Advertisement

ಪಾಕ್‌ ವಿಶ್ವಕಪ್‌ ಸಂಭಾವ್ಯ ತಂಡ ಪ್ರಕಟ

10:09 PM Apr 05, 2019 | mahesh |

ಲಾಹೋರ್‌: ಪಾಕಿಸ್ಥಾನದ ವಿಶ್ವಕಪ್‌ ಕ್ರಿಕೆಟ್‌ ಸಂಭಾವ್ಯ ಆಟಗಾರರ ಯಾದಿ ಪ್ರಕಟಗೊಂಡಿದೆ. ಇಲ್ಲಿನ 23 ಆಟಗಾರರನ್ನು ಎ. 15 ಮತ್ತು 16ರಂದು ಲಾಹೋರ್‌ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆಯಲಿರುವ ಫಿಟ್‌ನೆಸ್‌ ಟೆಸ್ಟ್‌ಗಾಗಿ ಆಹ್ವಾನಿಸಲಾಗಿದೆ. ಎ. 18ರಂದು 15 ಸದಸ್ಯರ ಅಂತಿಮ ಯಾದಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.

Advertisement

ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ವೈಟ್‌ವಾಶ್‌ ಅನುಭವಿಸುವ ಮೂಲಕ ಪಾಕ್‌ ವಿಶ್ವಕಪ್‌ ತಯಾರಿಗೆ ಭಾರೀ ಹಿನ್ನಡೆಯಾಗಿತ್ತು. ಈ ಸರಣಿಯಲ್ಲಿ ಮೊದಲ ಸಲ ಪಾಕ್‌ ತಂಡವನ್ನು ಪ್ರತಿನಿಧಿಸಿದ ಆಟಗಾರರೆಲ್ಲ ಸಂಭಾವ್ಯ ತಂಡದಲ್ಲಿದ್ದಾರೆ. ಜತೆಗೆ ಇನ್‌ಫಾರ್ಮ್ ಟೆಸ್ಟ್‌ ಆಟಗಾರ ಮೊಹಮ್ಮದ್‌ ಅಬ್ಟಾಸ್‌, ಶಾನ್‌ ಮಸೂದ್‌, ಮೊಹಮ್ಮದ್‌ ಹಸ್ನೆ„ನ್‌ ಕೂಡ ಸ್ಥಾನ ಪಡೆಸಿದ್ದಾರೆ. ಆದರೆ ಏಕದಿನದಲ್ಲಿ ವಿಫ‌ಲರಾದ ಸಾದ್‌ ಅಲಿ, ವಹಾಬ್‌ ರಿಯಾಜ್‌, ಉಮರ್‌ ಅಕ್ಮಲ್‌ ಅವರನ್ನು ಕೈಬಿಡಲಾಗಿದೆ.

ಎ. 23ರಂದು ಇಂಗ್ಲೆಂಡಿಗೆ ಪ್ರಯಾಣಿಸಲಿರುವ ಪಾಕಿಸ್ಥಾನ ತಂಡ, ಅಲ್ಲಿ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಪಾಕಿಸ್ಥಾನದ ಮೊದಲ ವಿಶ್ವಕಪ್‌ ಪಂದ್ಯ ಮೇ 31ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next