Advertisement

ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಮುಖ್ಯ ಹೊಣೆ

02:44 AM Apr 26, 2019 | Sriram |

ಮಣಿಪಾಲ: ಎಪ್ರಿಲ್ 26ರಂದು ಜಗತ್ತಿನಲ್ಲಿ ನಾವೀನ್ಯ ಮತ್ತು ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವ, ಬೌದ್ಧಿಕ ಆಸ್ತಿ ಹಕ್ಕುಗಳ ಪಾತ್ರವನ್ನು ರಕ್ಷಿಸುವ ಸಲುವಾಗಿ ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು ಆಚರಿಸಲಾಗುತ್ತದೆ.

Advertisement

ದಿನ ನಿತ್ಯದ ಬದುಕಿನಲ್ಲಿ ಬರಹಗಾರ, ಸೃಜನಾಶೀಲ ಕಲೆಗಾರ ರಚಿಸಿದ ಆಸಕ್ತಿದಾಯಕ್ತದಾಯಕ ವಿಷಯಗಳ ಪೇಟೆಂಟ್ಗಳು, ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳನ್ನು ಗೌರವಿಸುವುದು ಹಾಗೂ ಅದರ ಬಗ್ಗೆ ಅರಿವು ಮೂಡಿಸಲು ಜಗತ್ತಿನಾದ್ಯಂತದ ಎಪ್ರಿಲ್ 26ರಂದು ವಿಶ್ವ ಬೌದ್ಧಿಕ ದಿನವೆಂದು ಪರಿಗಣಿಸಲಾಗುತ್ತದೆ. ಸಮಾಜದ ಅಭಿವೃದ್ಧಿಗೆ ಕೊಟ್ಟ ಕೊಡುಗೆಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ.

ಬೌದ್ಧಿಕ ಆಸ್ತಿ ಹಕ್ಕು ಎಂದರೆ ಏನು
ಒಬ್ಬ ಲೇಖಕ, ಒಬ್ಬ ಕಥೆಗಾರ, ವಿಜ್ಞಾನಿ ಹೀಗೆ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮ ಬುದ್ಧಿ ಶಕ್ತಿಯಿಂದಲೇ ಅಭ್ಯಸಿಸಿ ಹೊರ ತರುವ ಪುಸ್ತಕ, ಕಥೆ, ಸಂಗೀತ ಇವುಗಳನ್ನು ಬೇರೆ ಯಾರು ಕದಿಯದಂತೆ ಈ ಮೊದಲೇ ಅದು ತಮ್ಮದೇ ಶ್ರಮ ಮತ್ತು ತಾವೇ ಹೊರತಂದ ಬೌದ್ಧಿಕ ವಸ್ತುಗಳ ಸಂಬಂಧಿಸಿದ ವಿಚಾರಗಳಿಗೆ ಪಡೆಯುವ ಹಕ್ಕನ್ನು ಬೌದ್ಧಿಕ ಆಸ್ತಿಯ ಹಕ್ಕು (ಕೃತಿಸ್ವಾಮ್ಯ)ಎಂದಾಗುತ್ತದೆ. ಬೌದ್ಧಿಕ ಆಸ್ತಿಯ ಹಕ್ಕಿನ ಈ ನಿಯಮದ ತದ್ವಿರುದ್ಧವಾಗಿ ನಡೆದುಕೊಂಡರೆ ಕಾನೂನಿನಲ್ಲಿ ದಂಡ ವಿಧಿಸುವ ಅವಕಾಶ ಇದೆ.

ಹಿನ್ನೆಲೆ
ವಿಶ್ವ ಬೌದ್ಧಿಕ ಆಸ್ತಿ ರಕ್ಷಣೆ ಎನ್ನುವ ಸಂಸ್ಥೆಯು ಬೌದ್ಧಿಕ ಆಸ್ತಿ ರಕ್ಷಣೆಯ ಜಾಗೃತಿ ಮತ್ತಷ್ಟು ಉತ್ತೇಜಿಸಲು, ಬೌದ್ಧಿಕ ಆಸ್ತಿ ಸಂರಕ್ಷಣೆಯ ಪ್ರಭಾವವನ್ನು ಪ್ರಪಂಚಾದ್ಯಂತ ವಿಸ್ತರಿಸಲು, ಬೌದ್ಧಿಕ ಆಸ್ತಿ ಸಂರಕ್ಷಣೆ ಕಾನೂನುಗಳು ಮತ್ತು ನಿಬಂಧನೆಗಳನ್ನು ಪ್ರಚಾರ ಮಾಡುವ ಮತ್ತು ಜನಪ್ರಿಯಗೊಳಿಸುವುದಕ್ಕೆ ವಿವಿಧ ರಾಷ್ಟ್ರಗಳಿಗೆ ಒತ್ತಾಯಿಸಲು, ಬೌದ್ಧಿಕ ಆಸ್ತಿ ಹಕ್ಕುಗಳ ಸಾರ್ವಜನಿಕ ಕಾನೂನು ಅರಿವು ಹೆಚ್ಚಿಸಲು ಮತ್ತು ಬೌದ್ಧಿಕ ಆಸ್ತಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿನಿಮಯವನ್ನು ಬಲಪಡಿಸುವುದಕ್ಕಾಗಿ ಅಕ್ಟೋಬರ್‌ 3, 1, 999ರಲ್ಲಿ, ವಿಶ್ವ ಬೌದ್ಧಿಕ ಆಸ್ತಿ ಸಂಘಟನೆಯ (ವಿಐಪಿಒ) ಸಾಮಾನ್ಯ ಸಭೆಯಲ್ಲಿ ಒಂದು ನಿರ್ದಿಷ್ಟ ದಿನವನ್ನು ವಿಶ್ವ ಬೌದ್ಧಿಕ ಆಸ್ತಿ ದಿನವೆಂದು ಘೋಷಿಸುವ ಪರಿಕಲ್ಪನೆಯನ್ನು ಅಂಗೀಕರಿಸಿತು. ಅನಂತರ ಸಾಮಾಜಿಕವಾಗಿ ವಿಶ್ವ ಮಟ್ಟದಲ್ಲಿ ಸಹಕಾರಿಯಾಗಬಲ್ಲ ಕೆಲವೇ ಕೆಲವು ಸಂಸ್ಥೆಗಳನ್ನು ವಿಶ್ವಸಂಸ್ಥೆಯ ಅಧಿನಿಯಮದಂತೆ 15 ವಿಶೇಷ ಸಂಸ್ಥೆಗಳನ್ನು ಜೋಡಿಸಿಕೊಂಡಿದೆ ಅದರಲ್ಲಿ ವಿಶ್ವ ಬೌದ್ಧಿಕ ಆಸ್ತಿ ರಕ್ಷಣೆ ಕೂಡ ಒಂದಾಗಿದೆ. ಈ ಸಭೆಯಲ್ಲಿನ ಬೇಡಿಕೆಯಂತೆ 2001ರ ಎಪ್ರಿಲ್ 26ರಂದು ವಿಶ್ವ ಬೌದ್ಧಿಕ ಆಸ್ತಿಯ ಹಕ್ಕಿನ ದಿನವನ್ನು ಘೋಷಿಸಲಾಯಿತು.

ವಿಶ್ವ ಬೌದ್ಧಿಕ ಆಸ್ತಿ ರಕ್ಷಣೆ ಈ ಸಂಸ್ಥೆ ಆರಂಭಗೊಂಡಿದ್ದು 1967 ಜುಲೈ 14ರಂದು ಪ್ರಸ್ತುತ 191 ರಾಷ್ಟ್ರಗಳು ಇದರ ಸದಸ್ಯತ್ವವನ್ನು ಹೊಂದಿವೆ. ಇದು 26 ಅಂತಾರಾಷ್ಟ್ರೀಯ ಒಪ್ಪಂದಗಳನ್ನು ನಿರ್ವಹಿಸುತ್ತಿದೆ. ಈ ಸಂಸ್ಥೆಯ ಮುಖ್ಯ ಕಚೇರಿ ಇರುವುದು ಸ್ವಿಜರ್‌ಲ್ಯಾಂಡ್‌ನ‌ ಜಿನೀವಾದಲ್ಲಿ. ಇದರ ಮೊದಲ ಡೈರಕ್ಟರಿ ನಿರ್ದೇಶಕರು ಜನರಲ್ ಡಬ್ಲ್ಯುಐಪಿಒ ಸದ್ಯದ ನಿರ್ದೇಶಕ ಫ್ರಾನ್ಸಿಸ್‌ ಗುರ್ರಿ ಅಕ್ಟೋಬರ್‌ 1, 2008ರಂದು ಅಧಿಕಾರ ವಹಿಸಿಕೊಂಡಿದ್ದರು. ಡಿಜಿಟಲ್ನ ಜಾಗತಿಕ ಮಾಹಿತಿ ಜಾಲಬಂಧವಾದ wiponet ಅನ್ನು ಸ್ಥಾಪಿಸಿದೆ. ಈ ಸ್ಥಾಪನೆಯ ಪ್ರಮುಖ ಉದ್ದೇಶ ಈ ಜಾಲಬಂಧದ ಮುಖೇನ ವಿವಿಧ ದೇಶಗಳಲ್ಲಿ ಹರಡಿಕೊಂಡಿರುವ ಸಂಸ್ಥೆಯ 300 ಬೌದ್ಧಿಕ ಆಸ್ತಿ ಕಚೇರಿಗಳಿಂದ ಸಂಪರ್ಕ ಸಾಧಿಸುವುದು.

Advertisement

ಹೊಸ ಥೀಮ್‌ನೊಂದಿಗೆ ಐಪಿ ಆಚರಣೆ
2001 ರಿಂದ ಆರಂಭಗೊಂಡ ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು ಪ್ರತಿ ವರ್ಷವೂ ಹೊಸ ಸಂದೇಶಗಳ ಜತೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಈ ವರ್ಷದ ಥೀಮ್‌ ಗೋಲ್ಡ್ ಫಾರ್‌ ರೀಚ್: ಐಪಿ ಮತ್ತು ಕ್ರೀಡೆ ಆಗಿದೆ. ವಿಶೇಷವಾಗಿ ಕ್ರೀಡಾ ಕ್ಷೇತ್ರಗಳಲ್ಲಿ ವಿಭಿನ್ನ ಬದಲಾವಣೆಯನ್ನು ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ ಮತ್ತು ರೋಬಾಟಿಕಕ್‌ ನಲ್ಲಿ ತಂತ್ರಜ್ಞಾನದ ಪ್ರಗತಿಗೆ ಬದಲಾಗುತ್ತಿರುವ ಆಟಕ್ಕೆ ಸಂಬಂಧಿಸಿದಂತೆ ಮತ್ತು ನಿರ್ದಿಷ್ಟವಾಗಿ ಪ್ರಾತಿನಿಧಿಕ ಸಮಸ್ಯೆಗಳನ್ನು ಗುರಿ ಮಾಡಿಕೊಂಡು ಈ ಬಾರಿಯೂ ವಿಶೇಷ ಥೀಮ್‌ನೊಂದಿಗೆ ಆಚರಣೆ ಮಾಡಲು ಉತ್ಸುಕತೆ ತೋರಿದೆ.

-ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next