Advertisement

ಇಂದು ವಿಶ್ವ ಮಾನಸಿಕ ಆರೋಗ್ಯ ದಿನ; ಮಾನಸಿಕ ಅನಾರೋಗ್ಯ ಯಾಕೆ ಕಾಡುತ್ತದೆ?

11:03 AM Oct 11, 2019 | Nagendra Trasi |

ದೇಹ ಮತ್ತು ಮನಸ್ಸು  ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡು ಆರೋಗ್ಯವಾಗಿದ್ದಾಗ ಮಾತ್ರ ಮನುಷ್ಯನ ಜೀವನ ಅರ್ಥಪೂರ್ಣ. ಜೀವನಕ್ಕೆ ನೆಲೆ- ಬೆಲೆ ನೀಡುವ “ಮಾನಸಿಕ ಆರೋಗ್ಯ’ ಅತ್ಯಗತ್ಯವಾಗಿದ್ದು, ಸದೃಢ ಬದುಕನ್ನು ಕಟ್ಟಿಕೊಳ್ಳಲು ಮುಖುÂವಾಗಿದೆ. ಹೀಗಾಗಿ ಮಾನಸಿಕ ಆರೋಗ್ಯದ ಕುರಿತು ಜಗತ್ತಿಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗತ್ತದೆ.

Advertisement

ಈ ದಿನ ಪ್ರಾರಂಭವಾದದ್ದು ಹೇಗೆ ? ಈ ವರ್ಷದ ವಿಷಯ ವಸ್ತು ಏನು? ಯಾವ ಕಾರಣಕ್ಕಾಗಿ ಮಾನಸಿಕ ಅನಾರೋಗ್ಯ ಕಾಡುತ್ತದೆ ?  ಎಂಬ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ.

1992 ರಲ್ಲಿ ಪ್ರಾರಂಭ

90 ರ ದಶಕದಲ್ಲಿ  ಅತೀ ಹೆಚ್ಚಿನ ಜನರು ಮಾನಸಿಕ ಅನಾರೋಗ್ಯದಿಂದ ಬಲಳುತ್ತಿದ್ದರು. ಈ ಹಿನ್ನಲೆ ಸಮಸ್ಯೆಯ ಆಳವನ್ನು ಅರಿತ ವರ್ಲ್ಡ್  ಫೆಡರೇಶನ್‌ ಆಫ್ ಮೆಂಟಲ್‌ ಹೆಲ್ತ್ 1992ರ ಅಕ್ಟೋಬರ್‌ 10 ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬರುತ್ತಿದೆ.

ಆತ್ಮಹತ್ಯೆ ತಡೆಗಟ್ಟುವಿಕೆ

Advertisement

ಮಾನಸಿಕ ಅನಾರೋಗ್ಯಕ್ಕೆ ವಯಸ್ಸಿನ ಭೇದವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ರೋಗ ಕಾಣಿಸಿಕೊಳ್ಳುತ್ತಿದ್ದು, ಆತ್ಮಹತ್ಯೆಯಲ್ಲಿ  ಅಂತ್ಯ ಕಾಣುತ್ತಿದೆ. ಈ ಹಿನ್ನಲೆ ಈ ವರ್ಷದ ವಿಷಯ ವಸ್ತುವಾಗಿ ಆತ್ಮಹತ್ಯೆ ತಡೆಗಟ್ಟುವಿಕೆ ಎಂಬ ಧ್ಯೇಯವನ್ನಿಟ್ಟುಕೊಂಡಿದ್ದು, ಈ ಖಾಯಿಲೆಯ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಗುರಿಯನ್ನು ಹಾಕಿಕೊಂಡಿದೆ.

5 ರಲ್ಲಿ  ಒಬ್ಬರಿಗೆ ಮಾನಸಿಕ ಸಮಸ್ಯೆ

ದೇಶದ ಜನಸಂಖ್ಯೆಯಲ್ಲಿ  5 ರಲ್ಲಿ  ಒಬ್ಬರಿಗೆ ಮಾನಸಿಕ ಆರೋಗ್ಯದ ಸಮಸ್ಯೆಗಳು ಕಾಡುತ್ತಿವೆ ಎಂಬುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ.

ಮಹಿಳೆಯರ ಪಾಲು ಜಾಸ್ತಿ:

ಮಾನಸಿಕ ಅಸ್ವಸ್ಥತೆಗೆ ಒಳಗಾಗುವವರ ಪೈಕಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಅನ್ನೋ ಅಂಶ  ಸಾಬೀತಾಗಿದ್ದು, ಶೇ.23 ರಷ್ಟು ಮಹಿಳೆಯರು ಮಾನಸಿಕ ಅನರೋಗ್ಯದಿಂದ ಬಳಲುತ್ತಿದ್ದಾರೆ.

18%ದಷ್ಟು ಮಾನಸಿಕ ಅನರೋಗ್ಯದಿಂದ ಬಳಲುತ್ತಿರುವ ಗಂಡಸರ ದತ್ತಾಂಶವಾಗಿದೆ.

ಕಾರಣವೇನು ?

ಮಾನಸಿಕ ಅನಾರೋಗ್ಯಕ್ಕೆ  ಮುಖ್ಯವಾಗಿ ಖಿನ್ನತೆ ಕಾರಣವಾಗಿದ್ದು, ಒತ್ತಡ, ನಿರ್ಲಕ್ಷ್ಯ, ಏಕಾಂಗಿತನ, ತಾರತಮ್ಯ, ಕಳಂಕ ಮುಂತಾದ ಸಾಮಾಜಿಕ ತೊಂದರೆ ತಾಪತ್ರಯಗಳಿಂದ ಮಾನಸಿಕ ಅಸ್ವಸ್ತತೆ ಉಂಟಾಗುತ್ತದೆ.

ಪರಿಹಾರವೇನು ?

* ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು.

* ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹೆಚ್ಚಾಗಿ ಕಾಲ ಕಳೆಯುವುದು,

* ಖುಷಿ ನೀಡುವ ಕೆಲಸಗಳಲ್ಲಿ  ನಿರತರಾಗುವುದು.

* ಆರೋಗ್ಯಕರ ಆಹಾರ ಸೇವನೆ ಮಾಡುವುದರೊಂದಿಗೆ ಸದಾ ಕ್ರೀಯಾಶೀಲತೆಯಿಂದ ಇರುವುದು.

ಕಳೆದ 27 ವರ್ಷಗಳಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತ ಬಂದಿದ್ದರೂ, ಈ ಕುರಿತು ಸಂಪೂರ್ಣ ಜಾಗೃತಿ ಮೂಡಿಸಲು ಸಾಧ್ಯವಾಗಿಲ್ಲ ಅನ್ನೋದು ನಿಜ ಸಂಗತಿ. ದೈಹಿಕ ಆರೋಗ್ಯಕ್ಕೆ ಜನರು ನೀಡುವ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು ಅನ್ನೋದು ವಿಶ್ವ ಮಾನಸಿಕ ಆರೋಗ್ಯ ಒಕ್ಕೂಟದ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next