Advertisement
ಸದ್ಯ ನ್ಯೂಜಿಲ್ಯಾಂಡ್ 0.743 ಹಾಗೂ ಪಾಕಿಸ್ಥಾನ 0.036 ರನ್‌ರೇಟ್ ಹೊಂದಿವೆ. 4ನೇ ಹಾಗೂ ಕೊನೆಯ ಸ್ಥಾನವನ್ನು ಈಗಾಗಲೇ ಕಳೆದೆರಡು ಬಾರಿಯ ರನ್ನರ್ ಅಪ್ ನ್ಯೂಜಿಲ್ಯಾಂಡ್ ಗಟ್ಟಿಗೊಳಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪಾಕಿಸ್ಥಾನಕ್ಕೂ ಇಂಥದೊಂದು ಅವಕಾಶ ಒದಗಿ ಬರಬೇಕಾದರೆ ಎರಡು ಅಸಾಧ್ಯ ಹಾಗೂ ಕಠಿನ ಲೆಕ್ಕಾಚಾರಗಳಿವೆ. ರನ್‌ರೇಟ್‌ನಲ್ಲಿ ನ್ಯೂಜಿಲ್ಯಾಂಡನ್ನು ಮೀರಬೇಕಾದರೆ ಇಂಗ್ಲೆಂಡ್ ವಿರುದ್ಧ ಪಾಕಿಸ್ಥಾನ 287 ರನ್ ಅಂತರದ ಜಯಭೇರಿ ಮೊಳಗಿ ಸಬೇಕು. ಅಂದರೆ ಪಾಕ್ 300 ರನ್ ಗಳಿಸಿದರೆ ಇಂಗ್ಲೆಂಡನ್ನು 13 ರನ್ನಿಗೆ ನಿರ್ಬಂಧಿಸಬೇಕು! ಅಥವಾ ಇಂಗ್ಲೆಂಡ್ ನೀಡಿದ ಗುರಿಯನ್ನು 284 ಎಸೆತ ಬಾಕಿ ಇರುವಾಗಲೇ, ಅಂದರೆ ಕೇವಲ 16 ಎಸೆತಗಳಲ್ಲಿ (2.4 ಓವರ್) ಮುಟ್ಟಬೇಕು! ಇವೆಲ್ಲವನ್ನೂ ಅಸಾಧ್ಯ ಎಂದೇ ಭಾವಿಸಬೇಕಾಗುತ್ತದೆ.
ಪಾಕಿಸ್ಥಾನ ಈ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಳೆದೆ ರಡು ಪಂದ್ಯಗಳಲ್ಲಿ ಒಂದಿಷ್ಟು ಚೇತೋ ಹಾರಿ ಪ್ರದರ್ಶನ ನೀಡಿದ ಕಾರಣ ಕಿಂಚಿತ್ ಭರವಸೆ ಉಳಿಸಿಕೊಂಡಿದೆ, ಅಷ್ಟೇ.
Related Articles
Advertisement
ಇಂಗ್ಲೆಂಡ್‌ಗೆ ಹೋಲಿಸಿದರೆ ಕೋಲ್ಕ ತಾದ ಸ್ಲೋ ಆ್ಯಂಡ್ ಸ್ಪಿನ್ ಫ್ರೆಂಡ್ಲಿ ಟ್ರ್ಯಾಕ್‌ನಲ್ಲಿ ಪಾಕಿಸ್ಥಾನ ಹೆಚ್ಚಿನ ಅನು ಭವ ಹೊಂದಿದೆ. ಆದರೆ ಇಂಗ್ಲೆಂಡ್ ವಿರುದ್ಧ ಪವಾಡಸದೃಶ ಪ್ರದರ್ಶನ ಸಾಧ್ಯವಿಲ್ಲ. ಒಂದು ವೀರೋ ಚಿತ ಗೆಲುವು ಪಾಕಿಸ್ಥಾನದ ನಿರ್ಗಮನ ವನ್ನು ಸಂತೃಪ್ತಗೊಳಿಸೀತು, ಅಷ್ಟೇ.
ಇಂಗ್ಲೆಂಡ್‌ಗೆ ಎರಡೇ ಜಯಇಂಗ್ಲೆಂಡ್ ಈ ಕೂಟದಲ್ಲಿ ಸಾಧಿ ಸಿದ್ದು ಎರಡೇ ಗೆಲುವು. ಎರಡೂ ಸಾಮಾನ್ಯ ತಂಡಗಳ ವಿರುದ್ಧ ದಾಖಲಾದದ್ದು. ಮೊದಲ ಜಯ ಸಾಧಿಸಿದ್ದು ಬಾಂಗ್ಲಾದೇಶದ ವಿರುದ್ಧ. ಅನಂತರ ಸರಿಸುಮಾರು ಒಂದು ತಿಂಗಳ ಅವಧಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಬಂದಿತು. ಪಾಕಿ ಸ್ಥಾನವನ್ನು ಮಣಿಸಿದರೆ ಗೆಲುವಿನ ಸಂಖ್ಯೆ ಮೂರಕ್ಕೇರಲಿದೆ, ಅಷ್ಟೇ. ಆಗ ಒಂದು “ದೊಡ್ಡ ತಂಡ’ವನ್ನಾದರೂ ಮಣಿಸಿದ ಹೆಗ್ಗಳಿಕೆ ಜಾಸ್ ಬಟ್ಲರ್ ಪಡೆಯದ್ದಾಗಲಿದೆ.