ಧೂಮಪಾನ ಮಾಡುವವರಲ್ಲಿ ಶೇ. 83ರಷ್ಟು ಜನರು ಹೃದ್ರೋಗದ ಅಪಾಯವನ್ನು ಹೊಂದಿರುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಗಳು ಭಾರತೀಯರಲ್ಲಿ ಧೂಮಪಾನದ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬುದನ್ನು ದೃಢಪಡಿಸಿವೆ.
Advertisement
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುಲ್ಯಾನ್ಸೆಟ್ ವರದಿಯ ಪ್ರಕಾರ ಈಗ ಗ್ರಾಮೀಣ ಪ್ರದೇಶಗಳಲ್ಲಿ ಹೃದ್ರೋಗಗಳ ಪ್ರಕರಣಗಳು ಹೆಚ್ಚುತ್ತಿವೆ. ಪುರುಷರಲ್ಲಿ ಶೇ. 40 ಮತ್ತು ಮಹಿಳೆಯರಲ್ಲಿ ಶೇ. 56ರಷ್ಟು ಹೃದ್ರೋಗ ಪ್ರಕರಣಗಳು ಹೆಚ್ಚಾಗಿವೆ. ತಮಿಳುನಾಡು, ಕರ್ನಾಟಕ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಹೃದ್ರೋಗಗಳಿಂದ ಹೆಚ್ಚಿನ ಸಾವು ಸಂಭವಿಸಿದೆ. ಇದೇ ವೇಳೆ ಈಶಾನ್ಯ ಭಾರತ, ಪಶ್ಚಿಮ ಬಂಗಾಲ, ಛತ್ತೀಸ್‌ಗಢದಲ್ಲಿ ಪಾರ್ಶ್ವವಾಯುವಿನಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ.
2016ರ ಡಬ್ಲ್ಯುಎಚ್‌ಒ ವರದಿ ಹೇಳುವಂತೆ, ನಗರ ಪ್ರದೇಶಗಳಲ್ಲಿ ಶೇ. 58ರಷ್ಟು ವೈದ್ಯರು ವೈದ್ಯಕೀಯ ಪದವಿಗಳನ್ನು ಹೊಂದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಕೇವಲ ಶೇ. 19ರಷ್ಟಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಂಕಿ ಅಂಶಗಳ ಪ್ರಕಾರ ಗ್ರಾಮದ ಶೇ. 8ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಶೇ. 61ರಷ್ಟು ಕೇಂದ್ರಗಳಲ್ಲಿ ಒಬ್ಬ ವೈದ್ಯರು ಮಾತ್ರ ಇ¨ªಾರೆ. ಹೃದ್ರೋಗ ಪ್ರಕರಣಗಳು ಮತ್ತು ಸಾವು ಹೆಚ್ಚಾಗಲು ಹಲವಾರು ಕಾರಣಗಳಿದ್ದು ಇವುಗಳಲ್ಲಿ ಬಡತನ, ಧೂಮಪಾನ ಹಾಗೂ ಆರೋಗ್ಯ ಸೌಲಭ್ಯಗಳು ಮತ್ತು ಸಲಹೆಯ ಕೊರತೆ ಸೇರಿವೆ. ಕೋವಿಡ್ ಅವಧಿಯಲ್ಲಿ ಹೆಚ್ಚಳ
ಕೋವಿಡ್ ಅವಧಿಯಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳು ಶೇ. 20ರಷ್ಟು ಹೆಚ್ಚಾಗಿವೆ. ಹೃದ್ರೋಗಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಕಂಡು ಬಂದ ಬಳಿಕ ಅನೇಕ ಜನರು ಕೋವಿಡ್ ಭಯದಿಂದ ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಿದ್ದಾರೆ. ಇದು ಅವರ ಆರೋಗ್ಯದ ಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿದೆ ಎಂದು ತಜ್ಞರು ಹೇಳುತ್ತಾರೆ.
Related Articles
Advertisement
- ಚಳಿಗಾಲದಲ್ಲಿ ಗೋಧಿ ಬ್ರೆಡ್ ಬದಲಿಗೆ ರಾಗಿ ಅಥವಾ ಅವುಗಳ ಹಿಟ್ಟಿನಿಂದ ಮಾಡಿದ ಬ್ರೆಡ್ ಸೇವಿಸಬೇಕು. ಮಾವು, ಬಾಳೆ ಹಣ್ಣು, ಚಿಕ್ಕು, ಪಪ್ಪಾಯಿ, ಕಿವಿ, ಕಿತ್ತಳೆ ಮುಂತಾದ ಕಡಿಮೆ ಸಿಹಿಯುಳ್ಳ ಹಣ್ಣುಗಳು, ಕಡಿಮೆ ಹುರಿದ ಮತ್ತು ಸಿಹಿ ವಸ್ತುಗಳು, ಉತ್ತಮ. ನಿಮ್ಮ ಹಸಿವುಗಿಂತ ಶೇ. 20ರಷ್ಟು ಕಡಿಮೆ ತಿನ್ನಿ.
- ಸ್ಥೂಲಕಾಯವು ಹೃದ್ರೋಗಗಳಿಗೆ ಪ್ರಮುಖ ಕಾರಣ. ಪ್ರತೀದಿನ 45 ನಿಮಿಷ ವ್ಯಾಯಾಮ ಮಾಡಿ. ಫಿಟೆ°ಸ್ ಅನ್ನು ಮಟ್ಟಕ್ಕೆ ತರಲು ಪ್ರಯತ್ನಿಸಿ. ಒಂದರಿಂದ ಒಂದೂವರೆ ಕಿ.ಮೀ. ದೂರ ಹೋಗಬೇಕಾದರೆ ಆದಷ್ಟು ಕಾಲ್ನಡಿಗೆಯಲ್ಲಿಯೇ ಹೋಗಿ.
- ಪ್ರತೀದಿನ ಕನಿಷ್ಠ 7 ಗಂಟೆಗಳ ನಿದ್ರೆ ಅಗತ್ಯ. ಬೇಗನೆ ಮಲಗುವುದು ಮತ್ತು ಬೇಗನೆ ಎದ್ದೇಳುವುದನ್ನು ರೂಢಿಸಿಕೊಳ್ಳಬೇಕು. ರಾತ್ರಿ ಗಂಟೆ 10ರಿಂದ ಬೆಳಗ್ಗೆ 6ರ ವರೆಗೆ ನಿದ್ರೆ ಮಾಡಲು ಸೂಕ್ತ ಸಮಯ.
- ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು ಉತ್ತಮ. ಧೂಮಪಾನದಿಂದ ಅದರ ಹೊಗೆ ಅಪಧಮನಿಗಳ ಒಳಪದರವನ್ನು ದುರ್ಬಲಗೊಳಿಸುತ್ತದೆ.
-ಒತ್ತಡವು ಹೃದಯ ಕಾಯಿಲೆಯ ಪ್ರಕರಣಗಳನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯು ಸಾಬೀತುಪಡಿಸಿದೆ. ಇದು ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಸಾಧ್ಯವಾದಷ್ಟು ಮನಸ್ಸಿನ ಮೇಲೆ ಒತ್ತಡ ಬೀಳದಂತೆ ಜಾಗ್ರತೆ ವಹಿಸಿ.