Advertisement

World Cup Qualifiers; ವೆಸ್ಟ್ ಇಂಡೀಸ್ ಗೆ ಸೋಲಿನ ಶಾಕ್ ನೀಡಿದ ಜಿಂಬಾಬ್ವೆ

08:44 PM Jun 24, 2023 | Team Udayavani |

ಹರಾರೆ : ಇಲ್ಲಿ ಶನಿವಾರ ನಡೆದ ವಿಶ್ವಕಪ್‌ ಅರ್ಹತಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಜಿಂಬಾಬ್ವೆ ತಂಡ ವೆಸ್ಟ್ ಇಂಡೀಸ್ ಗೆ ಸೋಲುಣಿಸಿ ಮುಂದಿನ ಹಂತಕ್ಕೆ ನಗೆಯಲು ಸಿದ್ಧವಾಗಿದೆ.

Advertisement

ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಜಿಂಬಾಬ್ವೆ 49.5 ಓವರ್ ಗಳಲ್ಲಿ 268 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ನಾಯಕ ಕ್ರೇಗ್ ಎರ್ವಿನ್ 47, ರಜಾ 68, ರಿಯಾನ್ ಬರ್ಲ್ 50 ರನ್ ಕೊಡುಗೆ ಸಲ್ಲಿಸಿದರು.

ಜವಾಬಿತ್ತ ವೆಸ್ಟ್ ಇಂಡೀಸ್ 44.4 ಓವರ್‌ಗಳಲ್ಲಿ 233 ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ದಯನೀಯ ಸೋಲು ಅನುಭವಿಸಿತು. ತವರಿನಲ್ಲಿ ಜಿಂಬಾಬ್ವೆ ಅಬ್ಬರದ ಆಟಕ್ಕೆ ಮಂಕಾಯಿತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರು ಜಿಂಬಾಬ್ವೆ ತಂಡದ ಗೆಲುವನ್ನು ಸಂಭ್ರಮಿಸಿದರು. 2 ವಿಕೆಟ್ ಪಡೆದ ಸಿಕಂದರ್ ರಜಾ ಪಂದ್ಯಶ್ರೇಷ್ಠ ಎನಿಸಿಕೊಂಡರು.

ವಿಂಡೀಸ್ ಪರ ಕೈಲ್ ಮೇಯರ್ಸ್ 56, ನಾಯಕ ಶಾಯ್ ಹೋಪ್30, ನಿಕೋಲಸ್ ಪೂರನ್ 34, ರೋಸ್ಟನ್ ಚೇಸ್ 44 ರನ್ ಗಳಿಸಿ ಔಟಾದರು. ಯಾರೊಬ್ಬರ ಆಟವು ಗೆಲುವನ್ನು ತಂದು ಕೊಡುವಲ್ಲಿ ವಿಫಲವಾಯಿತು.

ಜಿಂಬಾಬ್ವೆ ಆಡಿದ 3 ಪಂದ್ಯಗಳಲ್ಲಿ ಮೂರೂ ಗೆದ್ದು 6 ಅಂಕಗಳೊಂದಿಗೆ ಗ್ರೂಪ್ ಎ ನಲ್ಲಿ ಆಗ್ರ ಸ್ಥಾನ ದಲ್ಲಿದೆ. ವಿಂಡೀಸ್ ಎರಡನೇ ಸ್ಥಾನಕ್ಕೆ ಜಾರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next