ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರೋಚಕವಾಗಿ ಸಾಗುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ನೀಡಿದ 241 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ಆರಂಭದಲ್ಲಿ ಅಬ್ಬರಿಸಿದರೂ 3 ವಿಕೆಟ್ ಕಳೆದುಕೊಂಡಿದೆ.
7 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಅವರು ಶಮಿ ಎಸೆದ ಚೆಂಡನ್ನು ಕೊಹ್ಲಿ ಕೈಗಿತ್ತು ನಿರ್ಗಮಿಸಿದರು. 15 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ಬುಮ್ರಾ ಎಸೆದ ಚೆಂಡನ್ನು ರಾಹುಲ್ ಕೈಗಿತ್ತು ನಿರ್ಗಮಿಸಿದರು.
ಆ ಬಳಿಕ ಸ್ಮಿತ್ ಎಲ್ಬಿಡಬ್ಲ್ಯೂ ಮೂಲಕ ಔಟಾಗಿದ್ದು ವಿಶ್ವಕಪ್ ಫೈನಲ್ ನಂತಹ ಮಹತ್ವದ ಪಂದ್ಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.
ಬುಮ್ರಾ ಎಸೆದ ಆಫ್-ಕಟ್ಟಿಂಗ್ ನಿಧಾನಗತಿಯ ಚೆಂಡು ಲೆಗ್ ಸೈಡ್ ಆಡಲು ಬಯಸದ ಸ್ಮಿತ್ ಅವರ ಪ್ಯಾಡ್ ಗೆ ತಾಗಿತು. ಅಂಪಾಯರ್ ಔಟ್ ನೀಡಿದರು. ಆಸಕ್ತಿದಾಯಕರಾಗಿ ಸ್ಮಿತ್ ಅದನ್ನು ಪರಿಶೀಲಿಸಲಿಲ್ಲ. ಇನ್ನೊಂದು ಬದಿಯಲ್ಲಿದ್ದ ಹೆಡ್ ಜತೆ ಮಾತನಾಡಿ ಹೊರನಡೆದರು. ಬಾಲ್ ಎತ್ತರವು ನಿಜವಾಗಿಯೂ ಒಂದು ಪ್ರಶ್ನೆಯಾಗಿತ್ತು. ಆದರೆ ರಿಪ್ಲೇ ಇಂಪ್ಯಾಕ್ಟ್ ನಲ್ಲಿ ಔಟ್ ಆಫ್ ಸ್ಟಂಪ್ ಎಂದು ಕಂಡು ಬಂದಿತು.ಅನುಭವಿ ಆಟಗಾರ ಸ್ಮಿತ್ ಅದನ್ನು ಏಕೆ ಸರಿಯಾಗಿ ಏಕೆ ಪರಿಶೀಲಿಸಲಿಲ್ಲ? ಎಂದು ಹಲವರು ಪ್ರಶ್ನಿಸಿದ್ದಾರೆ.
ಆಸ್ಟ್ರೇಲಿಯ 16 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ.