Advertisement
ಬೆಂಗಳೂರಿನಲ್ಲಿ ಗುರು ವಾರ ನಡೆಯಲಿರುವ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡ್‌ಗೆ ಎದು ರಾಗುವ ತಂಡ ಶ್ರೀಲಂಕಾ. ಸೆಮಿ ಫೈನಲ್ ಪ್ರವೇಶಿಸಬೇಕಾದರೆ ಕಿವೀಸ್‌ಗೆ ಇಲ್ಲಿ ಗೆಲುವು ಅನಿವಾರ್ಯ. ಇದನ್ನು ಗೆದ್ದರೆ 10 ಅಂಕಗಳೊಂದಿಗೆ ಕೇನ್ ವಿಲಿಯಮ್ಸನ್ ಬಳಗದ ನಾಕೌಟ್ ಬಹುತೇಕ ಪಕ್ಕಾ ಆಗಲಿದೆ. ಮುಂದೆ ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನಕ್ಕೂ 10 ಅಂಕಗಳ ಸಾಧ್ಯತೆ ಇರುವುದರಿಂದ ನ್ಯೂಜಿಲ್ಯಾಂಡ್‌ನ ಗೆಲುವಿನ ಅಂತರ ಕೂಡ ದೊಡ್ಡದಾಗಿರಬೇಕು. ಸದ್ಯ ಕಿವೀಸ್ ರನ್‌ರೇಟ್ ಈ 2 ತಂಡಗಳಿಗಿಂತ ಉತ್ತಮವಾಗಿದೆ (0.398). ಅಕಸ್ಮಾತ್ ಸೋತರೆ ನ್ಯೂಜಿ ಲ್ಯಾಂಡ್‌ನ ನಾಕೌಟ್ ಸಾಧ್ಯತೆ ಕ್ಷೀಣಿಸಲಿದೆ. ಆಗ ಪಾಕಿಸ್ಥಾನಕ್ಕೆ ಅವಕಾಶ ತೆರೆಯ ಲ್ಪಡುತ್ತದೆ. ಆದರೆ ಬಾಬರ್ ಪಡೆ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವುದು ಮುಖ್ಯ.
ಶ್ರೀಲಂಕಾ ಈಗಾಗಲೇ ಕೂಟದಿಂದ ನಿರ್ಗಮಿಸಿರುವುದರಿಂದ ಈ ಫಲಿ ತಾಂಶ ದಿಂದ ಅದಕ್ಕೆ ಯಾವುದೇ ಲಾಭ ವಿಲ್ಲ. ಈ ಕೂಟದಲ್ಲಿ ದ್ವೀಪರಾಷ್ಟ್ರದ ಕ್ರಿಕೆಟ್ ಪ್ರತಿಷ್ಠೆ ಸಂಪೂರ್ಣ ಮುಕ್ಕಾ ಗಿದೆ. ಇದನ್ನು ಸ್ವಲ್ಪವಾದರೂ ಮರಳಿ ಗಳಿಸಬೇಕಾದರೆ ಅದು ನ್ಯೂಜಿ ಲ್ಯಾಂಡ್ ಹಾದಿಗೆ ಮುಳ್ಳಾಗಿ ಪರಿ ಣಮಿಸಬೇಕು. ಇದು ಸಾಧ್ಯವೇ? ಮತ್ತೆ ಮಳೆ ಭೀತಿ
ನ್ಯೂಜಿಲ್ಯಾಂಡ್‌ಗೆ ಈ ಬಾರಿ ಅದೃಷ್ಟ ಕೈಕೊಡುತ್ತಿರುವ ಸೂಚನೆಯೊಂದು ಲಭಿಸಿದೆ. ಇಲ್ಲವಾದರೆ ಅದು ಬೆಂಗ ಳೂರಿನಲ್ಲೇ ನಡೆದ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ 400 ರನ್ ಬಾರಿಸಿಯೂ ಸೋಲುತ್ತಿರಲಿಲ್ಲ. ಇಲ್ಲಿ ಕಿವೀಸ್‌ಗೆ ಅಡ್ಡಿಯಾಗಿ ಪರಿ ಣಮಿಸಿದ್ದು ಮಳೆ ಮತ್ತು ಫಖರ್ ಜಮಾನ್. ಇದರಿಂದ ಡಕ್‌ವರ್ತ್-
ಲೂಯಿಸ್ ನಿಯಮದಂತೆ ವಿಲಿಯಮ್ಸನ್ ಪಡೆ 21 ರನ್ನುಗಳಿಂದ ಸೋಲಬೇಕಾಯಿತು.
ಗುರುವಾರದ ಪಂದ್ಯಕ್ಕೂ ಮಳೆ ಭೀತಿ ಇರುವುದು ನ್ಯೂಜಿಲ್ಯಾಂಡ್‌ಗೆ
ಮತ್ತೆ ತಲೆಬಿಸಿ ಉಂಟುಮಾಡಿದೆ.
Related Articles
ಚಿನ್ನಸ್ವಾಮಿ ಟ್ರ್ಯಾಕ್ ಬ್ಯಾಟಿಂಗ್‌ಗೆ ಹೆಸರುವಾಸಿ ಎಂಬುದು ಸಾಬೀ ತಾಗಿದೆ. ಮೊದಲು ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತ ದಾಖಲಿಸುವುದು ಅಸಾಧ್ಯವೇನಲ್ಲ. ಇದಕ್ಕೆ ಬೇಕಾದ ಎಲ್ಲ ನಮೂನೆಯ ಬ್ಯಾಟಿಂಗ್ ಅಸ್ತ್ರ ಗಳೂ ನ್ಯೂಜಿಲ್ಯಾಂಡ್ ಬತ್ತಳಿಕೆ ಯಲ್ಲಿವೆ. ರಚಿನ್ ರವೀಂದ್ರ, ಕಾನ್ವೇ, ವಿಲಿಯಮ್ಸನ್, ಮಿಚೆಲ್, ಚಾಪ್‌ಮನ್, ಫಿಲಿಪ್ಸ್, ಸ್ಯಾಂಟ್ನರ್… ಹೀಗೆ ಸಾಗುತ್ತದೆ. ಇದರಿಂದಾಗಿಯೇ ಪಾಕ್ ವಿರುದ್ಧ 6ಕ್ಕೆ 401 ರನ್ ಪೇರಿಸಲು ಸಾಧ್ಯವಾಗಿತ್ತು.
ಆದರೆ ಬೌಲಿಂಗ್ ಕೈಕೊಟ್ಟ ಕಾರಣ ನ್ಯೂಜಿಲ್ಯಾಂಡ್ ಸೋಲು ಕಾಣ ಬೇಕಾಯಿತು. 25.3 ಓವರ್‌ಗಳಲ್ಲಿ ಪಾಕಿಸ್ಥಾನ ಒಂದೇ ವಿಕೆಟಿಗೆ 200 ರನ್ ಪೇರಿಸಿ ಪಂದ್ಯವನ್ನು ಗೆದ್ದಿತು. ಈ ಅವಧಿಯಲ್ಲಿ ನ್ಯೂಜಿಲ್ಯಾಂಡ್ ಇನ್ನೊಂದೆರಡು ವಿಕೆಟ್ ಉರುಳಿ ಸಿದ್ದೇ ಆದಲ್ಲಿ ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು. ಆಗ ಒತ್ತಡ ವಿಲ್ಲದೆ ಲಂಕೆಯನ್ನು ಎದುರಿಸ ಬಹುದಿತ್ತು.
Advertisement
ನ್ಯೂಜಿಲ್ಯಾಂಡ್ ಸಮಸ್ಯೆಯೆಂದರೆ ಗಾಯಾಳುಗಳದ್ದು. ಇದರಿಂದ ಕೆಲವು ಪ್ರಮುಖ ಆಟಗಾರರಿಗೆ ಹನ್ನೊಂದರ ಬಳಗದಲ್ಲಿ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಿಲ್ಲ. ನಾಯಕ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್ ಇವರಲ್ಲಿ ಪ್ರಮುಖರು. ಹಾಗೆಯೇ ಕೆಲವರ ಫಾರ್ಮ್ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ. ಉದಾಹರಣೆಗೆ ಡೇವನ್ ಕಾನ್ವೇ. ಇಂಗ್ಲೆಂಡ್ ಎದುರಿನ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಕಾನ್ವೇ, ಅನಂತರ ಅರ್ಧ ಶತಕ ಕೂಡ ಗಳಿಸಿಲ್ಲ.
ಶ್ರೀಲಂಕಾ ಈ ಕೂಟದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ ನಿಜ. ಆದರೆ ಕೊನೆಯ ಪ್ರಯತ್ನವೆಂಬಂತೆ, ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ನ್ಯೂಜಿಲ್ಯಾಂಡ್ ಮೇಲೆರಗಬಾರ ದೆಂದೇನೂ ಇಲ್ಲ.