Advertisement
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಒಂದು ಹಂತದಲ್ಲಿ 96 ರನ್ನಿಗೆ 6 ವಿಕೆಟ್ ಉರುಳಿಸಿಕೊಂಡು ಚಡಪಡಿಸುತ್ತಿತ್ತು. ಆದರೆ ಧನಂಜಯ ಡಿ ಸಿಲ್ವ ಅವರ ಸಾಹಸದಿಂದ 47.4 ಓವರ್‌ಗಳಲ್ಲಿ 213ರ ತನಕ ಸಾಗುವಲ್ಲಿ ಯಶಸ್ವಿಯಾಯಿತು. ಜವಾಬಿತ್ತ ನೆದರ್ಲೆಂಡ್ಸ್ 40 ಓವರ್‌ಗಳಲ್ಲಿ 192ಕ್ಕೆ ಆಲೌಟ್ ಆಯಿತು.
ಲೋಗನ್ ವಾನ್ ಬೀಕ್ ಮತ್ತು ಬಾಸ್ ಡೆ ಲೀಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. ಇಬ್ಬರೂ 3 ವಿಕೆಟ್ ಉಡಾಯಿಸಿದರು. ಪಥುಮ್ ನಿಸ್ಸಂಕ ಪಂದ್ಯದ ಮೊದಲ ಎಸೆದಲ್ಲೇ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಸಮ ರವೀರ (1) ಮತ್ತು ಅಸಲಂಕ (2) ಕೂಡ ಬೇಗನೇ ಪಎವಿಲಿಯನ್ ಸೇರಿ ಕೊಂಡರು. ದಿಮುತ್ ಕರುಣಾರತ್ನೆ 33, ಕುಸಲ್ ಮೆಂಡಿಸ್ 10 ರನ್ನಿಗೆ ಆಟ ಮುಗಿಸಿದರು. 96 ರನ್ನಿಗೆ 6 ವಿಕೆಟ್ ಉರುಳಿತು.
Related Articles
Advertisement
ನಾಯಕನ ವ್ಯರ್ಥ ಹೋರಾಟನೆದರ್ಲೆಂಡ್ಸ್ನ ಆರಂಭಿಕರಿಬ್ಬರನ್ನೂ ಶೂನ್ಯಕ್ಕೆ ಕಳುಹಿಸಿದ ಶ್ರೀಲಂಕಾ ಭರ್ಜ ರಿಯಾಗಿಯೇ ತಿರುಗೇಟು ನೀಡಿತು. ಆದರೆ ನಾಯಕ ಸ್ಕಾಟ್ ಎಡ್ವರ್ಡ್ಸ್, ಮಧ್ಯಮ ಕ್ರಮಾಂಕದ ಆಟಗಾರರಾದ ಬಾಸ್ ಡಿ ಲೀಡ್ ಮತ್ತು ವೆಸ್ಲಿ ಬರೇಸಿ ಲಂಕಾ ಬೌಲರ್‌ಗಳ ಮೇಲೆ ಮುಗಿಬಿದ್ದರು. ನೆದರ್ಲೆಂಡ್ಸ್ ಗೆಲುವಿ ನತ್ತ ಮುನ್ನುಗ್ಗಿ ಬಂತು. ಆದರೆ ಕೊನೆಯಲ್ಲಿ ನಾಯಕನ ಬೆಂಬಲಕ್ಕೆ ಯಾರೂ ಲಭಿಸಲಿಲ್ಲ. ಸ್ಕಾಟ್ ಎಡ್ವರ್ಡ್ಸ್ 67 ರನ್ ಬಾರಿಸಿ ಅಜೇಯರಾಗಿ ಉಳಿದರು. ಬರೇಸಿ 52 ಮತ್ತು ಡಿ ಲೀಡ್ 41 ರನ್ ಮಾಡಿದರು. ಲಂಕಾ ಪರ ಮಹೀಶ್ ತೀಕ್ಷಣ 3, ವನಿಂದು ಹಸರಂಗ 2 ವಿಕೆಟ್ ಉರುಳಿಸಿದರು. ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-47.4 ಓವರ್‌ಗಳಲ್ಲಿ 213 (ಧನಂಜಯ 93, ಕರುಣಾರತ್ನೆ 33, ತೀಕ್ಷಣ 28, ಹಸರಂಗ 20, ವಾನ್ ಬೀಕ್ 26ಕ್ಕೆ 3, ಡಿ ಲೀಡ್ 42ಕ್ಕೆ 3, ಶಕಿಬ್ ಜುಲ್ಫಿಕರ್ 48ಕ್ಕೆ 2). ನೆದರ್ಲೆಂಡ್ಸ್-40 ಓವರ್‌ಗಳಲ್ಲಿ 192 (ಎಡ್ವರ್ಡ್ಸ್ 67, ಬರೇಸಿ 52, ಡಿ ಲೀಡ್ 41, ತೀಕ್ಷಣ 31ಕ್ಕೆ 3, ಹಸರಂಗ 53ಕ್ಕೆ 2).
ಪಂದ್ಯಶ್ರೇಷ್ಠ: ಧನಂಜಯ ಡಿ ಸಿಲ್ವ.