Advertisement
ಹೊಸಬರಿರಲಿ, ಹಳಬರಿರಲಿ ಯಾರಿಗೂ ಬೊಗಳದೆ, ಬೆದರಿಸದೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಈ ನಾಯಿಗಳು ಸದಾ ಕ್ರಿಯಾಶೀಲವಾಗಿರುತ್ತವೆ. ಪರ್ವತ ಶ್ರೇಣಿಯಲ್ಲಿ ಎತ್ತ ಹೋಗಬೇಕು ತಿಳಿಯದ ಪ್ರವಾಸಿಗರಿಗೆ ಅವು ಮಾರ್ಗದರ್ಶನ ಮಾಡುತ್ತವೆ. ನಡುವೆ ಬೇರೆ ಯಾರೇ ಸಿಕ್ಕರೂ ಅವರ ಜತೆ ಹೋಗದಿರುವುದು ಇವುಗಳ ವಿಶೇಷ. ಗೆಸ್ಟ್ ಹೌಸ್‌ನಲ್ಲಿರುವ ಅಡುಗೆ ಭಟ್ಟ ಇವುಗಳಿಗೆ ಅನ್ನ, ಆಹಾರ ನೀಡಿ ಪೋಷಣೆ ಮಾಡುತ್ತಿದ್ದಾರೆ. ವಿಶೇಷ ವೆಂದರೆ ಇವುಗಳು ಯಾವುದೇ ಹೊರದೇಶದ ಅಥವಾ ಯಾವುದೇ ವಿಶೇಷ ತಳಿಗಳಲ್ಲ. ಅವುಗಳ ಚುರುಕು, ನಿಯತ್ತಿಗೆ ಪ್ರವಾಸಿಗರು ಮಾರು ಹೋಗಿದ್ದಾರೆ.
Related Articles
Advertisement
ನಾವೂ ನಂಬಿರಲಿಲ್ಲ: ಕೊಡಚಾದ್ರಿಯಲ್ಲಿ ಸೂರ್ಯೋದಯ ನೋಡಬೇಕೆಂಬ ಆಸೆಯಿಂದ ಗೆಸ್ಟ್ ಹೌಸ್‌ನಲ್ಲಿ ಉಳಿದಿದ್ದೆವು. ಬೆಳಗ್ಗೆ 4.30ಕ್ಕೆ ಬೆಟ್ಟ ಏರಲು ಸಿದ್ಧವಾದೆವು. ಆದರೆ ಅಷ್ಟು ಕತ್ತಲಲ್ಲಿ ಹೇಗೆ ಹೋಗೋದು ತಿಳಿಯಲಿಲ್ಲ. ಬ್ಯಾಟರಿ, ಮೊಬೈಲ್ ಲೈಟ್ ಹಾಕಿಕೊಂಡರೂ ಕಾಣುತ್ತಿರಲಿಲ್ಲ. ಆಗ ಅಲ್ಲಿನ ಅಡುಗೆ ಭಟ್ಟರು ಈ ನಾಯಿಗಳಿಗೆ ಒಂದೆರಡು ಬಿಸ್ಕೆಟ್ ಹಾಕಿ ಅವೇ ಕರೆದುಕೊಂಡು ಹೋಗುತ್ತವೆ ಎಂದರು. ಈ ನಾಯಿಗಳು ತಮ್ಮ ನಿಯತ್ತು ಪ್ರದರ್ಶಿಸಿದವು. ಕಾಡು ಪ್ರಾಣಿಗಳಿಂದ ರಕ್ಷಣೆ ನೀಡಿದ್ದಲ್ಲದೇ ಬೆಟ್ಟ ಏರಲು ಸಹಾಯ ಮಾಡಿದವು ಎನ್ನುತ್ತಾರೆ ಪ್ರವಾಸಿಗ ನವೀನ.
ಶರತ್ ಭದ್ರಾವತಿ