Advertisement
ಬ್ಯಾರಿ ಮಿಡ್ಲ್ಟನ್ (27ನೇ ನಿಮಿಷ) ಮತ್ತು ವಿಲ್ ಕಾಲ್ನನ್ (45ನೇ ನಿಮಿಷ) 2 ಗೋಲು ಬಾರಿಸಿ ಜೋಶ್ ತುಂಬಿದರು. 48ನೇ ನಿಮಿಷದಲ್ಲಿ ಪೀಲಟ್ ಮತ್ತೂಂದು ಗೋಲಿನೊಂದಿಗೆ ಪಂದ್ಯವನ್ನು ಸಮ ಬಲಕ್ಕೆ ತಂದರೂ ಮರು ನಿಮಿಷದಲ್ಲೇ ಹ್ಯಾರಿ ಮಾರ್ಟಿನ್ ಇಂಗ್ಲೆಂಡಿನ 3ನೇ ಗೋಲಿಗೆ ಸಾಕ್ಷಿಯಾದರು. ಈ ಮುನ್ನಡೆಯನ್ನು ಆಂಗ್ಲ ಪಡೆ ಕೊನೆಯ ತನಕವೂ ಉಳಿಸಿಕೊಂಡಿತು.2014ರ ವಿಶ್ವಕಪ್‌ನಲ್ಲಿ ಕಂಚು ಜಯಿಸಿದ್ದ ಆರ್ಜೆಂಟೀನಾ ಅನೇಕ ಅವಕಾಶಗಳನ್ನು ಕೈಚೆಲ್ಲಿ ಸೋಲನ್ನು ಹ್ವಾನಿಸಿಕೊಳ್ಳಬೇಕಾಯಿತು. ಜರ್ಮನಿ-ಬೆಲ್ಜಿಯಂ ನಡುವಿನ ಕ್ವಾರ್ಟರ್ ಫೈನಲ್ ವಿಜೇತ ತಂಡವನ್ನು ಇಂಗ್ಲೆಂಡ್ ಶನಿವಾರದ ಸೆಮಿಫೈನಲ್‌ನಲ್ಲಿ ಎದುರಿಸಲಿದೆ.
ದಿನದ ದ್ವಿತೀಯ ಕ್ವಾರ್ಟರ್ ಫೈನಲ್‌ನಲ್ಲಿ ಕಳೆದೆರಡು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಅಧಿಕಾರಯುತ ಪ್ರದರ್ಶನ ನೀಡಿ ಫ್ರಾನ್ಸ್‌ಗೆ 3-0 ಗೋಲುಗಳ ಸೋಲುಣಿಸಿತು. ಭಾರತ-ನೆದರ್ಲೆಂಡ್ ನಡುವಿನ ವಿಜೇತ ತಂಡವನ್ನು ಆಸೀಸ್ ಸೆಮಿಫೈನಲ್‌ನಲ್ಲಿ ಎದುರಿಸಲಿದೆ. ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯ ಪರ ಜೆರೆಮಿ ಹೇವಾರ್ಡ್ 4ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಬಳಿಕ 19ನೇ ನಿಮಿಷದಲ್ಲಿ ಬ್ಲೇಕ್ ಗೋವರ್, 37ನೇ ನಿಮಿಷದಲ್ಲಿ ಅರಾನ್ ಝಲೇವ್‌ಸ್ಕಿ ಮತ್ತೆರಡು ಗೋಲು ಬಾರಿಸಿದರು. ಈ ಮೂರೂ ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕವೇ ಬಂದವು. ಕಾಂಗರೂ ಅಬ್ಬರದ ಮುಂದೆ ಫ್ರೆಂಚರ ಯಾವ ತಂತ್ರವೂ ಫಲಿಸಲಿಲ್ಲ.