ಹೊಸದಿಲ್ಲಿ : ಭಾರತದ ಪಾಸ್ ಪೋರ್ಟ್ ವಿಶ್ವದ ಅತ್ಯಂತ ಸದೃಢ ಮತ್ತು ಶಕ್ತಿಯುತ ಪಾಸ್ ಪೋರ್ಟ್ ಎನಿಸಿಕೊಂಡಿದ್ದು ಜಾಗತಿಕ ಇಂಡೆಕ್ಸ್‌ನಲ್ಲಿ 79ನೇ ಸ್ಥಾನವನ್ನು ಪಡೆದಿದೆ.
33 ದೇಶಗಳ ರಹದಾರಿ ಹೊಂದಿರುವ ಪಾಕಿಸ್ಥಾನದ ಪಾಸ್ ಪೋರ್ಟ್ 102ನೇ ನಿಕೃಷ್ಟ ಸ್ಥಾನದಲ್ಲಿದೆ. ಅತ್ಯಂತ ಕೆಳ ಮಟ್ಟದ ನಿಕೃಷ್ಟತೆಯಲ್ಲಿ ಅಫ್ಘಾನಿಸ್ಥಾನದ ಪಾಸ್ ಪೋರ್ಟ್ 104ನೇ ಸ್ಥಾನ ಪಡೆದಿದೆ; ಇರಾಕ್ ಪಾಸ್ ಪೋರ್ಟ್ 103ನೇ ಸ್ಥಾನದಲ್ಲಿದೆ.
ಹೆನ್ಲಿ ಆ್ಯಂಡ್ ಪಾರ್ಟ್‌ನರ್ ವಿಶ್ವದ ವಿವಿಧ ದೇಶಗಳ ಪಾಸ್ ಪೋರ್ಟ್ ಇಂಡೆಕ್ಸ್ ರೂಪಿಸಿದೆ. ಆ ಪ್ರಕಾರ ಈ ಸ್ಥಾನಮಾನಗಳು ಬಹಿರಂಗವಾಗಿವೆ. ಈ ಸ್ಥಾನಮಾನದ ಮೂಲಕ ಯಾವ ದೇಶದ ಪಾಸ್ ಪೋರ್ಟ್ ಎಷ್ಟು ಪ್ರವಾಸಿ ಸ್ನೇಹಿಯಾಗಿದೆ; ಯಾವುದೇ ಪೂರ್ವ-ವೀಸಾ ಇಲ್ಲದೆ ಎಷ್ಟು ಗರಿಷ್ಠ ಸಂಖ್ಯೆಯ ದೇಶಗಳಿಗೆ ರಹದಾರಿಯನ್ನು ಯಾವ ದೇಶದ ಪಾಸ್ ಪೋರ್ಟ್ ಕಲ್ಪಿಸುತ್ತದೆ ಎಂಬಿತ್ಯಾದಿ ಮಾನದಂಡಗಳಿಗೆ ಈ ಇಂಡೆಕ್ಸ್ ಕನ್ನಡಿ ಹಿಡಿಯುತ್ತದೆ.
ಭಾರತೀಯ ಪಾಸ್ ಪೋರ್ಟ್ ಹೊಂದಿರವವರಿಗೆ ಪ್ರವಾಸ ಪೂರ್ವ ವೀಸಾ ಇಲ್ಲದೆಯೇ 61 ದೇಶಗಳಿಗೆ ರಹದಾರಿ ಇರುತ್ತದೆ. ಪಾಕ್ ಪಾಸ್ ಪೋರ್ಟ್ ಗಿಂತ ಇದು ದುಪ್ಪಟ್ಟು ಇರುವುದು ಗಮನಾರ್ಹವಾಗಿದೆ.
ಸಮರತ್ರಸ್ತ ದೇಶಗಳಾಗಿರುವ ಸೊಮಾಲಿಯಾ, ಸಿರಿಯಾ, ಅಫ್ಘಾನಿಸ್ಥಾನ ಮತ್ತು ಇರಾಕ್ ಗಿಂತ ಪಾಕಿಸ್ಥಾನದ ಪಾಸ್ ಪೋರ್ಟ್ ‘ಉತ್ತಮ’ ಎಂದಷ್ಟೇ ಹೇಳಬಹುದಾಗಿದೆ.