Advertisement
ವಾಯುಮಂಡಲದಲ್ಲಿ ಈ ರಕ್ಷಣಕವಚ ಇಲ್ಲದೇ ಹೋಗಿದ್ದಲ್ಲಿ ಸೂರ್ಯನಿಂದ ಹೊರಸೂಸಲ್ಪಡುವ ಅತಿನೇರಳೆ ಕಿರಣಗಳಿಗೆ ಎಲ್ಲ ಜೀವಸಂಕುಲ ಬಲಿಯಾಗಬೇಕಿತ್ತು. ಆದರೆ ಪ್ರಕೃತಿದತ್ತವಾಗಿ ಈ ಪದರ ಮಹಾಕಂಟಕದಿಂದ ಜೀವರಾಶಿಯನ್ನು ಪಾರುಮಾಡಿದೆ. ಆದರೆ ಜಾಗತೀಕರಣ, ಅಭಿವೃದ್ಧಿಯ ಹೆಸರಿನಲ್ಲಿ ಮಾನವನು ಪ್ರಕೃತಿಯ ಮೇಲೆ ನಿರಂತರವಾಗಿ ಎಸಗುತ್ತಿರುವ ದೌರ್ಜನ್ಯದಿಂದ ಈ ಪದರ ಕೂಡ ಹಾನಿಗೀಡಾಗುತ್ತಿದೆ. ಈಗಾಗಲೇ ಪದರದಲ್ಲಿ ರಂಧ್ರ ಕಾಣಿಸಿಕೊಂಡಿದ್ದು ವರ್ಷಗಳುರುಳಿದಂತೆ ಇದು ದೊಡ್ಡದಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಅತಿಯಾದ ಕೈಗಾರಿಕೀಕರಣದ ಪರಿಣಾಮ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುತ್ತಿದ್ದು ಇದರಿಂದಾಗಿ ಓಝೋನ್ ಪದರ ಸವೆಯತೊಡಗಿದೆ. ಓಝೋನ್ ಪದರ ಸವೆತವನ್ನು ತಡೆಗಟ್ಟುವ ಮತ್ತು ಅದನ್ನು ಸಂರಕ್ಷಿಸುವ ಸಲುವಾಗಿ ಪ್ರತೀ ವರ್ಷ ಸೆ. 16ರಂದು ವಿಶ್ವಾದ್ಯಂತ ಓಝೋನ್ ದಿನವನ್ನು ಆಚರಿಸಲಾಗುತ್ತದೆ.
Related Articles
Advertisement
ದಿನದಿಂದ ದಿನಕ್ಕೆ ಓಝೋನ್ ಪದರ ಹಾನಿಗೀಡಾಗುತ್ತಿದ್ದು ಇದನ್ನು ಸಂರಕ್ಷಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಓಝೋನ್ ಪದರಕ್ಕೆ ಹಾನಿ ಉಂಟು ಮಾಡುವ ವಸ್ತುಗಳ ಬಳಕೆಗೆ ಕಡಿವಾಣ ಮತ್ತು ಮುನ್ನೆ ಚ್ಚ ರಿಕೆ ಕ್ರಮ ವನ್ನು ಅನು ಸರಿಸುವ ನಿಟ್ಟಿ ನಲ್ಲಿ 1987ರ ಸೆ. 16ರಂದು ವಿಯೆನ್ನಾ ದಲ್ಲಿ ಓಝೋನ್ ಪದರ ರಕ್ಷಣೆಯ ಕುರಿತಾಗಿ ನಡೆದ ಮೊದಲ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ವಿಶ್ವಸಂಸ್ಥೆಯ 45 ದೇಶಗಳು “ಮಾಂಟ್ರಿಯಲ್ ಪ್ರೊಟೋಕಾಲ್’ಗೆ ಸಹಿ ಹಾಕಿದವು. ಆ ಬಳಿಕ 1994ರ ಡಿಸೆಂಬರ್ 19ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷ ಸೆ. 16ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ಪ್ರಸ್ತುತ 197 ರಾಷ್ಟ್ರಗಳು “ಮಾಂಟ್ರಿಯಲ್ ಪ್ರೊಟೋಕಾಲ್’ ಅನ್ನು ಸಾರ್ವತ್ರಿಕ ವಾಗಿ ಅಂಗೀಕರಿಸಿವೆ. ಓಝೋನ್ ಪದರಕ್ಕೆ ಹಾನಿಕಾರಕ ವಾದ ವಸ್ತುಗಳು ಮತ್ತು ಅನಿಲಗಳ ಉತ್ಪಾದನೆ ಮತ್ತು ಬಳಕೆಗೆ ಕಡಿವಾಣ ಹಾಕುವುದು ಈ ಪ್ರೊಟೋಕಾಲ್‌ನ ಮುಖ್ಯ ಉದ್ದೇಶವಾಗಿದೆ. ಕ್ಲೋರೋಫ್ಯೂರೋ, ಇಂಗಾಲದಂತಹ ರಾಸಾಯನಿಕಗಳಿಂದಾಗಿ ಓಜೋನ್ ಪದರ ತೆಳುವಾಗುತ್ತಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದು ಇನ್ನೂ ಹೆಚ್ಚು ಹಾನಿಯಾಗದಂತೆ ಪೂರ್ವ ನಿರ್ಧರಿತ ಕ್ರಮ ಅನುಸರಿಸುವಂತೆ ವಿಶ್ವದೆಲ್ಲೆಡೆಯಿಂದ ಒಕ್ಕೊರಲ ಆಗ್ರಹ ಕೇಳಿ ಬರುತ್ತಿದೆ.
ಓಝೋನ್ ಪದರ ಹಾನಿಯಾಗಲು ಮುಖ್ಯ ಕಾರಣಗಳು :
- ವಾಹನಗಳು ಹೊರಸೂಸುವ ಹೊಗೆ
- ಕೈಗಾರಿಕ ಬೆಳವಣಿಗೆ
- ಕಾರ್ಖಾನೆಯಿಂದ ಹೊರಹೊಮ್ಮುವ ವಿಷಕಾರಿ ಅನಿಲಗಳು
- ಬ್ರೋಮಿನ್, ಹೈಡ್ರೋ ಫ್ಲೋರೋ ಕಾರ್ಬನ್, ಕ್ಲೋರೋಫೂÉರೋ ಕಾರ್ಬನ್, ಮಿಥೇನ್ ಮುಂತಾದ ಅನಿಲಗಳು.
- ಹವಾಮಾನ ವೈಪರೀತ್ಯ
- ಪರಿಸರ ನಾಶ
- ಪರಿಸರಸಹ್ಯ ವಸ್ತುಗಳ ಬಳಕೆಗೆ ಹೆಚ್ಚಿನ ಉತ್ತೇಜನ.
- ಸಾಧ್ಯವಾದಷ್ಟು ವಸ್ತುಗಳ ಪುನರ್ ಬಳಕೆಗೆ ಒತ್ತು.
- ಪ್ರಾಕೃತಿಕ ಸಂಪನ್ಮೂಲವನ್ನು ಉಳಿಸುವುದು.
- ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು
- ಕನಿಷ್ಠ ಮಟ್ಟಕ್ಕೆ ಇಳಿಸುವುದು.