಈ ಬಗ್ಗೆ ಅಮೆರಿಕ ಸರಕಾರದ ಜನಸಂಖ್ಯಾ ವಿಭಾಗ ಮಾಹಿತಿ ನೀಡಿದೆ.

Advertisement

2022 ಜ.1ರ ಮಾಹಿತಿಗೆ ಹೋಲಿಕೆ ಮಾಡಿದಾಗ 73.7 ಬಿಲಿಯನ್‌ಗಳಷ್ಟು ವೃದ್ಧಿಯಾಗಲಿದೆ ಎಂದು ಅದು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಅಂದರೆ ಶೇ.0.9 ಹೆಚ್ಚಾಗಲಿದೆ. 2023ರ ಜನವರಿಯಲ್ಲಿ ಪ್ರತೀ ಸೆಕೆಂಡ್‌ಗೆ ಜಗತ್ತಿನಲ್ಲಿ ಇಬ್ಬರು ಅಸುನೀಗಿದರೆ, 4.3 ಮಂದಿ ಜನಿಸಲಿದ್ದಾರೆ ಎಂದು ಹೇಳಿದೆ. ಇನ್ನು ಅಮೆರಿಕದ ಲೆಕ್ಕಾಚಾರಕ್ಕೆ ಸಂಬಂಧಿ ಸಿದಂತೆ ಜ. 1ರ ವೇಳೆಗೆ 334.2 ಮಿಲಿಯನ್‌ ಮಂದಿ ಇರಲಿದ್ದಾರೆ. 2022 ಜ.1ರ ಸಾಂಖೀಕ ಅಂಶಗಳನ್ನು ನೋಡಿ ದಾಗ ಶೇ.0.5 ಹೆಚ್ಚಾಗಲಿದೆ.

ಪ್ರತೀ 10 ಸೆಕೆಂಡ್‌ಗೆ ಒಂದು ಸಾವು, ಪ್ರತೀ 9 ಸೆಕೆಂಡ್‌ಗೆ ಒಂದು ಶಿಶುವಿನ ಜನನವಾಗಲಿದೆ ಎಂದು ಅಮೆರಿಕ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next