ದೇರಳಕಟ್ಟೆ: ಹೋಮಿಯೋ ಪತಿ ವೈದ್ಯಕೀಯ ಪದ್ಧತಿಯ ಮಹತ್ತರ ಬೆಳವಣಿಗೆಗೆ ಸ್ಯಾಮ್ಯುಯೆಲ್ ಹಾನಿಮನ್ ಅವರ ಪರಿಶ್ರಮದ ಫಲ ಅಪಾರವಾದದ್ದು, ಅಂತವರು ಇನ್ನಷ್ಟು ಹೆಚ್ಚು ಕಾಲ ಬದುಕಿದ್ದರೆ ಈ ವೈದ್ಯಕೀಯ ಕ್ಷೇತ್ರ ಇನ್ನಷ್ಟು ಸಂಶೋಧನೆ ಪಡೆಯಲು ಸಾಧ್ಯವಿತ್ತು ಎಂದು ಬೆಳಗಾವಿ ಕೆಎಲ್‌ಇ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಮುಕುಂದ್ ಎ. ಉಡ್ಜಂಕರ್ ಅವರು ಹೇಳಿದರು.
ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಹೋಮಿಯೋಪಥಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸೂûಾ¾ಣು ಜೀವಿಗಳ ರೂಪದಲ್ಲಿ ಇರುವಂತಹ ಬ್ಯಾಕ್ಟೀರಿಯಗಳಿಗೆ ಸ್ಯಾಮ್ಯುಯೆಲ್ ಹಾನಿಮನ್ ಔಷಧ ಕಂಡು ಹಿಡಿದ ಅನಂತರ ಹೋಮಿ ಯೋಪತಿ ಆರಂಭವಾಗಿತ್ತು. ಬಳಿಕ ಸಂಶೋಧಕರು ಈ ವೈದ್ಯ ಪದ್ಧತಿಯಲ್ಲಿ ಹೊಸತನವನ್ನು ತಂದರು. ಮುಂದಿನ ದಿನಗಳಲ್ಲಿ ಈ ವೈದ್ಯ ಪದ್ಧತಿಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸಂಶೋ ಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.
ಜಾಗೃತಿ ಅಗತ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ವಂ| ರಿಚ್ಚಾರ್ಡ್ ಕುವೆಲ್ಲೊ ಮಾತನಾಡಿ, ಹೋಮಿಯೋಪತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ವೈದ್ಯರಾದವರು ಕೇವಲ ಕ್ಲಿನಿಕ್‌ಗಳಲ್ಲಿ ಇರದೆ ಜನರೊಂದಿಗೆ ಬೆರೆತು ಔಷಧ ಪದ್ಧತಿಯ ಕುರಿತು ತಿಳಿಯಪಡಿಸಬೇಕಿದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿ ಹೋಮಿ ಯೋಪತಿ ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿ ಡಾ|ಜೆ.ಕರ್ತಾರ್ ಸಿಂಗ್, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ| ವಿನ್ಸೆಂಟ್ ವಿನೋದ್ ಸಲ್ಡಾನ್ಹಾ ಉಪಸ್ಥಿತರಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿನಿ ಬಿಜಿತ ಮಂಡೈ ಅವರನ್ನು ಗೌರವಿ ಸಲಾಯಿತು. ಫಾ| ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಶಿವಪ್ರಸಾದ್ ಕೆ. ಸ್ವಾಗತಿಸಿದರು. ವಫಾ ಝೈನಾಬ್ ಮತ್ತು ಅಬಿ ಜಾನ್ಸನ್ ನಿರ್ವಹಿಸಿದರು. ಸಂಯೋಜಕ ಡಾ| ರಂಜನ್ ಬ್ರಿಟ್ಟೊ ವಂದಿಸಿದರು.