Advertisement
ವಿಶ್ವದ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಎರಡು ತಾಣಗಳು ಸ್ಥಾನ ಪಡೆದಿವೆ. ಹಂಪಿ ಹೊರತುಪಡಿಸಿದರೆ ಆ ಸ್ಥಾನ ಸಿಕ್ಕಿರುವುದು, ಪಟ್ಟದಕಲ್ಲಗೆ ಮಾತ್ರ. ಬಾದಾಮಿ ಚಾಲುಕ್ಯರ 7 ಮತ್ತು 8ನೇ ಶತಮಾನದಲ್ಲಿ ನಿರ್ಮಿಸಿದ 8 ಅದ್ಭುತ ದೇವಾಲಯಗಳು, ರಾಷ್ಟ್ರಕೂಟರ ಆಡಳಿತದ 9ನೇ ಶತಮಾನದಲ್ಲಿ ನಿರ್ಮಿಸಿದ ಎರಡು ದೇವಾಲಯ ಸೇರಿ ಒಟ್ಟು 11 ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ದೇವಾಲಯಗಳು ಇಲ್ಲಿವೆ.
Related Articles
Advertisement
ಬರಲಿಲ್ಲ ಪ್ಲಾಜಾ: ವಿಶ್ವ ದರ್ಜೆಯ ಪ್ರವಾಸಿ ತಾಣವಾದ ಪಟ್ಟದಕಲ್ಲಗೆ ವಾರ್ಷಿಕ ಸುಮಾರು 6 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಅವರಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಹೀಗಾಗಿ 2015ರ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಪಟ್ಟದಕಲ್ಲಗೆ ಪ್ರವಾಸಿ ಪ್ಲಾಜಾ ನಿರ್ಮಾಣದ ಘೋಷಣೆಯಾಗಿತ್ತು. ಅದು ಈವರೆಗೂ ಘೋಷಣೆಯಾಗದೇ ಉಳಿದಿದೆ. ಉತ್ತಮ ಹೊಟೇಲ್ ಕೂಡ ಇಲ್ಲದ ಪಟ್ಟದಕಲ್ಲಗೆ ಬರುವ ಪ್ರವಾಸಿಗರು, ಬೇಗ ಇಲ್ಲಿಂದ ತೆರಳುವ ಅನಿವಾರ್ಯತೆ ಪ್ರವಾಸಿಗರಿಗಿದೆ.
ಸ್ಥಳಾಂತರಕ್ಕೆ ತಯಾರಿ: 2009ರಿಂದ ಕೇಳಿ ಬರುತ್ತಿರುವ ಪಟ್ಟದಕಲ್ಲ ಸ್ಥಳಾಂತರ ಬೇಡಿಕೆಗೆ ಈಗ ಒಂದಷ್ಟು ವೇಗ ಸಿಕ್ಕಿದೆ. ಕಳೆದ ತಿಂಗಳು ಬಂದ ಭೀಕರ ಪ್ರವಾಹ ಈ ವೇಗಕ್ಕೆ ಕಾರಣವೂ ಆಗಿದೆ. ಜಿಲ್ಲಾಡಳಿತ, ಬಾದಾಮಿ ತಾಲೂಕು ಬಾಚನಗುಡ್ಡ ಬಳಿ ಇರುವ 21 ಎಕರೆ ಸರ್ಕಾರಿ ಭೂಮಿ ಹಾಗೂ ಇತರೆ 60 ಎಕರೆ ಭೂಮಿಯನ್ನು ಪಟ್ಟದಕಲ್ಲ ಗ್ರಾಮ ಸ್ಥಳಾಂತರಿಸಲು ಗುರುತಿಸಿದೆ. ಆದರೆ, ಭೂಸ್ವಾಧೀನ, ಪಟ್ಟದಕಲ್ಲನಲ್ಲಿ ಸದ್ಯ ಇರುವ ಮನೆಗಳಿಗೆ ಪರಿಹಾರ, ಪುನರ್ವಸತಿ ಹೀಗೆ ಹಲವು ಕಾರ್ಯ ಕೈಗೊಳ್ಳಲು ಸಮಗ್ರ ಯೋಜನಾ ವರದಿ ಸಿದ್ಧಗೊಳ್ಳಬೇಕಿದೆ. ಇದೆಲ್ಲ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಬೇಕಾಗಬಹುದೆಂದು ಗ್ರಾಮಸ್ಥರ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ. ಸ್ಥಳೀಯ ಮಟ್ಟದಲ್ಲಿ ಮೂಲ ಸೌಲಭ್ಯ ಕಲ್ಪಿಸಿದರೆ, ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಖುಷಿಯಿಂದ ಮರಳಬಹುದು. ಇಲ್ಲವಾದರೆ ಇಲ್ಲಿನ ಸೌಲಭ್ಯಗಳ ದುಸ್ಥಿತಿಗೆ ಮರಗುತ್ತಲೇ ಹೋಗಬೇಕಾಗುತ್ತದೆ.