Advertisement

ಕಣ್ಮರೆಯಾಗುತ್ತಿಹ ಕಾನನಕ್ಕೆ ನೇತ್ರಾ ಜಲವಿತ್ತು ಪೋಷಿಸುವ ಸ್ಥಿತಿ ಬಂದೀತು ಎಚ್ಚರ!

07:21 PM Jun 05, 2020 | mahesh |

ಕಾನನ, ಕಾಡು, ವನ. ಅರಣ್ಯ ಎಂದೆಲ್ಲ ಕರೆಸಿಕೊಳ್ಳುವ ಈ ಅಡವಿಗೆ ಶತಮಾನದಿಂದಲೂ ಕಾಡುವ ಅತಿಯಾಸೆಯ ಕೈಗಳಿಂದ ಮುಕ್ತಿ ಸಿಕ್ಕಿಲ್ಲ.

Advertisement

ಹಗಲು-ಇರುಳೆನ್ನದೆ ತನ್ನ ಒಡಲ ಬಸಿಯುತ್ತಿರುವ ಶೂರರಿಗೆ ಕನಿಕರ ಬರಲಿಲ್ಲವಲ್ಲ ಎಂಬ ಕೋಪದ ಪ್ರತಿಬಿಂಬವೇ ಪ್ರಪಂಚದಲ್ಲಿ ನಡೆವ ನಡೆಯುತ್ತಿರುವ ಪ್ರಕೃತಿ ವಿಕೋಪಗಳು.

ಹವಾಮಾನದ ಏರಿಳಿತ, ನಡುಗುವ ಭೂಮಿ, ಒಮ್ಮೆಲೆ ಸುಳಿವಿಲ್ಲದೆ ಉಕ್ಕುವ ಜ್ವಾಲಾಮುಖಿ, ಕಾಡಿ ಕರಕಲು ಮಾಡುವ ಕಾಳ್ಗಿಚ್ಚು, ಬೇಡಿ ಅಂಗಲಾಚಿದರು ಬಾರದ ವರುಣ, ಸಾಕೆಂದರು ಎಂಬಂತೆ ಸುರಿಯುವ ವರ್ಷಧಾರೆ. ಇವುಗಳಿಗೆ ಕಿವಿಗೊಡದೆ. ತನ್ನ ತೂತು ಬಿದ್ದ ಕಿವಿಯ ಜೋಡಿಸಿಕೊಂಡು ಹೊರಟಿದ್ದಾನೆ ಬುದ್ದಿ ಜೀವಿ ಮಾನವ.

ಈ ಎಲ್ಲಾ ಶೋಚನಿಯತೆಯನ್ನು ಮನಗಂಡ ವಿಶ್ವಸಂಸ್ಥೆ 1974ರಂದು ಜೂನ್‌ನ 5ರಂದು ವಿಶ್ವ ಪರಿಸರ ದಿನವನ್ನಾಗಿ ಘೋಷಿಸಿತು. ಪರಿಸರವನ್ನು ರಕ್ಷಿಸುವ ಮತ್ತು ಪರಿಸರ ಕಾಳಜಿಯ ಬಗ್ಗೆ ಜಾಗೃತಿಯನ್ನು ಪ್ರೋತ್ಸಾಹಿಸುವ ದಿನವಾಗಿ ಆಚರೆಣೆಗೊಳ್ಳುತ್ತಾ ಬಂದಿದೆ. ಈ ಕಾರ್ಯಕ್ರಮವು 100ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಕವಾಗಿ ಆಚರಿಸಲ್ಪಡುವ ಸಾರ್ವಜನಿಕ ಪ್ರಭಾವದ ಜಾಗತಿಕ ವೇದಿಕೆಯಾಗಿ ಬೆಳೆದಿದೆ.

ಕಳೆದ ವರ್ಷವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾರತ ಸರಕಾರ “ಸೆಲ್ಫಿ ವಿತ್‌ ಸ್ಯಾಪ್ಲಿಂಗ್‌’ ಅಭಿಯಾನವನ್ನು ಪ್ರಾರಂಭಿಸಿತು. ಸಸಿ ನೆಡಲು ಮತ್ತು ಅದರೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲು ಜನರನ್ನು ಒತ್ತಾಯಿಸಿತ್ತು.

Advertisement

ಆದರೆ ಕಾರ್ಯಗಳು ಬಾರಿಯ ಛಾಯಾ ಚಿತ್ರಗಳಲ್ಲಿ ಜೀವಂತವಾಗಿದ್ದರೆ ಪ್ರಯೋಜನ ಇಲ್ಲ. ವಾಯು ಮಾಲಿನ್ಯತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು 1981ರಲ್ಲಿ ಜಾರಿಗೊಳಿಸಿತ್ತು. ಹೀಗೆ ಜಾರಿಯಾದ ಜಲರಕ್ಷಣಾ ಕಾಯ್ದೆ. ವನ್ಯ ಜೀವಗಳ ರಕ್ಷಣಾ ಕಾಯ್ದೆ. ಕಾಗದದ ಮೇಲೆ ಅಚ್ಚಾಗಿವೆ ಹೊರತು ಕಾರ್ಯರೂಪವಾಗುವ ಪ್ರಮಾಣ ತೀರಾ ಕಡಿಮೆ.

ವರದಿಗಳ ಪ್ರಕಾರ ವಿಶ್ವಾದ್ಯಂತ ಸುಮಾರು ಶೇ. 92 ಜನರು ಶುದ್ಧ ಗಾಳಿಯನ್ನು ಉಸಿರಾಡುವುದಿಲ್ಲ. ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಪ್ರತಿವರ್ಷ 5 ಟ್ರಿಲಿಯನ್‌ನಷ್ಟು ಹಣ ವಾಯು ಮಾಲಿನ್ಯ ನಿಯಂತ್ರಣಕ್ಕೆ ಖರ್ಚಾಗುತ್ತದೆ. ಓಝೋನ್‌ ಮಾಲಿನ್ಯವು 2030ರ ವೇಳೆಗೆ ಪ್ರಧಾನ ಬೆಳೆ ಇಳುವರಿಯನ್ನು ಶೇ. 26ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ. ಶುದ್ಧ ನೀರು ಸುಳಿವಿಲ್ಲದಾಗುವ ದಿನ ದೂರದಲ್ಲಿಲ್ಲ.

ಶುದ್ಧ ನೀರು ಗಾಳಿ ಶಾಂತಿಯುತ ವಾತಾವರಣ. ಹೊಟ್ಟೆ ತುಂಬುವಷ್ಟು ಅನ್ನ. ಉತ್ತಮ ಆರೋಗ್ಯಕ್ಕೆ ಹೊರಡುವ ಸಮಯ ಹತ್ತಿರವಾಗುತ್ತದೆ. ಇದು ಸಮೀಪಿಸುವಷ್ಟರಲ್ಲಿ ಎಚ್ಚೆತ್ತು. ನಮ್ಮ ಹುಟ್ಟು ಹಬ್ಬಕ್ಕೆ ಒಂದು ಸಸಿ ನೆಟ್ಟು ಮುಂದಿನ ಹುಟ್ಟುಹಬ್ಬದವರೆಗಾದರೂ ಅವನ್ನು ಪೋಷಿಸಿದರೆ ಸಾಕು ಅವು ನಮ್ಮನ್ನು ಜೀವನ ಪೂರ್ತಿ ಕಾಯುತ್ತವೆ.

ರಶ್ಮಿ ಎಂ. ಗೌರಿಪುರ, ಮಾನಸಗಂಗೋತ್ರಿ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next