Advertisement

ಕೋವಿಡ್ ನಿಂದ ಬಳಲಿದ ಜಗತ್ತಿಗೆ ಟೋಕಿಯೋ ಒಲಿಂಪಿಕ್ಸ್ ಆಶಾವಾದದ ಸಂದೇಶವಾಗಲಿ : ಟೆಡ್ರೊಸ್

12:28 PM Jul 21, 2021 | Team Udayavani |

ಟೋಕೊಯೋ, ಜಪಾನ್ : ಜಗತ್ತು  ಕೋವಿಡ್ 19 ಸೋಂಕನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದ ಕಾರಣದಿಂದಾಗಿ ಟೋಕಿಯೋ ಒಲಂಪಿಕ್ 2020 ನನ್ನು ಮುಂದೂಡಬೇಕಾಗಿ ಬಂತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

Advertisement

ಟೋಕಿಯೊದ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನದಲ್ಲಿ ಮಾತನಾಡಿದ  ಟೆಡ್ರೊಸ್, ಕೋವಿಡ್ ಸಾಂಕ್ರಾಮಿಕದಿಂದ ಬಳಲಿದ ಜಗತ್ತಿಗೆ ಒಲಿಂಪಿಕ್ಸ್ 2020 ‘ಆಶಾವಾದದ ಸಂದೇಶ’ವಾಗಲಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಇಂದೂ ಮುಂದುವರೆದ ಸ್ವಾಮೀಜಿಗಳ ಸಿಎಂ ಭೇಟಿ: ಕಾವೇರಿ ನಿವಾಸದಲ್ಲಿ ಕಾವೇರಿದ ಚರ್ಚೆ

ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಇಡೀ ಜಗತ್ತು ಬಳಲಿದೆ. ನಾಲ್ಕು ಮಿಲಿಯನ್ ಗಿಂತಲೂ ಅಧಿಕ ಮಂದಿ ಸೋಂಕಿನಿಂದ ವಿಶ್ವದಾದ್ಯಂತ ಮೃತ ಪಟ್ಟಿದ್ದಾರೆ. ಇನ್ನೂ ಸೋಂಕು ಮುಗಿದಿಲ್ಲ. ನಿತ್ಯ ನಿರಂತರವಾಗಿ ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಕಳೆದ ವರ್ಷದ ಸಾವಿನ ಸಂಖ್ಯೆಗಿಂತ ಈ ವರ್ಷ ದುಪ್ಪಟ್ಟಾಗಿದೆ. ಇದು ಎಚ್ಚರಿಕೆ ಕರೆ ನಮಗೆ ಎಂದು ಅವರು ಹೇಳಿದ್ದಾರೆ.

ಸೋಂಕು ಇರುವವರೆಗೆ ಭೀತಿ ಇದ್ದೇ ಇರುತ್ತದೆ. ಸೋಂಕು ಮುಕ್ತಾಯವಾಗಿದೆ, ಸೋಂಕು ಇಲ್ಲ ಎಂದು ಅಲ್ಲಗಳೆಯುವವರು ಮೂರ್ಖರು ಎಂದು ಹೇಳಿದ್ದಾರೆ.

Advertisement

ಕೇವಲ 10 ದೇಶಗಳಲ್ಲಿ 75 ಪ್ರತಿಶತದಷ್ಟು ಲಸಿಕೆಗಳನ್ನು ನೀಡಲಾಗಿದೆ. 2022 ರ ಮಧ್ಯಭಾಗದಲ್ಲಿ ವಿಶ್ವದ ಪ್ರತಿ ದೇಶದಲ್ಲಿ 70 ಪ್ರತಿಶತದಷ್ಟು ಜನಸಂಖ್ಯೆಗೆ ಲಸಿಕೆ ನೀಡಬೇಕೆಂದು ಅವರು ಕರೆ ನೀಡಿದರು.

“ಈ ಒಲಿಂಪಿಕ್ಸ್ ಕ್ರೀಡಾ ಕೂಟ ಜಗತ್ತನ್ನು ಒಂದುಗೂಡಿಸುವ ಕ್ಷಣವಾಗಲಿ, ಮತ್ತು ಸಾಂಕ್ರಾಮಿಕ ರೋಗವನ್ನು ನಾವು ಒಟ್ಟಿಗೆ ಕೊನೆಗೊಳಿಸಬೇಕಾದ ಒಗ್ಗಟ್ಟನ್ನು ಮತ್ತು ದೃಢ ನಿಶ್ಚಯವನ್ನು ಈ ಕ್ರೀಡಾಕೂಟದ ಮುಖೇನ ಮಾಡಬೇಕಿದೆ” ಎಂದು ಅವರು ಹೇಳಿದರು. ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :  ಹಿಂಸಾಚಾರದ ವಿರುದ್ಧ ನಾಳೆ ರಾಜ್ ಘಾಟ್ ನಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಭಟನೆ : ಘೋಷ್

Advertisement

Udayavani is now on Telegram. Click here to join our channel and stay updated with the latest news.

Next