Advertisement

ಆಗ ವಿಶ್ವ ವಿಖ್ಯಾತ ಕ್ರೀಡಾಂಗಣಗಳು ಈಗ ಕ್ವಾರಂಟೈನ್‌, ಚಿಕಿತ್ಸಾ ಕೇಂದ್ರಗಳು!

12:59 AM Jul 05, 2020 | Sriram |

ಕೋವಿಡ್‌ ವೈರಸ್‌ ಮಹಾಮಾರಿ ವಿಶ್ವವನ್ನೇ ಬಂಧಿಯಾಗಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಇದೀಗ ವಿವಿಧ ರಾಜ್ಯಗಳ ಸರಕಾರಕ್ಕೆ ಕ್ರೀಡಾಂಗಣಗಳ ಬಳಕೆ ಅನಿವಾರ್ಯವಾಗುತ್ತಿದೆ.

Advertisement

ವಿಶ್ವಖ್ಯಾತ ಕ್ರೀಡಾಂಗಣಗಳಾದ ಮುಂಬಯಿಯ ವಾಂಖೆಡೆ ಸೇರಿದಂತೆ ದೇಶದಲ್ಲಿ ಒಟ್ಟು ಎಂಟು ಕ್ರೀಡಾಂಗಣಗಳು ಇದೀಗ ಕೋವಿಡ್‌ ಪೀಡಿತರ ಕ್ವಾರಂಟೈನ್‌ ಕೇಂದ್ರಗಳಾಗಿ ಬದಲಾಗಿವೆ. ದೇಶದ ಅಂತಹ ಅಗ್ರ ಕ್ರೀಡಾಂಗಣಗಳ ಪರಿಚಯ ಇಲ್ಲಿದೆ.

ವಾಂಖೆಡೆ ಕ್ರೀಡಾಂಗಣ, ಮಂಬಯಿ
ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು ಹೀಗಾಗಿ ಅಲ್ಲಿನ ಸರಕಾರ ಖ್ಯಾತ ಕ್ರಿಕೆಟ್‌ ಕ್ರೀಡಾಂಗಣವಾದ ಮುಂಬೈನ ವಾಂಖೆಡೆಯನ್ನು ಕ್ವಾರಂಟೈನ್‌ ಕೇಂದ್ರವಾಗಿ ಮಾರ್ಪಾಡು ಮಾಡಲು ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಜತೆಗೆ ಚರ್ಚೆ ನಡೆಸಿದೆ.
ನ್ಯಾಷನಲ್‌ ನ್ಪೋರ್ಟ್ಸ್ ಕಾಂಪ್ಲೆಕ್ಸ್‌
ಆಫ್ ಇಂಡಿಯಾ, ಮುಂಬಯಿ

ವರ್ಲಿ ಎಂಬಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆಯನ್ನು ಹೊಂದಿರುವ ಸ್ಟೇಡಿಯಂ ಇದು. ಸದ್ಯ ಕೋವಿಡ್‌ ಶಂಕಿತರನ್ನು ಇಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡುವಂತಹ ಕೆಲಸಗಳು ನಡೆಯುತ್ತಿವೆ.

ಜವಾಹರ್‌ಲಾಲ್‌ ನೆಹರೂ ಸ್ಟೇಡಿಯಂ, ದಿಲ್ಲಿ
ಹೊಸದಿಲ್ಲಿಯಲ್ಲಿರುವ ಜವಾಹರ್‌ಲಾಲ್‌ ಕ್ರೀಡಾಂಗಣವೂ ಕ್ವಾರಂಟೈನ್‌ ಕೇಂದ್ರಗಳಾಗಿ ಬದಲಾವಣೆಯಾಗುತ್ತಿದೆ. ದೆಹಲಿಯಲ್ಲಿ ಹಲವಾರು ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದ ನಂತರ ಸರಕಾರ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಅನ್ನು ಸಂಪರ್ಕಿಸಿದೆ. ಕ್ವಾರಂಟೈನ್‌ ಕೇಂದ್ರವಾಗಿ ಪರಿವರ್ತಿಸಲು ಅನುಮತಿ ನೀಡಬೇಕೆಂದು ಕೇಳಿಕೊಂಡಿದೆ. ಕ್ರೀಡಾಂಗಣವನ್ನು ಕೋವಿಡ್‌ ಚಿಕಿತ್ಸಾ ಕೇಂದ್ರಗಳಾಗಿ ಬದಲಾಯಿಸಲು ಸಿದ್ಧತೆ ನಡೆಸಲಾಗಿದೆ.2010ರಲ್ಲಿ ಈ ಕ್ರೀಡಾಂಗಣ ಕಾಮನ್‌ವೆಲ್ತ್‌ ಕ್ರೀಡಾ ಕೂಟಕ್ಕೆ ಆತಿಥ್ಯ ವಹಿಸಿದ ಪ್ರಮುಖ ಕ್ರೀಡಾಂಗಣ ಗಳಲ್ಲಿ ಒಂದಾಗಿತ್ತು.

ಇಂದಿರಾ ಗಾಂಧಿ ಆ್ಯತ್ಲಿಟಿಕ್ಸ್‌ ಸ್ಟೇಡಿಯಂ, ಗುವಾಹಟಿ
ಗುವಾಹಟಿಯಲ್ಲಿರುವ ಅತ್ಯಂತ ಜನಪ್ರಿಯ ಕ್ರೀಡಾಂಗಣವೇ ಇಂದಿರಾಗಾಂಧಿ ಆ್ಯತ್ಲಿಟಿಕ್‌ ಸ್ಟೇಡಿಯಂ, ಸದ್ಯ ಕ್ವಾರಂಟೈನ್‌ ಕೇಂದ್ರವಾಗಿ ಬದಲಾಗಿದೆ. ಮೂಲಗಳ ಪ್ರಕಾರ ಈ ಕ್ರೀಡಾಂಗಣವನ್ನು ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. ಸಾವಿರಕ್ಕೂ ಅಧಿಕ ಮಂದಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಕ್ರೀಡಾಂಗಣದಲ್ಲಿ ಯಾವಾಗಲೂ ಆ್ಯತ್ಲಿಟಿಕ್‌ ಕೂಟಗಳು ಹೆಚ್ಚಾಗಿ ನಡೆಯುತ್ತವೆ. 2007ರಲ್ಲಿ ಈ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿತ್ತು. ಈ ಕ್ರೀಡಾಂಗಣದ ವಿಶೇಷತೆ ಏನೆಂದರೆ ಐಎಸ್‌ಎಲ್‌ (ಇಂಡಿಯನ್‌ ಸೂಪರ್‌ ಲೀಗ್‌) ಫ‌ುಟ್‌ಬಾಲ್‌ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆತಿಥ್ಯವಹಿಸಿದೆ.

Advertisement

ಇಂದಿರಾ ಗಾಂಧಿ ಕ್ರೀಡಾಂಗಣ, ವಿಜಯವಾಡ
ಒಟ್ಟು 25 ಸಾವಿರ ಜನರ ಸಾಮರ್ಥ್ಯ ಹೊಂದಿರುವ ಇಂದಿರಾ ಗಾಂಧಿ ಕ್ರೀಡಾಂಗಣ ಆಂಧ್ರಪ್ರದೇಶ ಕ್ರಿಕೆಟ್‌ ಸಂಸ್ಥೆ ಒಡೆತನದಲ್ಲಿದೆ. ಈ ಕ್ರೀಡಾಂಗಣದಲ್ಲಿ 2002ರಲ್ಲಿ ಭಾರತ -ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ಏಕೈಕ ಏಕದಿನ ಪಂದ್ಯ ನಡೆದಿತ್ತು. ಇದಕ್ಕೂ ಮೊದಲು 1997ರಲ್ಲಿ ಇಂಗ್ಲೆಂಡ್‌ ಹಾಗೂ ಪಾಕಿಸ್ಥಾನ ಮಹಿಳಾ ತಂಡಗಳ ನಡುವೆ ಏಕದಿನ ಕ್ರಿಕೆಟ್‌ ಕದನ ನಡೆದಿತ್ತು. ಈ ಎರಡು ಪಂದ್ಯಗಳನ್ನು ಬಿಟ್ಟರೆ ಈ ಕ್ರೀಡಾಂಗಣದಲ್ಲಿ ಬೇರ್ಯಾವ ಮಹತ್ವದ ಪಂದ್ಯಗಳು ನಡೆದಿಲ್ಲ. ಸದ್ಯ ಈ ಕ್ರೀಡಾಂಗಣವನ್ನು ತರಕಾರಿ ಮಾರುಕಟ್ಟೆಯಾಗಿ ಮಾರ್ಪಾಟು ಮಾಡಲಾಗಿದೆ.

ಡುಮುರ್ಜಲಾ ಸ್ಟೇಡಿಯಂ, ಪಶ್ಚಿಮ ಬಂಗಾಲ
ಹೌರಾ ಎಂಬ ಸ್ಥಳದಲ್ಲಿ ಡುಮುರ್ಜಲಾ ಕ್ರೀಡಾಂಗಣವನ್ನು ಹೊಸದಾಗಿ ನಿರ್ಮಿಸಲಾಗಿದೆ. ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ಅವರು ಈ ಕ್ರೀಡಾಂಗಣವನ್ನು ಲಾಕ್‌ಡೌನ್‌ ಅವಧಿಯಲ್ಲಿ ಕೋವಿಡ್‌ ವೈರಸ್‌ ರೋಗಿಗಳ ಅನುಕೂಲಕ್ಕಾಗಿ ಬಳಸಿದ್ದಾರೆ ಅದರಂತೆ ಇಲ್ಲಿ 150 ರೋಗಿಗಳಿಗೆ ಕೋವಿಡ್‌ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಸುಭಾಷ್‌ಚಂದ್ರ ಬೋಸ್‌ ಒಳಾಂಗಣ
ಕ್ರೀಡಾಂಗಣ, ಪಶ್ಚಿಮ ಬಂಗಾಲ
ಕೋವಿಡ್‌ ಪೀಡಿತರ ನೆರವಿಗಾಗಿ ಈ ಕ್ರೀಡಾಂಗಣದಲ್ಲಿ ರಕ್ತ ನಿಧಿ ಕೇಂದ್ರವನ್ನು 1 ತಿಂಗಳು ತೆರೆಯಲಾಗಿತ್ತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್‌
ತೆಲಂಗಾಣದ ಗಚ್ಚಿಬೌಲಿ ಕ್ರೀಡಾಂಗಣವನ್ನು ಇಲ್ಲಿನ ಸರಕಾರ ಕೋವಿಡ್‌ ಕ್ವಾರಂಟೈನ್‌ ಕೇಂದ್ರವಾಗಿ ಬದಲಾಗಿಸಿದೆ. ಅದರಂತೆ ಕ್ರೀಡಾಂಗಣದ ಒಳ ಪ್ರವೇಶಿಸಲು ಹಾಗೂ ಹೊರಹೋಗಲು ಪ್ರತ್ಯೇಕವಾದ ಆಗಮನ ಹಾಗೂ ನಿರ್ಗಮನ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಏರ್ಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next