Advertisement

Kundapura Kannada ಬದುಕಿನೊಂದಿಗೆ ಬೆಸೆದ ಭಾಷೆ: ಚಿತ್ರನಟ ರಮೇಶ್‌ ಭಟ್‌

11:20 PM Aug 04, 2024 | Shreeram Nayak |

ಬೆಂಗಳೂರು: ಕುಂದಾಪುರ ಕನ್ನಡ ಬದುಕಿನೊಂದಿಗೆ ಬೆಸೆದ ಭಾಷೆ. ಅವರು ತಮ್ಮ ತಾಯಿಗೆ ನೀಡುವಷ್ಟೇ ಗೌರವವನ್ನು ಭಾಷೆಗೂ ನೀಡುತ್ತಾರೆ ಎಂದು ಚಿತ್ರನಟ ರಮೇಶ್‌ ಭಟ್‌ ತಿಳಿಸಿದರು.

Advertisement

ಬಸವೇಶ್ವರ ನಗರದ ನೇತಾಜಿ ಮೈದಾನದಲ್ಲಿ ಟೀಂ ಕುಂದಾಪುರಿಯನ್ಸ್‌ ರವಿವಾರ ಹಮ್ಮಿಕೊಂಡಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಇದು ಬದುಕಿನ ಭಾಷೆಯೇ ಹೊರತು ಉದ್ಯಮದ ಭಾಷೆಯಲ್ಲ. ಹಾಗಾಗಿ ಇಂದಿಗೂ ಕುಂದಾಪುರ ಭಾಷೆ ಜೀವಂತವಾಗಿದೆ. ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಮಾತೃ ಭಾಷೆಯನ್ನು ಮರೆಯಬಾರದು ಎಂದರು.

ಸಮ್ಮಾನ: ಕುಂದಾಪುರ ರತ್ನ ಪ್ರಶಸ್ತಿ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಸಾಧನೆ ಮಾಡಿದ ಅರೆಹೊಳೆ ಸದಾಶಿವ ರಾವ್‌, ಚಿತ್ರ ನಿರ್ದೇಶಕ ಯಾಕುಬ್‌ ಖಾದರ್‌ ಅವರನ್ನು ಸಮ್ಮಾನಿಸಲಾಯಿತು.

“ಕುಂದಾಪುರ ಸಮ್ಮಾನ’ ಗೌರವವನ್ನು ಯಕ್ಷಗಾನ ಕಲಾವಿದ ಶ್ರೀನಿವಾಸ ಸಾಸ್ತಾನ, ಗೌರಿ ಕೆ., ಮುಳುಗುತಜ್ಞ ಮಂಜುನಾಥ ಕೊಡ್ಲಾಡಿ, ಅಂತಾರಾಷ್ಟ್ರೀಯ ಕ್ರೀಡಾಪಟು ವಿಟuಲ, ಸಮಾಜ ಸೇವೆ ದಿನೇಶ್‌ ಬಾಂಧವ್ಯ, ಶಿಕ್ಷಣ ಸುಜಾತಾ, ಪ್ರಗತಿ ಪರ ಕೃಷಿಕ ಕೃಷ್ಣ ಕುಲಾಲ್‌ ಆವರ್ಸೆ ಅವರಿಗೆ ನೀಡಿಲಾಯಿತು.

Advertisement

ಶಾಸಕ ಗುರುರಾಜ್‌ ಗಂಟಿಹೊಳೆ, ಮಹಾಲಕ್ಷ್ಮೀ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ನಟಿ ಅಮೃತಾ ರಾಮಮೂರ್ತಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next