ಹಳೇಬೀಡು: ವಿಶ್ವ ಭೂಪಟದಲ್ಲಿ ಹೆಸರು ಮಾಡಿರುವ ವಿಶ್ವ ಪ್ರಸಿದ್ಧ ಹೊಯ್ಸಳೇಶ್ವರದೇವಾಲಯ ಕೊರೊನಾ 2ನೇ ಅಲೆಯಿಂದಾಗಿ ಕೇಂದ್ರ ಪುರಾತತ್ವ ಇಲಾಖೆ ಆದೇಶದ ಮೇರೆಗೆ ಏ.15ರಿಂದ ಮೇ 15ರವರೆಗೆ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗುತ್ತದೆ. ದಿನಂಪ್ರತಿ ಹೊಯ್ಸಳೇಶ್ವರ ದೇವಾಲಯಕ್ಕೆ ದೇಶವಿದೇಶಗಳಿಂದ ಸಾವಿರಾರು ಮಂದಿ ದೇವಾಲಯಕ್ಕೆ ಭೇಟಿ ನೀಡಿ ಹೊಯ್ಸಳರ ಕಾಲದ ಶಿಲ್ಪ ಕಲಾಸೌಂದರ್ಯ ಸವಿದು ಹಿಂದಿರುಗುತ್ತಿದ್ದರು.
ಆದರೆ,ದೇವಾಲಯ ಬಾಗಿಲು ಏ.15ರಿಂದ ಬಂದ್ ಆಗಿರುವ ಕಾರಣ ಪ್ರವಾಸಿಗರಿಲ್ಲದೇ ಬಿಕೋಎನ್ನುತ್ತಿದೆ. ದೇವಾಲಯವನ್ನೇ ನಂಬಿ ಜೀವನಸಾಗಿಸುತ್ತಿದ್ದ ಹೋಟೆಲ್ ವ್ಯಾಪಾರಿಗಳು, ಫೋಟೋವ್ಯಾಪಾರಿಗಳು, ವಿಗ್ರಹ ಕೆತ್ತನೆ ಶಿಲ್ಪಿಗಳು, ಕಾಫಿ, ಟೀ, ಹಣ್ಣು ಹಾಗೂ ಜ್ಯೂಸ್ ಸೆಂಟರ್‌ಗಳುವ್ಯಾಪಾರವಿಲ್ಲದೇ ತಲೆ ಮೇಲೆ ಕೈಹೊತ್ತು ಕೂರಬೇಕಾದ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ.
ಮೊದಲ ಬಾರಿ ಕೊರೊನಾ ಸೋಂಕು ಹರಡಿದ್ದಸಂದರ್ಭದಲ್ಲಿ ದಾನಿಗಳು ಜನಪ್ರತಿನಿಧಿಗಳು ಮುಖಂಡರು ಸಹಾಯ ಹಸ್ತ ಚಾಚಿದ್ದರು.ಇದರಿಂದಾಗಿ ಹೇಗೋ ಜೀವನ ಸಾಗುತ್ತಿತ್ತು. ಆದರೆ,ಈಗ ಯಾವ ಸಹಾಯವೂ ಇಲ್ಲದೇ ಇರುವುದರಿಂದ ಒಂದು ತಿಂಗಳು ಏನು ಮಾಡಬೇಕು ಎಂಬುದೇ ಗೊತ್ತಾಗದೇ ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ವಿಗ್ರಹ ಕೆತ್ತನೆಯ ಶಿಲ್ಪಿಗಳು.
ಪಾರ್ಕಿಂಗ್ ಬಿಡ್ಡುದಾರಿಗೆ ನಷ್ಟ: ದೇವಾಲಯಕ್ಕೆದಿನಂಪ್ರತಿ ಬರುವ ಪ್ರವಾಸಿಗರ ವಾಹನಗಳಪಾರ್ಕಿಂಗ್ ಹರಾಜು ವ್ಯವಸ್ಥೆಯಿಂದ ಒಂದಷ್ಟುಆದಾಯ ನೋಡುತ್ತಿದ್ದ ಪಾರ್ಕಿಂಗ್ ಬಿಡ್ಡುದಾರರು,ಈಗ ನಷ್ಟ ಅನುಭವಿಸಬೇಕಾಗಿದೆ. ಲಕ್ಷಾಂತರಹಣವನ್ನು ಮುಂಗಡವಾಗಿ ನೀಡಿ ಪಾರ್ಕಿಂಗ್‌ಟೆಂಡರ್ ಮಾಡಿಕೊಂಡಿದ್ದವರ ಸ್ಥಿತಿಚಿಂತಾಜನಕವಾಗಿದೆ.
ಆದ್ದರಿಂದ ಬಿಡ್‌ರದ್ದುಗೊಳಿಸಬೇಕು ಎಂದು ಪಾರ್ಕಿಂಗ್ ಟೆಂಡರ್‌ದಾರ ಎಚ್.ಪರಮೇಶ್, ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಮಾರ್ಗದರ್ಶಕರ ಬದುಕು ಅತಂತ್ರ:ಹೊಯ್ಸಳೇಶ್ವರ ದೇವಾಲಯವನ್ನೇ ನಂಬಿ ಬದುಕುಸಾಗಿಸುತ್ತಿದ್ದ ಸುಮಾರು 20ಕ್ಕೂ ಹೆಚ್ಚುಮಾರ್ಗದರ್ಶಕರ ಬದುಕು ಅತಂತ್ರ ಸ್ಥಿತಿಯಾಗಿದೆ.ಬದಲಿ ಉದ್ಯೋಗ ಮಾಡಬೇಕಾದ ಅನಿವಾರ್ಯತೆಮಾರ್ಗದರ್ಶಕರದ್ದಾಗಿದೆ. ಇಲ್ಲದಿದ್ದರೆ ಬೇರೆವಿಧಿಯಿಲ್ಲದಂತಾಗಿದೆ ಎನ್ನುತ್ತಾರೆ ಮಾರ್ಗದರ್ಶಕಪ್ರೇಮ್‌ಕುಮಾರ್.