Advertisement

ಜಿಮ್ಸ್‌ನಲ್ಲಿ ವಿಶ್ವ ನರ್ಸಿಂಗ್‌ ದಿನಾಚರಣೆ

01:42 PM May 13, 2020 | Suhan S |

ಗದಗ: ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ ಮಂಗಳವಾರ ಪ್ಲಾರೆನ್ಸ್‌ ನೈಟೆಂಗಲ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ವಿಶ್ವ ನರ್ಸಿಂಗ್‌ ದಿನ ಆಚರಿಸಲಾಯಿತು.

Advertisement

ನೈಟೆಂಗಲ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ವಿಪ ಸದಸ್ಯ ಎಸ್‌.ವಿ. ಸಂಕನೂರು, ನೈಟಿಂಗಲ್‌ ಅವರು ನರ್ಸಿಂಗ್‌ ಕ್ಷೇತ್ರದಲ್ಲಿ ಮಾಡಿದ ಮಾನವೀಯ ಸೇವೆಯನ್ನು ಸ್ಮರಿಸಿದರು.

ಜಿಮ್ಸ್‌ ಮೆಡಿಕಲ್‌ ಕಾಲೇಜದಲ್ಲಿ ಕೋವಿಡ್‌ ವಾರಿಯರ್ಸ್‌ ಸೇವೆಯನ್ನು ಶ್ಲಾಘಿಸಿದರು. ಇದೇ ವೇಳೆ ಜಿಮ್ಸ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗಳ ಶುಶ್ರೂಷಕರನ್ನು ಸನ್ಮಾನಿಸಲಾಯಿತು.

ಜಿಮ್ಸ್  ಕಾಲೇಜಿನ ನಿರ್ದೇಶಕರಾದ ಡಾ| ಪಿ.ಎಸ್‌. ಬೂಸರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಕಾಲೇಜಿನ ಪ್ರಾಚಾರ್ಯ ಎಸ್‌.ಆರ್‌. ದೇಶಪಾಂಡೆ, ಡಾ| ಬಿ.ಸಿ. ಕರಿಗೌಡರ, ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ರೇಖಾ ಸೋನಾವಾನೆ, ಡಾ| ಸೋಮಶೇಖರ ಬಿಜ್ಜಳ, ಕಾಲೇಜಿನ ಮೆಡಿಕಲ್‌ ಅಧೀಕ್ಷಕ ಕೇಶವ್‌ ಅಬ್ಬಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next