Advertisement

ಇರುವುದೊಂದೇ ಭೂಮಿ

09:06 AM Jun 06, 2019 | sudhir |

ಪರಿಸರ ಎಂಬುದು ನಮ್ಮ ವಾಸಸ್ಥಳ ಮಾತ್ರವಲ್ಲದೆ, ಜೀವ ವೈವಿಧ್ಯಗಳಿಗೆ ಆಶ್ರಯ ನೀಡುವ ತಾಣವೂ ಹೌದು. ಹಸಿರೇ ಉಸಿರು ಎಂಬ ಧ್ಯೇಯ ಇಟ್ಟು ಕೊಂಡು ಬದುಕುತ್ತಿದ್ದ ಕಾಲಘಟ್ಟವೊಂದಿತ್ತು. ಆಗ ಪರಿಸರದಲ್ಲಿ ಸಸ್ಯಗಳೇ ಅಧಿಕವಾಗಿದ್ದು, ಜೀವ ಸಂಕುಲಗಳೂ ಹಸನಾಗಿದ್ದವು. ಆಹಾರ ಶೃಂಖಲೆಯೂ ನಿರಾಂತಂಕವಾಗಿ ಸಾಗುತ್ತಿತ್ತು. ಮನುಷ್ಯನ ಬುದ್ಧಿ, ಆಸೆಗಳು ಬೆಳೆಯುತ್ತಾ ಹೋದಂತೆ ಪರಿಸರವೂ ನಾಶವಾಗುತ್ತಾ ಹೋಯಿತು. ಮಣ್ಣು, ನೀರು, ಗಾಳಿ – ಹೀಗೆ ಪರಿಸರದ ಎಲ್ಲ ಅಂಶಗಳೂ ಮಾಲಿನ್ಯಕ್ಕೆ ತುತ್ತಾಗುತ್ತಿವೆ. ಇಂದು ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಮರಗಳು ತುಂಬಿದ್ದ ಜಾಗದಲ್ಲಿ ಕಟ್ಟಡಗಳು ವಿಜೃಂಭಿಸುತ್ತಿವೆ, ಕಾಡಿನಲ್ಲಿರಬೇಕಾಗಿದ್ದ ಪ್ರಾಣಿಗಳು ನಾಡಿಗೆ ಬಂದು ಮನುಷ್ಯರಿಗೆ ತೊಂದರೆ ನೀಡುತ್ತಿವೆ. ಆಹಾರ ಶೃಂಖಲೆಯೂ ಭಾಗಶಃ ಮುರಿದೇ ಹೋಗಿದೆ. ಈ ಪರಿಸ್ಥಿತಿಯಲ್ಲಿ ಪರಿಸರವನ್ನು ಸಂರಕ್ಷಿಸುವುದು ನಮ್ಮ ಹೊಣೆಯಲ್ಲ: ಇಂದಿನ ಜವಾಬ್ದಾರಿಯಾಗಿದೆ.

Advertisement

ಈ ಸಲದ ಥೀಮ್‌
ಯಾವುದರಿಂದ ಪರಿಸರಕ್ಕೆ ಅತೀ ಹೆಚ್ಚು ಹಾನಿಯಾಗುತ್ತಿದೆ ಎನ್ನುವುದನ್ನು ಮನಗಂಡು, ಅದರ ನಿವಾರಣೆಗೆ ಅನುಗುಣವಾಗಿ ಪ್ರತಿ ವರ್ಷ ಥೀಮ್‌ ರೂಪಿಸಲಾಗುತ್ತದೆ. ಈ ವರ್ಷ “ವಾಯು ಮಾಲಿನ್ಯ ಹೋಗಲಾಡಿಸೋಣ’ ಎಂಬ ಥೀಮ್‌ ಇದೆ. ವಿಶ್ವದೆಲ್ಲೆಡೆ ವಾಯು ಮಾಲಿನ್ಯವು ಗಂಭೀರ ಸಮಸ್ಯೆಯಾಗಿದ್ದು, ಭಾರತದಲ್ಲೂ ಇದರ ಪ್ರಭಾವ ತೀವ್ರವಾಗಿದೆ.

ದಿನದ ಮಹತ್ವ
ಮನುಷ್ಯನ ಅಭಿವೃದ್ಧಿಯಲ್ಲಿ ಪರಿಸರ ಸೊರಗಿ ಹೋಗುತ್ತಿರುವ ವಿಚಾರ ದಶಕಗಳ ಹಿಂದೆಯೇ ತಜ್ಞರ ಗಮನಕ್ಕೆ ಬಂದಿದೆ. ಅಳಿಯುವ ಪರಿಸರವನ್ನು ಹೇಗೆ ಉಳಿಸಬಹುದು, ಅದಕ್ಕಾಗಿ ನಾವು ಕೈಗೊಳ್ಳಬೇಕಾದ ಕಾರ್ಯಗಳ ಬಗೆಗೆ ತೀರ್ಮಾನ ಕೈಗೊಳ್ಳವುದು ಹಾಗೂ ಪರಿಸರ ಸಂರಕ್ಷಣೆಗೆ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಇಂದು ಹೆಚ್ಚಿನ ಎಲ್ಲ ಸಾಮಾಜಿಕ ಸಂಘ ಸಂಸ್ಥೆಗಳೂ ಪರಿಸರ ದಿನವನ್ನಾಚರಿಸುತ್ತವೆ ಆದರೆ ಕೆಲವೊಂದು ಬಾರಿ ಒಂದೇ ದಿನಕ್ಕೆ ಸೀಮಿತವಾಗುವುದಿದೆ. ಹೀಗಾಗಿ, ದಿನಾಚರಣೆ ಅರ್ಥ ಕಳೆದುಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next