ವಾರ್ಸಾ: ಈ ವರ್ಷ ನಡೆಯಲಿರುವ ವಿಶ್ವಕಪ್ ಫುಟ್ ಬಾಲ್ ಟೂರ್ನಿಯ ಪ್ಲೇ ಆಫ್ ಹಂತದಲ್ಲಿ ರಷ್ಯಾ ವಿರುದ್ಧ ಸೆಣಸುವ ಪರಿಸ್ಥಿತಿ ನಿರ್ಮಾಣವಾದರೆ ಇದನ್ನು ತಿರಸ್ಕರಿಸುವುದಾಗಿ ಜೆಕ್ ಗಣರಾಜ್ಯ ಫುಟ್ ಬಾಲ್ ಸಂಸ್ಥೆ ತಿಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿದೆ. ಆದ್ದರಿಂದ ಪ್ಲೇ ಆಫ್ ನಲ್ಲಿ ಆ ದೇಶದ ತಂಡದೊಂದಿಗೆ ಆಡುವುದು ಸರಿಯಲ್ಲ ಎಂಬುದು ನಮ್ಮ ನಿರ್ಧಾರವಾಗಿದೆ ಎಂದು ಜೆಕ್ ಫುಟ್ ಬಾಲ್ ಸಂಸ್ಥೆ ತಿಳಿಸಿದೆ.
ಸ್ವೀಡನ್ ಮತ್ತು ಪೋಲೆಂಡ್ ಫುಟ್ ಬಾಲ್ ಸಂಸ್ಥೆಗಳು ಈಗಾಗಲೇ ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿ ರಷ್ಯಾ ವಿರುದ್ಧ ಆಡುವುದಿಲ್ಲ ಎಂದು ತಿಳಿಸಿವೆ.
ಇದನ್ನೂ ಓದಿ:ದ್ವಿತೀಯ ಟೆಸ್ಟ್ : ಗ್ರ್ಯಾಂಡ್‌ಹೋಮ್ ಶತಕ; ನ್ಯೂಜಿಲ್ಯಾಂಡ್ ಹೋರಾಟ
ವಿಶ್ವಕಪ್ ಪ್ಲೇ ಆಫ್ ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯ ಮಾರ್ಚ್ 24ರಂದು ಸ್ವೀಡನ್ ವಿರುದ್ಧ ಸ್ಟಾಕ್‌ಹೋಮ್‌ನಲ್ಲಿ ಆಡಲಿದೆ. ರಷ್ಯಾ ಅದೇ ದಿನ ಪೋಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯಗಳಲ್ಲಿ ಜೆಕ್ ಗಣರಾಜ್ಯ ಮತ್ತು ರಷ್ಯಾ ಗೆದ್ದರೆ ಪರಸ್ಪರ ಮುಖಾಮುಖಿಯಾಗಲಿವೆ.