Advertisement
ರಾಷ್ಟ್ರಕವಿಯೊಬ್ಬರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯಲ್ಲಿ ನಮೂದಾಗಿದ್ದ ಎಲ್ಲ ಜನಪ್ರತಿ ನಿಧಿಗಳು ಗೈರು ಹಾಜರಾಗಿದ್ದು, ಸಹಜವಾಗಿಯೇ ಕುವೆಂಪು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಬೇಕಿತ್ತು. ಅಲ್ಲದೇ ಸಚಿವ ಯು. ಟಿ. ಖಾದರ್, ಶಾಸಕರಾದ ಜೆ. ಆರ್. ಲೋಬೋ, ಕೆ. ವಸಂತ ಬಂಗೇರ, ಕೆ. ಅಭಯಚಂದ್ರ ಜೈನ್, ಕೋಟ
ಶ್ರೀನಿವಾಸ ಪೂಜಾರಿ, ಶಕುಂತಳಾ ಶೆಟ್ಟಿ, ಎಸ್. ಅಂಗಾರ, ಬಿ.ಎ. ಮೊದಿನ್ ಬಾವಾ, ಕೆ. ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಕವಿತಾ ಸನಿಲ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಲಾಗಿತ್ತು. ಆದರೆ ಇಷ್ಟೂ ಜನಪ್ರತಿನಿಧಿಗಳ ಪೈಕಿ ಯಾವೊಬ್ಬರೂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.
Related Articles
ಕಾರ್ಯಕ್ರಮ ಆಯೋಜಿಸಿದ ಜಿಲ್ಲಾಡಳಿತದಿಂದಾಗಲೀ, ಜಿಲ್ಲಾ ಪಂಚಾಯತ್‌ನಿಂದಾಗಲೀ ಯಾರೊಬ್ಬ ಅಧಿಕಾರಿಯೂ ಕಾರ್ಯಕ್ರಮಕ್ಕೆ ಬಂದು ರಾಷ್ಟ್ರಕವಿಗೆ ನಮನ ಸಲ್ಲಿಸಿಲ್ಲ. ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಎಚ್. ಸುಧೀರ್ ಕುಮಾರ್ ರೆಡ್ಡಿ, ಜಿಪಂ ಸಿಇಓ ಡಾ| ಎಂ. ಆರ್. ರವಿ, ಮನಪಾ ಆಯುಕ್ತ ಮಹಮ್ಮದ್ ನಝೀರ್, ಮಂಗಳೂರು ತಹಶೀಲ್ದಾರ ಟಿ. ಜಿ. ಗುರುಪ್ರಸಾದ್ ಅವರ
ಹೆಸರು ಆಮಂತ್ರಣ ಪತ್ರಿಕೆಯಲ್ಲಿತ್ತು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ
ರೈ ಬಿ. ಅವರನ್ನು ಹೊರತುಪಡಿಸಿದರೆ ಇತರ ಯಾವುದೇ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ. ಈ
ಪೈಕಿ ಉಸ್ತುವಾರಿ ಸಚಿವರು ಹಾಗೂ ಶಾಸಕ ಜೆ. ಆರ್. ಲೋಬೊ ಅವರು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದರೂ, ಕೊನೆಯ ಕ್ಷಣದಲ್ಲಿ ಯಾವುದೋ ತುರ್ತು ಕಾರ್ಯದ ಹಿನ್ನೆಲೆಯಲ್ಲಿ ಬರಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಕೆಲವರು ಊರಲ್ಲಿ ಇಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ಸಂಘಟಕರು ‘ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.
Advertisement
ವಿಪರ್ಯಾಸದ ಸಂಗತಿಗೂಗಲ್ನಂತಹ ವಿದೇಶಿ ಸಂಸ್ಥೆಯೇ ತನ್ನ ಡೂಡಲ್ ನಲ್ಲಿ ಶುಕ್ರವಾರ ಕವಿ ಕುವೆಂಪು ಅವರ ಭಾವಚಿತ್ರವನ್ನು
ಹಾಕಿದ್ದಲ್ಲದೆ, ಕನ್ನಡದಲ್ಲೇ ಗೂಗಲ್ ಎಂದು ಬರೆದು ಕನ್ನಡದ ರಾಷ್ಟ್ರಕವಿಗೆ ವಿಶೇಷ ಗೌರವ ನೀಡಿದೆ. ಗೂಗಲ್
ಕಂಪೆನಿಯು ಈ ರೀತಿ ಕನ್ನಡ ಸಾಹಿತಿಯೊಬ್ಬರ ಜನ್ಮದಿನಾಚರಣೆಯನ್ನು ಗೌರವಿಸಿರುವುದಕ್ಕೆ ಎಲ್ಲೆಡೆ
ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಆದರೆ ಕನ್ನಡಿಗರೇ ಆದ ಇಲ್ಲಿನ ಜನಪ್ರತಿನಿಧಿಗಳಿಗೆ ಮಾತ್ರ ಮಹಾನ್ ಕವಿಯೊಬ್ಬರ ಜನ್ಮ ದಿನ ಬೇಡವಾಗಿ ಹೋಗಿದ್ದು ನಿಜಕ್ಕೂ ವಿಪರ್ಯಾಸ. ಎಲ್ಲರಿಗೂ ಆಮಂತ್ರಣ ನೀಡಲಾಗಿತ್ತು
‘ವಿಶ್ವ ಮಾನವ ದಿನಾಚರಣೆಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಆಮಂತ್ರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರಿಗೆ ಬರಲು ಸಾಧ್ಯವಾಗಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಇತರ ಕಾರ್ಯಕ್ರಮಗಳಿದ್ದ ಹಿನ್ನೆಲೆಯಲ್ಲಿ ಬರಲು ಆಗದೇ ಇರಬಹುದು. ಆದಾಗ್ಯೂ ರಾಮಕೃಷ್ಣ ವಿದ್ಯಾಸಂಸ್ಥೆಯ ಪ್ರಮುಖರು ಮತ್ತು ಇಲಾಖೆ ಸೇರಿ ಕಾರ್ಯಕ್ರಮವನ್ನು ಉತ್ತಮವಾಗಿಯೇ ನಡೆಸಲಾಗಿದೆ.
– ಚಂದ್ರಹಾಸ್ ರೈ ಬಿ.,
ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ