Advertisement
ಯುಕೆಡೆಲ್ಟಾ ರೂಪಾಂತರಿಯು ಯುನೈಟೆಡ್ ಕಿಂಗ್ ಡಮ್‌ನಲ್ಲಿ ಹೊಸ ಆತಂಕ ಸೃಷ್ಟಿಸಿದೆ. ಶುಕ್ರವಾರ ಒಂದೇ ದಿನ ಬರೋಬ್ಬರಿ 54,268 ಪ್ರಕರಣಗಳು ದೃಢಪಟ್ಟಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಶೇ.32ರಷ್ಟು ಹೆಚ್ಚಳವಾಗಿದೆ. ಇಲ್ಲಿನ ಸೋಂಕಿತರ ಪೈಕಿ ಶೇ.99 ಮಂದಿಗೆ ಹರಡಿರುವುದು ಡೆಲ್ಟಾ ರೂಪಾಂತರಿ. ಇನ್ನು ಡೆಲ್ಟಾ ಪ್ಲಸ್‌ನ 44 ಪ್ರಕರಣಗಳೂ ಪತ್ತೆಯಾಗಿರುವುದು ಯು.ಕೆ. ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಅಮೆರಿಕದಲ್ಲೂ ಡೆಲ್ಟಾದಿಂದಾಗಿ ಕೇಸುಗಳು ಗಣನೀಯವಾಗಿ ಹೆಚ್ಚುತ್ತಿವೆೆ. ಜುಲೈ 6ರ ವೇಳೆಗೆ 7 ದಿನಗಳ ಸರಾಸರಿ ಪ್ರಕರಣ 13,859 ಆಗಿದ್ದು, ಹಿಂದಿನ ಎರಡು ವಾರಗಳಿಗೆ ಹೋಲಿಸಿದರೆ ಇದು ಶೇ.21ರಷ್ಟು ಹೆಚ್ಚಳವಾಗಿದೆ. ಸೋಂಕಿತರ ಪೈಕಿ ಶೇ.93 ಮಂದಿಗೆ ತಗಲಿರುವುದು ಡೆಲ್ಟಾ ವೇರಿಯೆಂಟ್. ಅಮೆರಿಕದಲ್ಲಿ ಸದ್ಯ 8 ರೂಪಾಂತರಿಗಳು ಸದ್ದು ಮಾಡುತ್ತಿವೆ. ಕೆನಡಾ
ಕಳೆದ ವರ್ಷ ಪೆರುವಿನಲ್ಲಿ ಪತ್ತೆಯಾದ ಲಾಂಬಾx ರೂಪಾಂತರಿಯು ಈಗ ಕೆನಡಾದ ನಿದ್ದೆಗೆಡಿಸಿದೆ.
ಈಗಾಗಲೇ 27 ಪ್ರಕರಣಗಳು ಪತ್ತೆಯಾಗಿದ್ದು, ಇದು ಕೂಡ ಡೆಲ್ಟಾ ಮಾದರಿಯಲ್ಲೇ ಭಾರೀ ವೇಗವಾಗಿ ಹಬ್ಬುವ ರೂಪಾಂತರಿಯಾಗಿದೆ. ಒಟ್ಟಾರೆ 25 ದೇಶಗಳಲ್ಲಿ ಲಾಂಬಾx ಕಂಡುಬಂದಿದೆ.
Related Articles
ಪಾಕ್ ನಲ್ಲೂ ಸೋಂಕು ಹೆಚ್ಚಳವಾಗುತ್ತಿದ್ದು, 24 ಗಂಟೆಗಳಲ್ಲಿ 1,828 ಪ್ರಕರಣ ಪತ್ತೆಯಾಗಿದೆ. ಈ ಪೈಕಿ ಸಿಂಧ್ ಪ್ರಾಂತ್ಯವೊಂದರಲ್ಲೇ 1,046 ಕೇಸುಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಇಲ್ಲಿ ಲಸಿಕೆ ಪ್ರಮಾಣ ಪತ್ರ ಇರುವವರಿಗಷ್ಟೇ ಆಸ್ಪತ್ರೆಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆಯದವರು ಸರಕಾರಿ ಉದ್ಯೋಗದ ಸಂದರ್ಶನಕ್ಕೆ ಬರುವಂತಿಲ್ಲ, ಸರಕಾರಿ ಸಾರಿಗೆಗಳಲ್ಲಿ ಪ್ರಯಾಣಿಸುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದೆ.
Advertisement
ಆಸ್ಟ್ರೇಲಿಯಾಇಲ್ಲಿನ ನ್ಯೂ ಸೌತ್ ವೇಲ್ಸ್‌ನಲ್ಲಿ ಕೊರೊನಾ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ. ಸಿಡ್ನಿಯಲ್ಲಿ ಈಗಾಗಲೇ 2 ವಾರಗಳ ಲಾಕ್ ಡೌನ್ ಘೋಷಿಸಲಾಗಿದ್ದು, ಇದನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿದೆ. ಡೆಲ್ಟಾ ರೂಪಾಂತರಿಯು ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಆರೋಗ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ರಷ್ಯಾ
2020ರ ಜೂನ್‌ಗೆ ಹೋಲಿಸಿದರೆ ಈ ವರ್ಷದ ಜೂನ್ ನಲ್ಲಿ ರಷ್ಯಾದಲ್ಲಿ ಸೋಂಕಿತರ ಸಾವು ಪ್ರಕರಣಗಳು ಶೇ.14ರಷ್ಟು ಹೆಚ್ಚಳವಾಗಿವೆೆ. ಸಾವು ಈ ಪ್ರಮಾಣದಲ್ಲಿ ಹೆಚ್ಚಲು ಡೆಲ್ಟಾ ರೂಪಾಂತರಿಯೇ ಕಾರಣ ಎಂದು ಕೋವಿಡ್ ಕಾರ್ಯಪಡೆ ಹೇಳಿದೆ. ಶುಕ್ರವಾರ ಒಂದೇ ದಿನ 25,766 ಪ್ರಕರಣಗಳು ಪತ್ತೆಯಾಗಿವೆೆ.