Advertisement

ವಿಶ್ವ ಮಾತೃ ಭಾಷಾ ದಿನಾಚರಣೆ

03:51 PM Feb 23, 2017 | Harsha Rao |

ಕಾಸರಗೋಡು: ಪೆರ್ಲದ ಮಾದರಿ ವಿಕಸನ ವಿದ್ಯಾ ಕೇಂದ್ರದಲ್ಲಿ  ವಿಶ್ವ ಮಾತೃ ಭಾಷಾ ದಿನಾಚರಣಾ ಕಾರ್ಯಕ್ರಮ ನಡೆಯಿತು.

Advertisement

ಎಣ್ಮಕಜೆ ಗ್ರಾಮ ಪಂಚಾಯತ್‌ ಸದಸ್ಯೆ ಶಾರದಾ ವೈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಎಣ್ಮಕಜೆ  ಗ್ರಾಮ ಪಂಚಾಯತ್‌ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್‌ ಉದ್ಘಾಟಿ ಸಿದರು. ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಉದಯ ಚೆಟ್ಟಿಯಾರ್‌, ಪಂಚಾಯತ್‌ ಸದಸ್ಯರಾದ ಮಲ್ಲಿಕಾ ರೈ, ಸ‌ತೀಶ್‌ ಕುಲಾಲ್‌ ನಲ್ಕ, ಐತ್ತಪ್ಪ ಕುಲಾಲ್‌, ಪುಷ್ಪಾ ಶೇಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಕೃಷ್ಣ ಮಾಸ್ತರ್‌ ಪೆಲ್ತಾಜೆ ಮಾತೃ ಭಾಷೆಯಿಂದ ಸಂಸ್ಕೃತಿ ಅನಾವರಣಗೊಳ್ಳುತ್ತದೆ. ಮಾತೃ ಭಾಷೆ ಎನ್ನುವುದು ಹೆತ್ತ ತಾಯಿಗೆ ಸಮಾನ. ಹತ್ತು ಭಾಷೆಗಳನ್ನು ಮಾತನಾಡಿದರೂ ಹೆತ್ತ ಭಾಷೆಗೆ ಪ್ರಥಮ ಆದ್ಯತೆಯನ್ನು ನೀಡಬೇಕಾದುದು ನಮ್ಮ ಮೂಲ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಸಾಕ್ಷರತಾ ಜಿಲ್ಲಾ ಪ್ರೇರಕ್‌ ಪರಮೇಶ್ವರ ನಾಯ್ಕ ಸ್ವಾಗತಿಸಿದರು. ಸಿಡಿಯಸ್‌ ಅಧ್ಯಕ್ಷೆ ಯಾಸ್ಮಿನ್‌ ಎಂ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next