Advertisement

ನಾಳೆ ಉದ್ಘಾಟನೆಗೊಳ್ಳಲಿದೆ ವಿಶ್ವ ಕನ್ನಡ ಶುಶ್ರೂಷಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ

05:10 PM May 29, 2021 | Team Udayavani |

ಬೆಂಗಳೂರು : ವಿಶ್ವ ಕನ್ನಡ ಶುಶ್ರೂಷಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ವರ್ಚುವಲ್ ಮೂಲಕ ಭಾನುವಾರ ನಡೆಯಲಿದೆ.

Advertisement

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆದಿಚುಂಚನಗಿರಿ ಮಹಾಸಂಸ್ಥಾನಮಠ ಪೀಠಾಧಿಪತಿಯಾಗಿರುವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಭಾಗಿಯಾಗಲಿದ್ದಾರೆ.

ಇವರೊಂದಿಗೆ ವರ್ಚುವಲ್ ಕಾರ್ಯಕ್ರಮದಲ್ಲಿ ಇನ್ನು ಹಲವಾರು ಅತಿಥಿಗಳು ಭಾಗಿಯಾಗಲಿದ್ದಾರೆ. ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಯಣ್, ಉಡುಪಿ-ಚಿಕ ಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಶಾಸಕಾರದ ಎಂ.ಬಿ.ಪಾಟೀಲ್. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ಸಾಗರೋತ್ತರ ಕನ್ನಡ ಸಂಘದ ಅಧ್ಯಕ್ಷ,ನಟ,ನಿರ್ಮಾಪಕರೂ ಆಗಿರುವ ಗೋಪಾಲ ಕುಲಕರ್ಣಿ, ಕರ್ನಾಟಕ ರಾಜ್ಯ ಸರ್ಕಾರದ ಕರಕುಶಲ ಅಭಿವೃದ್ಧಿಯ ಅಧ್ಯಕ್ಷರಾಗಿರುವ ಬಿ.ರಾಘವೇಂದ್ರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮ ಭಾನುವಾರ ಸಂಜೆ 6 ಗಂಟೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next