ರೋಹಿತ್ ಅವರ ಜೀವನಶ್ರೇಷ್ಠ ಶ್ರೇಯಾಂಕ ಆಗಿದೆ.
Advertisement
ಇದೇ ವೇಳೆ ಭಾರತ ವಿಶ್ವ ನಂ.1 ತಂಡವಾಗುವ ಅತ್ಯಮೂಲ್ಯ ಅವಕಾಶ ಕಳೆದುಕೊಂಡಿದ್ದು ಬೇಸರದ ಸಂಗತಿ. ಭಾರತ ತಂಡ 3-0ಯಿಂದ ಶ್ರೀಲಂಕಾ ವಿರುದ್ಧ ಗೆದ್ದಿದ್ದರೆ ವಿಶ್ವ ನಂ.1 ಎನಿಸಿಕೊಳ್ಳುತ್ತಿತ್ತು. ಮೊದಲ ಪಂದ್ಯ ಸೋತಿದ್ದರಿಂದ ಈ ಅವಕಾಶ ತಪ್ಪಿ ಹೋಗಿದೆ. ವಿಶಾಖಪಟ್ಟಣದಲ್ಲಿ ಅಜೇಯ ಶತಕ ಹೊಡೆದ ಎಡಗೈ ಆರಂಭಕಾರ ಶಿಖರ್ ಧವನ್ ಒಂದು ಮೆಟ್ಟಿಲು ಮೇಲೇರಿದ್ದು, ಶ್ರೇಯಾಂಕ ಪಟ್ಟಿಯಲ್ಲಿ 14ನೇ ಸ್ಥಾನಕ್ಕೆ ಬಂದಿದ್ದಾರೆ. ಸರಣಿಯಲ್ಲಿ ಧವನ್ ಒಟ್ಟು 168 ರನ್ ಹೊಡೆದರು. ಬೌಲಿಂಗ್ ವಿಭಾಗದಲ್ಲಿ ಯಜುವೇಂದ್ರ ಚಹಲ್ 23 ಸ್ಥಾನಗಳ ಜಿಗಿತ ಕಂಡಿದ್ದಾರೆ. ಸರಣಿಯಲ್ಲಿ 6 ವಿಕೆಟ್ ಕಿತ್ತ ಅವರೀಗ 28ನೇ ಸ್ಥಾನಕ್ಕೆ ಬಂದಿದ್ದಾರೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರದು 16 ಸ್ಥಾನಗಳ ನೆಗೆತ. ಯಾದವ್ ಈಗ 55ನೇ ಸ್ಥಾನದಲ್ಲಿದ್ದಾರೆ. ಇದು ಅವರ ಅತ್ಯುತ್ತಮ ಶ್ರೇಯಾಂಕ. ಶ್ರೀಲಂಕಾದ ಬ್ಯಾಟಿಂಗ್ ಸರದಿಯಲ್ಲಿ ಉಪುಲ್ ತರಂಗ, ನಿರೋಶನ್ ಡಿಕ್ವೆಲ್ಲ; ಬೌಲಿಂಗ್‌ನಲ್ಲಿ ಸುರಂಗ ಲಕ್ಮಲ್ ಮತ್ತು ಏಂಜೆಲೊ ಮ್ಯಾಥ್ಯೂಸ್ ಅವರಿಗೆ ಒಂದಿಷ್ಟು ಲಾಭವಾಗಿದೆ.
ಸರಣಿಯನ್ನು 2-1 ಅಂತರದಿಂದ ಗೆದ್ದ ಕಾರಣ ಭಾರತಕ್ಕೆ ನಂ.1 ಸ್ಥಾನಕ್ಕೇರಲಾಗಲಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾದ ಅಗ್ರಸ್ಥಾನಕ್ಕೇನೂ ಅಡ್ಡಿಯಾಗಿಲ್ಲ. ಭಾರತ ಮೊದಲ ಪಂದ್ಯವನ್ನು ಸೋತು ಒಂದು ಅಂಕವನ್ನು ಕಳೆದುಕೊಂಡಿದೆ. ಟೀಮ್ ಇಂಡಿಯಾದ ಅಂಕವೀಗ 119ಕ್ಕೆ ಇಳಿದಿದ್ದು, ದಕ್ಷಿಣ ಆಫ್ರಿಕಾ 120 ಅಂಕ ಹೊಂದಿದೆ. ಶ್ರೀಲಂಕಾವನ್ನು 3-0 ಅಂತರದಿಂದ ಸೋಲಿಸಿದ್ದೇ ಆದಲ್ಲಿ ಭಾರತ 121 ಅಂಕದೊಂದಿಗೆ ನಂ.1 ಏಕದಿನ ತಂಡವಾಗಿ ಹೊರಹೊಮ್ಮುತ್ತಿತ್ತು.