Advertisement

ದೊಡ್ಡಬಳ್ಳಾಪುರ ಕೆರೆಗಳಲ್ಲಿ ವಲಸೆ ಹಕ್ಕಿಗಳ ಕಲರವ!

03:07 PM May 09, 2020 | mahesh |

ದೊಡ್ಡಬಳ್ಳಾಪುರ: ಮೇ 9 ವಿಶ್ವ ವಲಸೆ ಹಕ್ಕಿಗಳ ಸಂರಕ್ಷಣೆ ದಿನ. ನಗರದ ನಾಗರಕೆರೆ ಸೇರಿದಂತೆ ತಾಲೂಕಿನ ಶಿವಪುರ ಕೆರೆ, ಮಧುರೆ ಕೆರೆ, ಬಾಶೆಟ್ಟಿಹಳ್ಳಿ ಕೆರೆ, ಘಾಟಿ ವಿಶ್ವೇಶ್ವರಯ್ಯ
ಪಿಕ್‌ಅಪ್‌ ಮೊದಲಾದ ಕಡೆ ವಿವಿಧ ಜಾತಿ ವಲಸೆ ಹಕ್ಕಿಗಳ ಕಲರವ ಶುರುವಾಗಿದೆ. ತಾಲೂಕಿನ ಕೆರೆಗಳಿಗೆ ವಿವಿಧ ದೇಶಗಳ, ರಾಜ್ಯಗಳ ವಲಸೆ ಹಕ್ಕಿಗಳು ಬಂದಿರುವುದು ಪರಿಸರ ಪ್ರಿಯರಲ್ಲಿ ಸಂತಸ ಹೆಚ್ಚಿಸಿದರೆ, ಹಕ್ಕಿ ಗಳು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪರಿಸರಾಸಕ್ತರು ತಾಲೂಕು ಆಡಳಿತದ ಗಮನ ಸೆಳೆದಿದ್ದಾರೆ. “ಪಕ್ಷಿಗಳು ನಮ್ಮ ಜಗತ್ತನ್ನು ಸಂಪರ್ಕಿಸುತ್ತವೆ’ ಇದು ಈ ವರ್ಷದ ಧ್ಯೇಯ ವಾಕ್ಯವಾಗಿದೆ.

Advertisement

ವಿವಿಧ ಜಾತಿಯ ಹಕ್ಕಿಗಳು: ನಗರದ ಕೆರೆ ಗಳಲ್ಲಿ ವಿವಿಧ ದೇಶಗಳ ವಲಸೆ ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಸಾವಿರಾರು ಮೈಲು ಗಳು ದೂರದಿಂದ ಬಂದಿವೆ. ಮತ್ತೆ ತಮ್ಮ ಸಂತಾ ನೋತ್ಪತ್ತಿ ಕಾರ್ಯ ಮುಗಿದ ಬಳಿಕ ತಮ್ಮ ಮೂಲ ಸ್ಥಾನಗಳಿಗೆ ತೆರಳುತ್ತವೆ. ತಾಲೂಕಿನ ಸುತ್ತ ಮುತ್ತ ಚಲುಕ ಬಾತು, ಸೂಜಿಬಾಲದ ಬಾತು, ಬಿಳಿ ಹುಬ್ಬಿನ ಬಾತು, ಜೌಗು ಸೆಳೆವ, ಅಡವಿ ಗದ್ದೆಗೊರವ, ಕವಲು ತೋಕೆ, ಗುಲಾಬಿ ಕಬ್ಬಕ್ಕಿ, ಬೂದು ಸಿಪಿಲೆ, ಉಲಿಯಕ್ಕಿ ಗಳು ಸೇರಿದಂತೆ 100ಕ್ಕೂ ಹೆಚ್ಚು ಪ್ರಭೇ ದದ ದೇಶಿ ಹಾಗೂ ವಿದೇಶಿ ವಲಸೆ ಹಕ್ಕಿಗಳು ಬಂದಿವೆ. ಯುರೋಪ್‌, ಉತ್ತರ ಅಮೆರಿಕ, ಏಷ್ಯಾದ ರಾಷ್ಟ್ರ ಗಳಿಂದ ಅಕ್ಟೋಬರ್‌ನಲ್ಲಿ ವಲಸೆ ಬಂದು ಜೂನ್‌ ಮಳೆ ಗಾಲದ ಒಳಗಾಗಿ ಹಿಂದಿರುಗುತ್ತವೆ. ಹಕ್ಕಿಗಳ ಸಮಸ್ಯೆಗಳು: ವಲಸೆ ಬರುವ ಹಕ್ಕಿ ಗಳು ಆಹಾರದ
ಕೊರತೆ, ಕೆರೆಗಳ ಬಳಿ ಮನು ಷ್ಯರ ಓಡಾಟ, ಬಲೆ ಹಾಕಿ ಪಕ್ಷಿ ಬೇಟೆ, ಕೆರೆ ನೀರು ಮಲಿನಗೊಳ್ಳುವಿಕೆ, ಚರಂಡಿ ನೀರು ಹಾಗೂ ಕಸ ಕೆರೆ ಸೇರುತ್ತಿರುವುದು. ಕೃಷಿ ಭೂಮಿಯ ಕೀಟ
ನಾಶಕ ಹಾಗೂ ಕ್ರಿಮಿನಾಶಕ ಗಳು ಮಳೆ ನೀರಿನೊಂದಿಗೆ ಕೆರೆ ಸೇರುತ್ತಿದೆ. ಮರಗಳನ್ನು ಕಡಿಯುವುದು, ಹಸಿರು ಪ್ರದೇಶಗಳ ಕೊರತೆ ಉಂಟಾಗಿದೆ. ಈ ಸಮಸ್ಯೆಗಳನ್ನು ಬಗೆ
ಹರಿಸಿ ಪೂರಕ ವಾತಾವರಣ ನಿರ್ಮಿಸಬೇಕಿದೆ ಎನ್ನುತ್ತಾರೆ ಡಬ್ಲ್ಯೂ. ಡಬ್ಲ್ಯೂ.ಎಫ್‌ ಇಂಡಿಯಾದ ಯೋಜನಾಧಿಕಾರಿ ವೈ.ಟಿ.ಲೋಹಿತ್‌.

ಮೀನು ಹಿಡಿಯುವುದು ನಿಷೇಧಿಸಿ: ತಾಲೂ ಕಿನ ಕೆರೆಗಳು ಪಕ್ಷಿಧಾಮಗಳಾಗುವ ಸಾಧ್ಯತೆ ಯಿದ್ದು, ಮೀನು ಹಿಡಿ ಯ ವಿಕೆ ನಿಷೇಧ ಗೊಳ್ಳಬೇಕಿದೆ. ಕೊಕ್ಕರೆ ಹಾಗೂ ಇತರೆ ನೀರು ಪಕ್ಷಿಗಳಿಗೆ ಆಹಾರ ದೊರೆಯದೆ ಪರದಾಡು ತ್ತಿವೆ. ಹೀಗಾಗಿ ಪಕ್ಷಿಗಳ ಆಹಾರಕ್ಕಾಗಿಯಾ ದರೂ ಮೀನು ಹಿಡಿಯು ವುದನ್ನು ಹಾಗೂ ಕೆರೆಗಳಲ್ಲಿ ತ್ಯಾಜ್ಯ ವಿಲೇವಾರಿ ನಿಲ್ಲಿಸಲು ತಾಲೂಕು
ಆಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಯುವ ಸಂಚಲನದ ಅಧ್ಯಕ್ಷ ಚಿದಾ ನಂದ ಮೂರ್ತಿ ತಿಳಿಸಿದ್ದಾರೆ.

●ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next