Advertisement

ವಿಶ್ವದ ಅತಿದೊಡ್ಡ ಮೊಬೈಲ್‌ ಫ್ಯಾಕ್ಟರಿ ಉದ್ಘಾಟನೆ ಇಂದು

10:24 AM Jul 09, 2018 | Team Udayavani |

ಹೊಸದಿಲ್ಲಿ: ನೋಯ್ಡಾದಲ್ಲಿ ಸ್ಥಾಪಿಸಲಾಗಿರುವ ವಿಶ್ವದ ಅತಿದೊಡ್ಡ ಮೊಬೈಲ್‌ ಫ್ಯಾಕ್ಟರಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ ಇನ್‌ ಸೋಮವಾರ ಉದ್ಘಾಟಿಸಲಿದ್ದಾರೆ. ರವಿವಾರ‌ವೇ ಮೂನ್‌ ಜೇ ಅವರು ಭಾರತಕ್ಕೆ ಆಗಮಿಸಿದ್ದಾರೆ.

Advertisement

ಸ್ಯಾಮ್‌ಸಂಗ್‌ನ ಈ ಫ್ಯಾಕ್ಟರಿ 35 ಎಕರೆ ವ್ಯಾಪ್ತಿಯಲ್ಲಿದ್ದು, 12 ಕೋಟಿ ಯೂನಿಟ್‌ಗಳನ್ನು ಒಂದು ವರ್ಷದಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 2005ರಲ್ಲಿ ಈ ಘಟಕ ಸ್ಥಾಪನೆಯಾಗಿತ್ತಾದರೂ 4,915 ಕೋಟಿ ರೂ. ವೆಚ್ಚದಲ್ಲಿ ಘಟಕವನ್ನು ವಿಸ್ತರಿಸಲಾಗಿದೆ.

ಸದ್ಯ ಈ ಘಟಕದಲ್ಲಿ 6.7 ಕೋಟಿ ಯೂನಿಟ್‌ಗಳನ್ನು ಉತ್ಪಾದಿಸಲಾಗುತ್ತಿದೆ. ನೂತನ ಘಟಕ ಚಾಲನೆಗೊಂಡ ಅನಂತರದಲ್ಲಿ ಉತ್ಪಾದನೆ ಸಾಮರ್ಥ್ಯ ದುಪ್ಪಟ್ಟಾಗಲಿದೆ. ಮೊಬೈಲ್‌ ಮಾತ್ರವಲ್ಲ, ಸ್ಯಾಮ್‌ಸಂಗ್‌ನ ಇತರ ಉತ್ಪನ್ನಗಳಾದ ರೆಫ್ರಿಜರೇಟರ್‌ಗಳು, ಟಿವಿ ಪ್ಯಾನೆಲ್‌ಗ‌ಳ ಉತ್ಪಾದನೆಯೂ ಹೆಚ್ಚಲಿದೆ. ಇದರಿಂದಾಗಿ ಸ್ಯಾಮ್‌ಸಂಗ್‌ ಉತ್ಪನ್ನಗಳನ್ನು ವಿದೇಶದಲ್ಲಿ ಪರಿಚಯಿಸಿದ ವೇಗದಲ್ಲೇ ಭಾರತದಲ್ಲಿ ಪರಿಚಯಿಸಲು ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next