Advertisement

ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪ

05:25 PM Jun 20, 2021 | Team Udayavani |

ಅಪ್ಪ ಬಾಲ್ಯ ಕಾಲದಲ್ಲಿ ಶಿಸ್ತುಸಂಸ್ಕಾರಗಳ ಕಲಿಕೆಯ ಸಂವಾಹಕ ಶಕ್ತಿ. ಯೌವನದ ಸಂದಭ೯ದಲ್ಲಿ ಆತ್ಮಸಾಕ್ಷಿಯನ್ನು ಪ್ರಜ್ವಲಗೊಳಿಸುವ ದಿವ್ಯಶಕ್ತಿ. ಗೃಹಸ್ಥ, ನಿವ೯ಹಣೆಯ ವೇಳೆ ಸರಿ-ತಪ್ಪುಗಳನ್ನು ಗುರುತಿಸಿ ವಿವೇಚನೆ ಹೊಳೆಸುವ ಹೊಂಬೆಳಕು.

Advertisement

ಎಲ್ಲಕ್ಕಿಂತ ಹೆಚ್ಚಾಗಿ ಹೊಸಕಾಲವನ್ನು ಹಾದುಹೋಗುವುದಕ್ಕೆ ಬೇಕಾದ ಸಾಮಥ್ಯ೯ ದಾಟಿಸುವ ಚೈತನ್ಯ ಅಪ್ಪ. ಭಾವುಕತೆಯ ಕಣ್ಣಲ್ಲಿ ಅಥೈ೯ಸುವಾಗ ಅಪ್ಪನ ಆ ವ್ಯಕ್ತಿತ್ವದ ಅಗಾಧತೆಯ ಸಮಗ್ರತೆ ತಿಳಿವಿಗೆಟಕುವುದಿಲ್ಲ. ಅಪ್ಪ ಎಂಥದ್ದೇ ಬಿಕ್ಕಟ್ಟಿನ ಸಂದಭ೯ ಎದುರಾದರೂ ನ್ಯಾಯಯುತ ಮಾಗ೯ ಬಿಟ್ಟುಕೊಡಬಾರದು ಎಂಬ ಪ್ರಜ್ಞೆ ಮಕ್ಕಳೊಳಗೆ ಸಮ್ಮಿಳಿತಗೊಳಿಸುತ್ತಾನೆ. ಈ ಮೂಲಕ ಆತ್ಮವಿಶ್ವಾಸ, ನೈತಿಕ ಸ್ಥೈರ್ಯ ಜೊತೆಯಾಗುತ್ತವೆ.

ಅಪ್ಪನ ವ್ಯಕ್ತಿತ್ವವನ್ನು ಪದಗಳ ಪುಂಜದೊಳಗೆ ಪೋಣೆಸೋದು ಕಷ್ಟ. ಅಪ್ಪ ಜೊತೆಯಲ್ಲಿದ್ದರೆ ಅದೇನೋ  ಹೇಳತೀರದ ಭದ್ರತೆಯ ಭಾವ. ನೂರಾರು ಕಷ್ಟಗಳನ್ನು ಎದೆಯಲ್ಲೇ ಬಚ್ಚಿಟ್ಟುಕೊಂಡು ನಗುತ್ತಲೇ ಇರುವವನು ಅಪ್ಪ. ನನ್ನ ಆಸೆಗಳಿಗೆ ಮತ್ತು ಕನಸ್ಸುಗಳಿಗೋಸ್ಕರ ಮಗಳಿಗೇನೂ ಕಮ್ಮಿ ಇಲ್ಲದಂತೆ ಬೆಳೆಸಿದವರು.

ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪ… ಇವರ ಪ್ರೀತಿ ಮುಂದೆ ಬೇರೆಲ್ಲವೂ ಶೂನ್ಯವೆನಗೆ…

 

Advertisement

ದಿವ್ಯಶ್ರೀ,

ಅಂತಿಮ ಬಿಎ, ಪತ್ರಿಕೋದ್ಯಮ

ವಿವಿ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next