Advertisement
ಈ ದಿನ ಪ್ರಾರಂಭವಾದದ್ದು ಹೇಗೆ? ಈ ವರ್ಷದ ಧ್ಯೇಯ ವಾಕ್ಯ ಏನು? ಯಾವ ಕಾರಣಕ್ಕಾಗಿ ಮಾನಸಿಕ ಅನಾರೋಗ್ಯ ಕಾಡುತ್ತದೆ? ಎಂಬ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
1990 ರ ದಶಕದಲ್ಲಿ ಅತೀ ಹೆಚ್ಚಿನ ಜನರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನಲೆ ಸಮಸ್ಯೆಯ ಆಳವನ್ನು ಅರಿತ ವರ್ಲ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್ 1992ರ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆಗೆ ನಾಂದಿ ಹಾಡಿತು. ಇದನ್ನೂ ಓದಿ:ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗಲಿದೆ ಪಿಎಂ ನರೇಂದ್ರ ಮೋದಿ ಸಿನಿಮಾ
Related Articles
ಕೋವಿಡ್ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ಮಾನಸಿಕವಾಗಿ ಪರಸ್ಪರ ಬೆಂಬಲ ನೀಡುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿಯೇ “ಎಲ್ಲರಿಗೂ ಮಾನಸಿಕ ಆರೋಗ್ಯ” ಎಂಬುದನ್ನು ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯವಾಕ್ಯ ಎಂದು ಘೋಷಿಸಲಾಗಿದೆ.
Advertisement
ಶತಕೋಟಿ ಮಾನಸಿಕ ಅಸ್ವಸ್ಥರುಜಾಗತಿಕವಾಗಿ ಒಂದು ಶತಕೋಟಿ ಜನರಿಗೆ ಮಾನಸಿಕ ಅಸ್ವಾಸ್ಥ್ಯ ಸಮಸ್ಯೆ ಇದ್ದು, ತೀವ್ರ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರು ಸಾಮಾನ್ಯ ಜೀವಿತಾವಧಿಗಿಂತ 10ರಿಂದ 20 ವರ್ಷ ಬೇಗ ಸಾವನ್ನಪ್ಪುತ್ತಾರೆ. ಪ್ರತೀ ವರ್ಷ 8ಲಕ್ಷ ಜನರು ಆತ್ಮಹತ್ಯೆ
ಪ್ರಪಂಚಾದ್ಯಂತ ಪ್ರತಿ 40 ಸೆಕೆಂಡಿಗೆ ಓರ್ವ ವ್ಯಕ್ತಿಯಂತೆ ಪ್ರತೀ ವರ್ಷ ಸುಮಾರು 8 ಲಕ್ಷ ಜನರು ಮಾನಸಿಕ ಅಸ್ವಾಸ್ಥ್ಯ ಸಮಸ್ಯೆಯ ಕಾರಣದಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಪೈಕಿ 15-29ರ ಹರೆಯದವರ ಪ್ರಮಾಣವೇ ಹೆಚ್ಚಿದೆ. ಜತೆಗೆ ಈ ವಯೋಮಾನದ ಯುವಜನರ ಸಾವಿಗೆ ಮಾನಸಿಕ ಅಸ್ವಾಸ್ಥ್ಯ ಎರಡನೇ ಪ್ರಮುಖ ಕಾರಣವಾಗಿದೆ. ಇದನ್ನೂ ಓದಿ:ಕೋವಿಡ್ ಹೆಡೆಮುರಿ ಕಟ್ಟಿದ ಜಿಲ್ಲೆ ಜನ : ಸೋಂಕು, ಸಾವಿನ ಪ್ರಮಾಣ ಗಣನೀಯ ಇಳಿಕೆ ಶೇ.75 ರಷ್ಟು ಜನರು ಚಿಕಿತ್ಸೆ ಪಡೆಯುವುದಿಲ್ಲ
ವಿಶ್ವಾದ್ಯಂತ ಕೆಲವೇ ಕೆಲವು ಜನರಿಗೆ ಗುಣಮಟ್ಟದ ಮಾನಸಿಕ ಆರೋಗ್ಯ ಚಿಕಿತ್ಸಾ ಸೌಲಭ್ಯಗಳು ದೊರೆಯುತ್ತಿವೆ. ಆದರೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಮಾನಸಿಕ, ನರವೈಜ್ಞಾನಿಕ ಮತ್ತು ಮಾದಕವಸ್ತು ಬಳಕೆಯ ಅಸ್ವಾಸ್ಥ್ಯದಿಂದ ಬಳಲುತ್ತಿರುವ ಶೇ.75ಕ್ಕಿಂತ ಹೆಚ್ಚು ಮಂದಿ ತಮ್ಮ ಸಮಸ್ಯೆಗಳಿಗೆ ಯಾವುದೇ ಚಿಕಿತ್ಸೆ ಪಡೆಯುತ್ತಿಲ್ಲ. ಶೇ. 7.5ರಷ್ಟು ಭಾರತೀಯರು!
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ 90 ದಶಲಕ್ಷಕ್ಕೂ ಹೆಚ್ಚು ಜನರು ಅಥವಾ ಶೇ.7.5ರಷ್ಟು ಮಂದಿ ನಾನಾ ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದೇಶದಲ್ಲಿ 6 ಜನರಲ್ಲಿ ಓರ್ವರಿಗೆ ಮಾನಸಿಕ ಆರೋಗ್ಯದ ಸಮಸ್ಯೆಗಳು ಕಾಡುತ್ತಿವೆ ಎಂಬುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಮಹಿಳೆಯರ ಪಾಲು ಜಾಸ್ತಿ
ಮಾನಸಿಕ ಅಸ್ವಾಸ್ಥ್ಯಕ್ಕೆ ಒಳಗಾಗುವವರ ಪೈಕಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಎನ್ನುವ ಅಂಶ ಸಾಬೀತಾಗಿದ್ದು, ಶೇ.23 ರಷ್ಟು ಮಹಿಳೆಯರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿ¨ªಾರೆ. ಶೇ.18ರಷ್ಟು ಪುರುಷರನ್ನು ಮಾನಸಿಕ ಅನಾರೋಗ್ಯ ಕಾಡುತ್ತಿದೆ. ಇದನ್ನೂ ಓದಿ:ಸಮಾಧಿಯಲ್ಲಿ ಕುಳಿತು ಕಬ್ಬಿನ ಬಾಕಿ ಬಿಲ್ ಗೆ ಆಗ್ರಹಿಸಿ ರೈತನ ಪ್ರತಿಭಟನೆ! ಕಾರಣವೇನು?
ಮಾನಸಿಕ ಅನಾರೋಗ್ಯಕ್ಕೆ ಮುಖ್ಯವಾಗಿ ಖನ್ನತೆ ಕಾರಣವಾಗಿದ್ದು, ಒತ್ತಡ, ನಿರ್ಲಕ್ಷ್ಯ, ಏಕಾಂಗಿತನ, ತಾರತಮ್ಯ, ಕಳಂಕ ಮುಂತಾದ ಸಾಮಾಜಿಕ ತೊಂದರೆ ತಾಪತ್ರಯಗಳು ಇನ್ನಿತರ ಕಾರಣಗಳಾಗಿವೆ. ಪರಿಹಾರವೇನು?
– ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು.
– ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಾಗಿ ಕಾಲ ಕಳೆಯುವುದು.
– ಖುಷಿ ನೀಡುವ ಕೆಲಸಗಳಲ್ಲಿ ನಿರತರಾಗುವುದು.
– ಆರೋಗ್ಯಕರ ಆಹಾರ ಸೇವನೆ ಮಾಡುವುದರೊಂದಿಗೆ ಸದಾ ಕ್ರಿಯಾಶೀಲತೆಯಿಂದ ಇರುವುದು.