Advertisement

ಆಗಸ್ಟ್‌ 10 : ವಿಶ್ವ ಸಿಂಹಗಳ ದಿನ : ಕಾಡಿನ ರಾಜನ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ

09:18 AM Aug 10, 2021 | Team Udayavani |

ಆಗಸ್ಟ್‌ 10ನ್ನು ವಿಶ್ವ ಸಿಂಹಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಕಾಡಿನ ರಾಜ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಮತ್ತು ಸಿಂಹ ಸಂತತಿಯನ್ನು ಕಾಪಾಡಿಕೊಂಡು ಹೋಗುವ ಉದ್ದೇಶದಿಂದ ಈ ದಿನವನ್ನು  ಆಚರಿಸಲಾಗುತ್ತದೆ. ಹಾಗಾದ್ರೆ ಸಿಂಹದ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ ಬನ್ನಿ.

  • ಈ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ 2013 ರಲ್ಲಿ ಆರಂಭಿಸಿದರು.
  • ಸಿಂಹಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕಲು ಇಷ್ಟ ಪಡುತ್ತವೆ. ಅಲ್ಲದೆ ತೋಳಗಳ ಜೀವನ ಮಾದರಿಯಲ್ಲಿ ಬದುಕುತ್ತವೆ
  • ಕಾಡಿನ ರಾಜನು ಹುಲ್ಲುಗಾವಲು-ಬಯಲು ಪ್ರದೇಶದಲ್ಲಿ ಮಾತ್ರ ವಾಸಿಸುತ್ತಾನೆ
  • ಗಂಡು ಸಿಂಹಗಳು 226 ಕೆಜಿಯವರೆಗೆ ತೂಗುತ್ತವೆ ಮತ್ತು ಎಂಟು ಅಡಿ ಉದ್ದದವರೆಗೆ ಬೆಳೆಯುತ್ತವೆ
  • ಗಂಡು ಸಿಂಹಗಳು ತಲೆ, ಕುತ್ತಿಗೆ ಮತ್ತು ಭುಜದ ಸುತ್ತಲೂ ಉದ್ದವಾದ ದಪ್ಪ ಕೂದಲುಗಳನ್ನು ಹೊಂದಿರುತ್ತವೆ. ಅಲ್ಲದೆ ನೋಡುತ್ತಲೆ ಭಯತರಿಸುವಂತೆ ಕಾಣುತ್ತವೆ.
  • ಹೆಣ್ಣು ಸಿಂಹಗಳು ಚಿಕ್ಕದಾಗಿರುತ್ತವೆ ಮತ್ತು ವೇಗವಾಗಿ ಭೇಟೆಯಾಡುತ್ತವೆ. ಅಲ್ಲದೆ ಜೊತೆಗಾತಿಯರ ಜೊತೆಯಲ್ಲೇ ಹೆಚ್ಚು ಕಾಲ ಕಳೆಯುತ್ತವೆ.
  • ಸಿಂಹಗಳು ಸಾಮಾನ್ಯವಾಗಿ ಕಾಡಿನಲ್ಲಿ ಗರಿಷ್ಠ 16 ವರ್ಷ ಮತ್ತು ಝೂನಲ್ಲಿ 25 ವರ್ಷ ಬದುಕುತ್ತದೆ.
  • ಈ ಪ್ರಾಣಿಗಳು ಹೆಚ್ಚಾಗಿ ರಾತ್ರಿ ವೇಳೆ ಬೇಟೆಯಾಡುತ್ತವೆ. ಕತ್ತಲೆಯಲ್ಲಿ ಈ ಪ್ರಾಣಿಗಳ ಕಣ್ಣುಗಳು ಭಾರೀ ಚುರುಕಿನಿಂದ ಕೆಲಸ ಮಾಡುತ್ತವೆ.
  • ವರದಿಗಳ ಪ್ರಕಾರ, ಒಂದು ಶತಮಾನದ ಹಿಂದೆ ಆಫ್ರಿಕಾದಲ್ಲಿ 2,00,000 ಕ್ಕೂ ಹೆಚ್ಚು ಕಾಡು ಸಿಂಹಗಳು ವಾಸಿಸುತ್ತಿದ್ದವು. ಇತ್ತೀಚಿನ ಸಮೀಕ್ಷೆಗಳು ಕಳೆದ ಎರಡು ದಶಕಗಳಲ್ಲಿ ಸಿಂಹಗಳ ಸಂಖ್ಯೆ ಅಂದಾಜು 30,000 ದಿಂದ ಸುಮಾರು 20,000 ಕ್ಕೆ ಇಳಿದಿದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next